Ejipura Flyover: ಬೆಂಗಳೂರು ಈಜಿಪುರ ಮೇಲ್ಸೇತುವೆ ಉದ್ಘಾಟನೆ ಆಯ್ತಾ! ಏನಿದು ವೈರಲ್ ಸುದ್ದಿ
ಬೆಂಗಳೂರು, ಸೆಪ್ಟಂಬರ್ 14: ಬೆಂಗಳೂರಿನಲ್ಲಿ ಯಾವುದೇ ಮೂಲಸೌಕರ್ಯ ಕಾಮಗಾರಿ ಕೈಗೊಂಡರು ನಿಗದಿತ ಗಡುವು ಒಳಗೆ ಮುಗಿಯುವುದಿಲ್ಲ ಎಂಬುದಕ್ಕೆ ನಗರ ನಿವಾಸಿಗಳು ಸಾಕ್ಷ್ಯಯಾಗಿದ್ದಾರೆ. ಇಂತಹ ಯೋಜನೆಗಳ ವಿಚಾರದಲ್ಲಿ ನಗರದ ಈಜಿಪುರ ಫ್ಲೈಓವರ್ ಕೂಡ ಒಂದು. ಈ ಮೇಲ್ಸೇತುವೆ ಯೋಜನೆ ಅನುಷ್ಠಾನವಾದರೆ ಸಂಚಾರ ದಟ್ಟಣೆ ಕಡಿಮೆ ಮಾಡಲಿದೆ ಎಂದು ವರ್ಷಗಳ ಹಿಂದೆ ಪಾಲಿಕೆ ನೀಡಿತ್ತು. ಯೋಜನೆ ಹಲವು ಕಾರಣಗಳಿಂದ ವಿಳಂಬವಾಗುತ್ತಿದೆ. ಈ ಮಧ್ಯೆ ಈಜಿಪುರ ಮೇಲ್ಸೇತುವೆ ಉದ್ಘಾಟನೆ ಆಯ್ತು ಎಂಬ ಸುದ್ದಿ ಓಡಾಡುತ್ತಿದೆ.
ಹೌದು, ಬೆಂಗಳೂರಿನ ಜನರು ಮೇಲ್ಸೇತುವೆ ಕಾಮಗಾರಿ ಬಗ್ಗೆ ನಿರಾಶೆ ಹೊಂದಿದ್ದಾರೆ. ಆದರೆ ಯೋಜನೆ ವಿಳಂಬವಾಗುತ್ತಿದೆ. ಇದೀಗ 'ನ್ಯಾನೋ ಬನಾನಾ ಟ್ರೆಂಡ್' ಮೂಲಕ ಈಗ ಮಾತ್ರ ಇದರ ಮೇಲ್ಸೇತುವೆ ಉದ್ಘಾಟನೆ ಸಾಧ್ಯವಾಗಿದೆ ಎಂದು ತೋರಿಸಿದ್ದಾರೆ. ಈ ಮೂಲಕ ವಿಳಂಬ ಮಾಡಿದ ಸರ್ಕಾರವನ್ನು ಅಪಹಾಸ್ಯ ಮಾಡಿದ್ದಾರೆ.

ಸಾಮಾಜಿಕ ಜಲತಾಣದಲ್ಲಿ ಈ ಕುರಿತ ಪೋಸ್ಟ್‌ವೊಂದು ವೈರಲ್ ಆಗಿದೆ. ಫ್ಲೈಓವರ್ ಮುಂದೆ ವೇದಿಕೆಯಲ್ಲಿ ಸಾಕಷ್ಟು ಜನರು ಸೇರಿದ್ದರು. ಇದು ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮದಂತೆ ಕಾಣುತ್ತದೆ. ಜನರ ಹರ್ಷೋದ್ಘಾರದ ಜೊತೆಗೆ ಕಾರ್ಯಕ್ರಮ ಯಶಸ್ವಿಯಾಗಿದೆ. ಹೂವಿನ ಅಲಂಕಾರಗಳೊಂದಿಗೆ ಮೇಲ್ಸೇತುವೆ ಸಿಂಗಾರಗೊಂಡಿದೆ. ಅತಿಥಿಗಳು ರಿಬ್ಬನ್ ಕತ್ತರಿಸಿದ್ದಾರೆ. ಪಾಲಿಕೆ, ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ವೇದಿಕೆಯಲ್ಲಿ ಇದ್ದಂತೆ ಕಾಣುವಂತೆ ಎಐ ತಂತ್ರಜ್ಞಾನ ಮೂಲಕ ಎಡಿಟ್ ಮಾಡಲಾಗಿದೆ.
ಈ ಪೋಸ್ಟ್ ವೈರಲ್ ಆಗಿದೆ, ಸುಮಾರು ಎಂಟು ವರ್ಷಗಳ ಕಾಲ ಮುಂದೂಡಲಾಗಿದೆ 2.5 ಕಿಮೀ ಉದ್ದದ ಫ್ಲೈಓವರ್ ಇನ್ನೂ ಪೂರ್ಣಗೊಂಡಿಲ್ಲ ಎಂಬುದು ಇಲ್ಲಿನ ಸ್ಥಳೀಯ ಸಂಸ್ಥೆಯ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಈವರೆಗೆ ಶೇಕಡಾ 60 ರಷ್ಟು ಕಾಮಗಾರಿ ಮುಗಿದಿದೆ. ಈ ವರ್ಷದ ಅಂತ್ಯದೊಳಗೆ ಯೋಜನೆ ಪೂರ್ಣಗೊಳ್ಳಲಿದೆ. ಇದು ಕೋರಮಂಗಲದ 100 ಅಡಿ ರಸ್ತೆಯ ದಟ್ಟಣೆ ಕಡಿಮೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈವರೆಗೆ ಯೋಜನೆ ವೇಗ ಪಡೆದುಕೊಂಡಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.
ಗೂಗಲ್ ಜೆಮಿನಿ ಎಐ ತಂತ್ರಜ್ಞಾನದಲ್ಲಿ 'ನ್ಯಾನೋ ಬನಾನಾ ಟ್ರೆಂಡ್' ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗಿದೆ. ಇದರಿಂದ ಕಲ್ಪನೆಯನ್ನು ಜಾರಿಗೆ ತರಬಹುದು. ಅಸಾಧ್ಯವಾದ ಕೆಲಸವನ್ನು AI ಸಣ್ಣ, ಪರಿಪೂರ್ಣ ಪರಿಹಾರವಾಗಿ ಮಾಡುತ್ತದೆ. ಸದ್ಯ ಈಜಿಪುರ ಫ್ಲೈಓವರ್ ಹಾಸ್ಯದ ಕೇಂದ್ರವಾಗಿದೆ. ಜನರು ನ್ಯಾನೋ ಆವೃತ್ತಿಯ ಮೂಲಕ ಬೇಗ ಪ್ರದರ್ಶನಗೊಳ್ಳಬಹುದು ಎಂದು ತಮಾಷೆ ಮಾಡಿದ್ದಾರೆ.
ಬೆಂಗಳೂರಿನ ಸರ್ಜಾಪುರ ರಸ್ತೆ, ಕೋರಮಂಗಲ ಕಡೆಗೆ ಈ ಮೇಲ್ಸೇತುವೆ ಬಹಳಷ್ಟು ಪ್ರಾಮುಖ್ಯತೆ ಪಡೆದಿದೆ. ಜನರಿಗೆ ಅಪಾರ ನಿರೀಕ್ಷೆಗಳು ಇವೆ. ಆದರೆ ಭೂಸ್ವಾಧೀನ ಸಮಸ್ಯೆ, ಗುತ್ತಿಗೆದಾರರ ಕಂಪನಿ ಬದಲಾವಣೆ ಹೀಗೆ ಹಲವು ಕಾರಣಗಳಿಂದ ವರ್ಷಗಳಿಂದಲೂ ನಿರ್ಮಾಣ ಕಾರ್ಯ ತಡವಾಗುತ್ತಲೇ ಬಂದಿದೆ. ಇನ್ನೂ ಪಿಲ್ಲರ್ ಸ್ಥಳಗಳು ಅಲ್ಲಲ್ಲಿ ಕಸ ಹಾಕುವ ಜಾಗವಾಗಿ ಬದಲಾಗಿವೆ. ಜನರು ಶೀಘ್ರ ಕಾಮಗಾರಿ ಮುಗಿಸುವಂತೆ ಒತ್ತಾಯಿಸುತ್ತಿದ್ದಾರೆ.












Click it and Unblock the Notifications