ಈಜೀಪುರ ಅಪೂರ್ಣ ಮೇಲ್ಸೇತುವೆ ರಕ್ಷಿಸಬೇಕು; ಇದು ಬೆಂಗಳೂರಿನ ಸಂಪತ್ತು, ಸೋಷಿಯಲ್ ಮೀಡಿಯಾ ಟ್ರೆಂಡ್

ಬೆಂಗಳೂರು: ಬೆಂಗಳೂರಿನ ಈಜೀಪುರ ಮೇಲ್ಸೇತುವೆ ಯೋಜನೆಯು ಸುದೀರ್ಘ 8 ವರ್ಷಗಳಿ೦ದ ನಡೆಯುತ್ತಿದೆ. ಬೆಂಗಳೂರಿನ ಸುದೀರ್ಘ ಯೋಜನೆಗಳಲ್ಲಿ ಇದೂ ಸಹ ಒಂದಾಗಿದೆ. ಈ ಯೋಜನೆಯ ಬಗ್ಗೆ ಬೆಂಗಳೂರಿಗರು ಮಾತ್ರವಲ್ಲ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ರಾಜಕಾರಣಿಗಳು ಸಹ ವ್ಯಂಗ್ಯವಾಡಿರುವುದು ಇದೆ. ಇದೀಗ ಈಜೀಪುರ ಫ್ಲೈಓವರ್ ಬಗ್ಗೆ ಹೊಸದೊಂದು ವಿಷಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ನಾನು ಕಾಲೇಜಿಗೆ ಹೋಗುವಾಗ ಈ ಯೋಜನೆ ಪ್ರಾರಂಭವಾಗಿತ್ತು. ಈಗ ನನಗೆ ಇಬ್ಬರು ಮಕ್ಕಳಿದ್ದಾರೆ ಎಂದು ಮಹಿಳೆಯೊಬ್ಬರು ಈಚೆಗೆ ಟ್ವೀಟ್ ಮಾಡಿದ್ದರು. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ಟ್ರಂಪ್ ಮಧ್ಯಪ್ರವೇಶ ಮಾಡಿ ಈ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎನ್ನುವ ಜೋಕ್‌ಗಳು ಈಗ ಹಳೆಯದಾಗಿವೆ.

ಬೆಂಗಳೂರಿನ ಮಹಿಳೆಯೊಬ್ಬರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಈಜೀಪುರ ಮೇಲ್ಸೇತುವೆಗೆ ಸಂಬಂಧಿಸಿದಂತೆ ಮಾಡಿರುವ ಪೋಸ್ಟ್‌ ವೈರಲ್ ಆಗುತ್ತಿದೆ.

Ejipura incomplete flyover should be saved it is a treasure of Bengaluru social media trend

ಬಹಳ ವರ್ಷಗಳಿಂದ ವಿಳಂಬವಾಗಿರುವ ಈಜಿಪುರ ಫ್ಲೈಓವರ್‌ನ ಕಸ್ಟಮೈಸ್ ಮಾಡಿದ ಫ್ರಿಡ್ಜ್ ಮ್ಯಾಗ್ನೆಟ್ (ಫ್ರಿಡ್ಜ್ ಮೇಲೆ ಅಂಟಿಸುವ ಸಾಧನ) ರೂಪದಲ್ಲಿ ಬೆಂಗಳೂರಿನ ಮಹಿಳೆಯೊಬ್ಬರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ನಕ್ಕು ನಕ್ಕು ಸುಸ್ತಾಗಿದ್ದಾರೆ. 2036ರ ಈಜೀಪುರ ಫ್ಲೈಓವರ್ ತುಂಬಾ ಚೆನ್ನಾಗಿದೆ! 🤩 ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ಮಹಿಳೆ ಪೋಸ್ಟ್‌ ವೈರಲ್

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ @Dhichkyaaon ಎನ್ನುವ ಖಾತೆಯಿಂದ ಮಹಿಳೆಯೊಬ್ಬರು ಎರಡು ಕಸ್ಟಮ್ ಫ್ರಿಡ್ಜ್ ಮ್ಯಾಗ್ನೆಟ್‌ಗಳನ್ನು ಖರೀದಿ ಮಾಡಿದ್ದಾರೆ. ಬಸವನಗುಡಿ, ಜಯನಗರ ಮತ್ತು ಬೆಂಗಳೂರಿನ ನಡುವೆ ಸಾಕಷ್ಟು ಸಮಯ ಯೋಚಿಸಿದ ನಂತರ, ನಾನು ಬಸವನಗುಡಿ ಮ್ಯಾಗ್ನೆಟ್ ಖರೀದಿ ಮಾಡಲು ನಿರ್ಧರಿಸಿದೆ. ಅಲ್ಲದೇ ನನಗೂ ಈಜಿಪುರ ಮೇಲ್ಸೇತುವೆಗೂ ತುಂಬಾ ಅವಿನಾಭಾವ ಸಂಬಂಧವಿದೆ. ಹೀಗಾಗಿ, ಈ ಅಪೂರ್ಣ ಈಜೀಪುರ ಫ್ಲೈಓವರ್‌ನ ಮ್ಯಾಗ್ನೆಟ್ ಖರೀದಿ ಮಾಡಬೇಕಾಯಿತು ಎಂದು ಹೇಳಿದ್ದಾರೆ. ಈ ಪೋಸ್ಟ್‌ಗೆ ಜನ ಭರ್ಜರಿ ಕಮೆಂಟ್ ಮಾಡುತ್ತಿದ್ದಾರೆ.

ಹಾಸ್ಯದ ಹೊನಲು

ಈಜೀಪುರದ ಫ್ರಿಡ್ಜ್ ಮ್ಯಾಗ್ನೆಟ್ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದೆ. ಈ ಫ್ರಿಡ್ಜ್ ಮ್ಯಾಗ್ನೆಟ್ ನಮಗೂ ಬೇಕು ಎಲ್ಲಿ ಸಿಗುತ್ತದೆ ಹೇಳಿ ಅಂತ ಕೇಳಿದರೆ, ಇನ್ನೂ ಕೆಲವರು ಇದು ಬೆಂಗಳೂರಿನ ಸಂಪತ್ತು. ಕರ್ನಾಟಕದ ಬೇರೆ ಪ್ರವಾಸಿ ತಾಣಗಳಂತೆ ಜನ ಇಲ್ಲಿಗೂ ಜನ ಭೇಟಿ ನೀಡಬೇಕು ಎಂದಿದ್ದಾರೆ. ಈಜೀಪುರ ಇತಿಹಾಸದಲ್ಲಿ ಹೀಗೆಯೇ ಉಳಿಯುತ್ತಾ ಎಂದು ಮತ್ತೊಬ್ಬ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಈಜೀಪುರ ಫ್ಲೈಓವರ್ ಮಿನಿಯೇಚರ್ ನಿಮಗೆ ಸಿಕ್ಕಿದೆ ಅಂತ ನಂಬಲು ಆಗ್ತಿಲ್ಲ. ತಮಾಷೆ ಏನಂದ್ರೆ ನಾನು ಕೋರಮಂಗಲದಲ್ಲಿದ್ದೆ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೆ. ಅದು ಆಗ ಹೇಗಿತ್ತೋ ಈಗಲೂ ಹಾಗೆಯೇ ಇದೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಸರ್ಜಾಪುರದ ದೊಮ್ಮಸಂದ್ರ ವೃತ್ತದಲ್ಲಿ ಮತ್ತೊಂದು ನಿಧಿ ಇದೆ ಎಂದು ಮತ್ತೊಬ್ಬರು ಈ ಭಾಗದ ಮತ್ತೊಂದು ಕಾಮಗಾರಿಯ ಬಗ್ಗೆ ಗಮನ ಸೆಳೆದಿದ್ದಾರೆ. ಈಜೀಪುರ ಅಪೂರ್ಣ ಮೇಲ್ಸೇತುವೆಯನ್ನು ರಕ್ಷಿಸಬೇಕು. ಅದು ಬೆಂಗಳೂರಿನ ಸಂಪತ್ತು ಎಂದು ಅವಿನಾಶ್ ಎನ್ನುವವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+