'ಇಜ್ಞಾನ ಡಾಟ್ ಕಾಮ್' ಗೆ 10ನೇ ವರ್ಷಾಚರಣೆ ಸಂಭ್ರಮ
ಬೆಂಗಳೂರು, ಏಪ್ರಿಲ್ 28: ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಕುರಿತು ಮಾಹಿತಿಪೂರ್ಣ ಲೇಖನಗಳನ್ನು ಪ್ರಕಟಿಸುತ್ತ ಬಂದಿರುವ 'ಇಜ್ಞಾನ ಡಾಟ್ ಕಾಮ್' (www.ejnana.com) ಜಾಲತಾಣಕ್ಕೆ ಈಗ 10ವರ್ಷಗಳ ಸಂಭ್ರಮಕ್ಕೆ ತಯಾರಿ ನಡೆಸಿದೆ.
ಸಾಫ್ಟ್ ವೇರ್ ತಂತ್ರಜ್ಞ ಟಿ.ಜಿ ಶ್ರೀನಿಧಿ ಅವರು 2007ರಿಂದ ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಕುರಿತು ಮಾಹಿತಿಪೂರ್ಣ ಲೇಖನಗಳನ್ನು ಪ್ರಕಟಿಸುತ್ತ ಬಂದಿದ್ದಾರೆ. ಏಪ್ರಿಲ್ 28ಕ್ಕೆ ಒಂಬತ್ತು ವರ್ಷಗಳನ್ನು ಪೂರೈಸಲಿರುವ ಇಜ್ಞಾನ, ಹತ್ತನೆಯ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಲು ಹಲವು ಕಾರ್ಯಕ್ರಮಗಳನ್ನು ಯೋಜಿಸಿದೆ.
ಆ ಪೈಕಿ ಮೊದಲ ಕಾರ್ಯಕ್ರಮವನ್ನು 'ಇಜ್ಞಾನ ದಿನ'ವನ್ನಾಗಿ ಮೇ 8ರ ಭಾನುವಾರ ಆಯೋಜಿಸಲಾಗಿದೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆ ದಿನ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಪ್ರಾರಂಭ.

ತಂತ್ರಜ್ಞಾನ ಕ್ಷೇತ್ರದ ಇತ್ತೀಚಿನ ಆಗುಹೋಗುಗಳನ್ನು ಕುರಿತಾದ ಟಿ. ಜಿ. ಶ್ರೀನಿಧಿಯವರ ಕೃತಿ 'ಟೆಕ್ ಬುಕ್!' ಬಿಡುಗಡೆ, ಮೊಬೈಲಿನಲ್ಲಿ ವಿಜ್ಞಾನ-ತಂತ್ರಜ್ಞಾನ ಮಾಹಿತಿಯನ್ನು ಲಭ್ಯವಾಗಿಸುವ ಪ್ರಯತ್ನದ ಪರಿಚಯ ಹಾಗೂ ಇಜ್ಞಾನದ ಹತ್ತು ವರ್ಷಗಳ ಪಕ್ಷಿನೋಟ ಕಟ್ಟಿಕೊಡುವ ಸ್ಮರಣ ಸಂಚಿಕೆಯ ಬಿಡುಗಡೆ ಅಂದಿನ ಮುಖ್ಯ ಕಾರ್ಯಕ್ರಮಗಳು.
ಏನಿದು ಇಜ್ಞಾನ?
ವಿಜ್ಞಾನ - ತಂತ್ರಜ್ಞಾನ ವಿಷಯಗಳ ಸಂವಹನಕ್ಕಾಗಿ ಮೀಸಲಾಗಿರುವ ಕನ್ನಡ ಜಾಲತಾಣವೇ 'ಇಜ್ಞಾನ ಡಾಟ್ ಕಾಮ್' (www.ejnana.com). ಈ ಕ್ಷೇತ್ರಕ್ಕೆ ಸಂಬಂಧಪಟ್ಟ ಲೇಖನ, ಅಂಕಣ, ಸಂದರ್ಶನ, ಪುಸ್ತಕ ಪರಿಚಯ, ಸುದ್ದಿ ವಿಶ್ಲೇಷಣೆ ಮುಂತಾದ ಬರಹಗಳು ಇಜ್ಞಾನದಲ್ಲಿ ನಿಯಮಿತವಾಗಿ ಪ್ರಕಟವಾಗುತ್ತವೆ.
ಇಜ್ಞಾನದ ಉದ್ದೇಶವೇನು?
ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಆಗುಹೋಗುಗಳು ಎಲ್ಲರ ಮೇಲೂ ತಮ್ಮ ಪ್ರಭಾವ ಬೀರುತ್ತವೆ. ಈ ಕ್ಷೇತ್ರದ ಕುರಿತು ಸರಳ ಭಾಷೆಯಲ್ಲಿ ಮಾಹಿತಿ ನೀಡುವ ಮೂಲಕ ಜನಸಾಮಾನ್ಯರಿಗೆ ನೆರವಾಗುವುದು ಇಜ್ಞಾನದ ಉದ್ದೇಶ.

ಇಜ್ಞಾನ ದಿನ ಯಾಕೆ?
2007ರ ಏಪ್ರಿಲ್ 26ರಂದು ಪ್ರಾರಂಭವಾದ ಇಜ್ಞಾನ ಡಾಟ್ ಕಾಮ್ ಇದೀಗ ಒಂಬತ್ತು ವರ್ಷಗಳನ್ನು ಪೂರೈಸಿ ಹತ್ತನೆಯ ವರ್ಷಕ್ಕೆ ಕಾಲಿಟ್ಟಿದೆ. ಹತ್ತನೆಯ ವರ್ಷದ ಸಂಭ್ರಮವನ್ನು ವಿವಿಧ ಕಾರ್ಯಕ್ರಮಗಳೊಡನೆ ಆಚರಿಸುವ ಉದ್ದೇಶ ಇಜ್ಞಾನದ್ದು. ಈ ನಿಟ್ಟಿನಲ್ಲಿ ಮೇ 8ರ 'ಇಜ್ಞಾನ ದಿನ' ಮೊದಲ ಹೆಜ್ಜೆ. ಅಂದು ಬೆಳಿಗ್ಗೆ 10 ಗಂಟೆಗೆ (ಉಪಾಹಾರ 9:30ಕ್ಕೆ) ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದೆ. ಅಂದಿನ ಕಾರ್ಯಕ್ರಮದ ವಿವರ ಜೊತೆಗಿರುವ ಆಮಂತ್ರಣ ಪತ್ರದಲ್ಲಿದೆ.
ಇಜ್ಞಾನದ ಹಿಂದೆ ಯಾರಿದ್ದಾರೆ?
ಇಜ್ಞಾನದ ರೂವಾರಿ ಟಿ. ಜಿ. ಶ್ರೀನಿಧಿ. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಲೇಖಕರಾಗಿ ಗುರುತಿಸಿಕೊಂಡಿರುವ ಶ್ರೀನಿಧಿ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸಮಾಡುತ್ತಿದ್ದಾರೆ. ಅವರ ಏಳುನೂರಕ್ಕೂ ಹೆಚ್ಚು ಲೇಖನಗಳು, ಹನ್ನೆರಡು ಪುಸ್ತಕಗಳು ಈವರೆಗೆ ಪ್ರಕಟವಾಗಿದೆ. ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ಶ್ರೇಷ್ಠ ಲೇಖಕ' ಪುರಸ್ಕಾರವೂ ಅವರಿಗೆ ಲಭಿಸಿದೆ.
ಕಳೆದ ಒಂಬತ್ತು ವರ್ಷಗಳ ಪಯಣದಲ್ಲಿ ಇಜ್ಞಾನ ಡಾಟ್ ಕಾಮ್ ಜೊತೆಯಲ್ಲಿ ನಿಂತವರು ಅನೇಕ ಮಂದಿ. ಈ ಅವಧಿಯಲ್ಲಿ ಡಾ. ಪಿ. ಎಸ್. ಶಂಕರ್, ನಾಗೇಶ ಹೆಗಡೆ, ಟಿ. ಆರ್. ಅನಂತರಾಮು, ಡಾ. ಯು. ಬಿ. ಪವನಜ, ಶ್ರೀವತ್ಸ ಜೋಶಿ, ಬೇಳೂರು ಸುದರ್ಶನ, ಕೊಳ್ಳೇಗಾಲ ಶರ್ಮ,ಟಿ. ಎಸ್. ಗೋಪಾಲ್ ಸೇರಿದಂತೆ ಅನೇಕ ಮಹನೀಯರ ಲೇಖನಗಳನ್ನು ಪ್ರಕಟಿಸುವ ಅವಕಾಶ ಇಜ್ಞಾನಕ್ಕೆ ಒದಗಿಬಂತು.

ಇಜ್ಞಾನದ ಪ್ರಯೋಗಗಳಿಗೆ ಓದುಗರ - ಪತ್ರಿಕೆಗಳ - ಕನ್ನಡ ಜಾಲತಾಣಗಳ ಬೆಂಬಲವೂ ದೊಡ್ಡ ಪ್ರಮಾಣದಲ್ಲಿ ಲಭಿಸಿದೆ. ವಿಜಯವಾಣಿ, ವಿಜಯ ಕರ್ನಾಟಕ, ಪ್ರಜಾವಾಣಿ, ಕನ್ನಡಪ್ರಭ, ಜನಮಿತ್ರ ಮೊದಲಾದ ಪತ್ರಿಕೆಗಳಷ್ಟೇ ಅಲ್ಲದೆ ಒನ್‌ಇಂಡಿಯಾ ಕನ್ನಡ ಹಾಗೂ ಅವಧಿಯಂತಹ ಜಾಲತಾಣಗಳೂ ಇಜ್ಞಾನದ ಬಗ್ಗೆ ಬರೆದು ಪ್ರೋತ್ಸಾಹ ನೀಡಿವೆ.
ಮುಂದಿನ ಯೋಜನೆಗಳೇನು?: ಹತ್ತನೆಯ ವರ್ಷಕ್ಕೆ ಕಾಲಿಡುತ್ತಿರುವ ಇಜ್ಞಾನ ಕಂಪ್ಯೂಟರಿನಲ್ಲಷ್ಟೇ ಅಲ್ಲದೆ ಮೊಬೈಲ್ ಮೂಲಕವೂ ಓದುಗರನ್ನು ತಲುಪಲು ಸಜ್ಜಾಗಿದೆ. 'ಡೇಲಿಹಂಟ್' ಮೊಬೈಲ್ ಆಪ್ ಸಹಯೋಗದಲ್ಲಿ ಇಜ್ಞಾನದ ಬರಹಗಳು ಮೊಬೈಲ್ ಓದುಗರನ್ನು ತಲುಪುತ್ತಿವೆ. ಮಾಹಿತಿಯನ್ನು ಉಳಿಸಿಟ್ಟುಕೊಂಡು ಓದಬೇಕೆನ್ನುವವರಿಗಾಗಿ ಕಡಿಮೆ ಬೆಲೆಯ ಮೊಬೈಲ್ ಪುಸ್ತಕಗಳೂ ಸಿದ್ಧವಾಗಿವೆ.
ಸಂಪರ್ಕ
ಟಿ. ಜಿ. ಶ್ರೀನಿಧಿ
ಮೊಬೈಲ್: 98866 74001
ಇಮೇಲ್: [email protected]
ವೆಬ್: www.ejnana.com
-
Dr Rajkumar: ನಟ ಸಾರ್ವಭೌಮ, ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ ಬಗ್ಗೆ ಯಾರು ಏನಂದ್ರು, ಇಲ್ಲಿದೆ ವಿವರ -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್












Click it and Unblock the Notifications