Get Updates
Get notified of breaking news, exclusive insights, and must-see stories!

Ejipura Flyover: ಬಹುನಿರೀಕ್ಷೆ ಮೇಲ್ಸೇತುವೆ ಕಾಮಗಾರಿಗೆ ಮರುಜೀವ, ಪುನಾರಂಭದ ಅಪ್ಡೇಟ್

ಬೆಂಗಳೂರು, ಡಿಸೆಂಬರ್ 28: ಬೆಂಗಳೂರಿನ ಆಗ್ನೇಯ ಭಾಗವನ್ನು ಪೂರ್ವ ಮತ್ತು ಪಶ್ಚಿಮ ಬೆಂಗಳೂರಿಗೆ ಸಂಪರ್ಕಿಸುವ ಬಹುನಿರೀಕ್ಷೆಯ ಈಜೀಪುರ ಮೇಲ್ಸೇತುವೆ (Ejipura Flyover) ಕಾಮಗಾರಿ ಮತ್ತೆ ಆರಂಭವಾಗಲಿದೆ. ಕೆಲವೇ ತಿಂಗಳಲ್ಲಿ ಈ ಮೇಲ್ಸೇತುವೆ ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹೌದು, ಒಟ್ಟು 176.86 ಕೋಟಿ ರೂಪಾಯಿ ಅಂದಾಜು ವೆಚ್ಚದ ಬಹುನಿರೀಕ್ಷಿತ ಈಜಿಪುರ ಎಲಿವೇಟೆಡ್ ಕಾರಿಡಾರ್ ಯೋಜನೆಯ ಕಾಮಗಾರಿಯು ಜನವರಿಯಲ್ಲಿ ಪ್ರಾರಂಭವಾಗಲಿದೆ. ಹೈದರಾಬಾದ್ ಮೂಲದ ಬೊಳ್ಳಿನೇನಿ ಸೀನಯ್ಯ ಕಂಪನಿ ಪ್ರೈವೇಟ್ ಲಿಮಿಟೆಡ್ (ಬಿಎಸ್‌ಸಿಪಿಎಲ್) ಕಳೆದ ನವೆಂಬರ್ 15ರಂದು ಬಿಬಿಎಂಪಿಯೊಂದಿಗೆ ಅಪೂರ್ಣ ಯೋಜನೆ ಸ್ವಾಧೀನಪಡಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ.

Ejipura Flyover Corridor Project Will Restart From January 2024, BBMP and Locals Reaction

ಈ ಒಪ್ಪಂದದ ಮೂಲಕ ಈಜಿಪುರ್ ಮೇಲ್ಸೇತುವೆ ಯೋಜನೆಯು ಪುನಾರಂಭಗೊಳ್ಳಲಿದೆ. ಮುಂದಿನ 15 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದು ಕೋರಮಂಗಲ ವ್ಯಾಪ್ತಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ.

ಯೋಜನೆ ಬಗ್ಗೆ ಸ್ಥಳೀಯರು ಹೇಳಿದ್ದೇನು?

ಬೃಹತ್ ಬೆಂಗಳೂರ ಮಹಾನಗರ ಪಾಲಿಕೆ (ಬಿಬಿಎಂಪಿ) ಒಪ್ಪಂದದ ಪ್ರಕಾರ ಮುಂದಿನ ಒಂದು ತಿಂಗಳಲ್ಲಿ (30 ದಿನ) ಕಾಮಗಾರಿ ಆರಂಭಿಸುವ ಏಜೆನ್ಸಿಗೆ ಶೇಕಡಾ 5 ರಷ್ಟು ಮುಂಗಡವಾಗಿ 8 ಕೋಟಿ ರೂಪಾಯಿ ಹಣ ನೀಡಬೇಕಿದೆ. ಒಂದು ವೇಳೆ ಇದು ನೀಡದೇ ಹೋದಲ್ಲಿ ಹಣ ಪಾವತಿ ವಿಳಂಬದ ಹಿನ್ನೆಲೆಯಲ್ಲಿ ಈ ಕಾರಿಡಾರ್ ಮತ್ತೆ ಸ್ಥಗಿತಗೊಳ್ಳಬಹುದು ಎಂದು ಸ್ಥಳೀಯ ನಿವಾಸಿಗಳು ಕಳವಳ ಊಹಿಸಿದ್ದಾರೆ. ಕಾರಣ ಈ ಹಿಂದೆ ಇದೇ ರೀತಿ ಆಗಿತ್ತು ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಈ ಹಿಂದೆ 2017 ರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆಗ ಈಜಿಪುರ ಮೇಲ್ಸೇತುವೆ ಯೋಜನೆ ಆರಂಭವಾಗಿತ್ತು. ಹಿಂದಿನ ಏಜೆನ್ಸಿಯಾದ ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ ಈ ಕಾರಿಡಾರ್‌ನಲ್ಲಿ ಸುಮಾರು 30 ಪ್ರತಿಶತದಷ್ಟು ಕೆಲಸ ಪೂರ್ಣಗೊಳಿಸಿದೆ.

Ejipura Flyover Corridor Project Will Restart From January 2024, BBMP and Locals Reaction

2021 ರಲ್ಲಿ ನಿಂತ ಕಾಮಗಾರಿಗೆ ಮರುಜೀವ

2019 ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬಿದ್ದುಹೋದ ನಂತರ ಯೋಜನೆಯ ವೇಗ ಕುಂಠಿತಗೊಳ್ಳುತ್ತಲೇ ಸಾಗಿತು. ಇದರ ಭಾಗವಾಗಿಯೇ 2021 ರಲ್ಲಿ ಬಿಬಿಎಂಪಿಯು ನಿರ್ಮಾಣ ಕಾಮಗಾರಿ ಕೈ ಬಿಟ್ಟಿತು. ಅಂದು ಬಿಬಿಎಂಪಿ ಸುಮಾರು 15 ಕೋಟಿ ರೂ. ಬಾಕಿ ಮೊತ್ತವನ್ನು ಪಾವತಿಸಬೇಕಾಗಿತ್ತು. ಮತ್ತೊಂದು ಏಜೆನ್ಸಿ ಮುಂದೆ ಬರುವುದರಿಂದ ಬಿಬಿಎಂಪಿ ಈಗ ಮಾಸಿಕ 8-10 ಕೋಟಿ ರೂ.ಗಳನ್ನು ತಪ್ಪದೆ ಪಾವತಿಸಬೇಕಿದೆ. ಇಲ್ಲದಿದ್ದರೆ ಯೋಜನೆ ಮತ್ತೆ ಸ್ಥಗಿತಗೊಳ್ಳುವ ಸಾಧ್ಯತೆಗಳು ಕಾಣುತ್ತಿವೆ ಎಂದು ಅಧಿಕಾರಿಯೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಜಂಕ್ಷನ್‌ ಟ್ರಾಫಿಕ್‌ಗೆ ಕಡಿವಾಣ

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯ ಪ್ರದೇಶಗಳ ಪಟ್ಟಿ ಸೇರಿರುವ ಶ್ರೀನಿವಾಗಿಲು-ಈಜಿಪುರ, ಸೋನಿ ವರ್ಲ್ಡ್ ಜಂಕ್ಷನ್, ಮಡಿವಾಳ-ಸರ್ಜಾಪುರ ವಾಟರ್ ಟ್ಯಾಂಕ್ ಜಂಕ್ಷನ್, ಬಿಡಿಎ ಕಾಂಪ್ಲೆಕ್ಸ್ ಜಂಕ್ಷನ್, ಕೇಂದ್ರೀಯ ಸದನ ಜಂಕ್ಷನ್ ಮತ್ತು ಆಗ್ನೇಯ ಭಾಗಕ್ಕೆ ಸಂಪರ್ಕ ಕಲ್ಪಿಸುವ ಟ್ರಾಫಿಕ್ ಜಂಕ್ಷನ್‌ಗಳನ್ನು ತಪ್ಪಿಸಲು ಈ ಮೇಲ್ಸೇತುವೆ ಸಹಾಯ ಮಾಡಲಿದೆ. ಆದರೆ ವಿವಿಧ ಕಾರಣಗಳಿಂದ ಈ ಯೋಜನೆ ಅಪೂರ್ಣವಾಗುತ್ತಲೇ ಬಂದಿದೆ.

ಬೆಂಗಳೂರಿನ ಪೂರ್ವ ಮತ್ತು ಪಶ್ಚಿಮ ಬೆಂಗಳೂರಿಗೆ ಈ ಮೇಲ್ಸೇತುವೆ ಸಂಪರ್ಕ ಕಲ್ಪಿಸುತ್ತದೆ. ಮೈತ್ರಿ ಸರ್ಕಾರದ ಬಳಿಕ ಅಸ್ತಿತ್ವಕ್ಕೆ ಬಂದ ಹಿಂದಿನ ಬಿಜೆಪಿ ಸರ್ಕಾರವು ಈ ಯೋಜನೆ ಪೂರ್ಣಗೊಳಿಸಲು ಆಸಕ್ತಿ ವಹಿಸಲಿಲ್ಲ ಮತ್ತು ಬಿಜೆಪಿ ಶಾಸಕರ ಆಳ್ವಿಕೆಯ ಪ್ರದೇಶಗಳಿಗೆ ಹಣವನ್ನು ಸಹ ತಿರುಗಿಸಿತು ಎಂದು ಟಿಎಂ ಲೇಔಟ್ ಶಾಸಕರೂ ಆಗಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಇಂದಿನ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಈ ಈಜಿಪುರ ಮೇಲ್ಸೇತುವೆ ಯೋಜನೆಗೆ ಜೀವ ತುಂಬಿದೆ. ಯೋಜನೆ ಪುನಾರಂಭಗೊಂಡು ಶೀಘ್ರವೇ ಮುಗಿಯಲಿದೆ ಎಂದರು.

25 ಮರ ತೆರವು, ಯೋಜನೆ ಪೂರ್ಣ ವಿಶ್ವಾಸ

ಯೋಜನೆ ಕೈಗೆತ್ತಿಕೊಂಡ ಕಂಪನಿಯು ಪೂರ್ವ-ಬಿತ್ತರಿಸುವ ಕೆಲಸವನ್ನು ಮತ್ತು ಯೋಜನೆಗಾಗಿ ಬೇಕಾದ ಸ್ಥಳಾವಕಾಶಕ್ಕಾಗಿ ಗುರುತಿಸಿದ್ದ ಹಲವು ಮರಗಳನ್ನು ತೆರೆವು ಕೆಲಸ ಮಾಡಿತ್ತು. ಈ ಯೋಜನೆಯಡಿ 63 ಮರಗಳನ್ನು ಗುರುತಿಸಲಾಗಿದ್ದು, ಇಲ್ಲಿಯವರೆಗೆ 25 ಮರಗಳನ್ನು ತೆರವಾಗಿದೆ. ಟ್ರಾಫಿಕ್‌ಗೆ ಕಡಿವಾಣ ಹಾಕಲು ಮನಸ್ಸು ಮಾಡಿರುವ ರಾಜ್ಯ ಸರ್ಕಾರ ಈ ಯೋಜನೆ ವ್ಯಾಪ್ತಿಯಲ್ಲಿ ಇನ್ನು ಮುಂದೆ ಪರಿಹಾರದ ಸಮಸ್ಯೆಯಾಗಿ ಕಾಮಗಾರಿ ನಿಲ್ಲದಂತೆ ನೋಡಿಕೊಳ್ಳಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+