ಕೇಂದ್ರ ಸಚಿವೆ ನಿರ್ಮಲಾ ನಡವಳಿಕೆಗೆ ಸಚಿವ ಮಹೇಶ್ ಹೇಳಿದ್ದೇನು?
ಬೆಂಗಳೂರು, ಆಗಸ್ಟ್ 25: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವರ್ತನೆಗೆ ಪ್ರಾಥಮಿಕ ಹಾಗು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಅಸಮಧಾನ ವ್ಯಕ್ತಪಡಿಸಿದ್ದು,ಅವರ ವರ್ತನೆ ಸರಿಯಲ್ಲ ಒಬ್ಬ ಕೇಂದ್ರ ಸಚಿವರಾಗಿ ಇನ್ನೊಬ್ಬ ಸಚಿವರಿಗೆ ಈ ರೀತಿ ಮಾಡಬಾರದು ಎಂದರು.
ನಗದ ಖಾಸಗಿ ಹೋಟೆಲ್ ನಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು,ಕೇಂದ್ರ ಸಚಿವರ ಬಗ್ಗೆ ನಮಗೆ ಅಪಾರ ಗೌರವ ಇದೆ.ಆದರೆ ಅವರ ವರ್ತನೆ ಸರಿಯಲ್ಲ ಜೊತೆಗೆ ಕೊಡಗು ವಿಚಾರದಲ್ಲಿ ಕೇಂದ್ರದ ಸ್ಪಂದನೆ ಸ್ವಲ್ಪವೂ ಸರಿಯಿಲ್ಲ.3 ಸಾವಿರ ಕೋಟಿ ನಷ್ಟ ಉಂಟಾಗಿರುವ ಕಡೆ ಕೇವಲ 8 ಕೋಟಿ ಕೊಟ್ಟರೆ ಹೇಗೆ?ಕೊಡಗಿನಲ್ಲಿ ನಷ್ಟ ಉಂಟಾಗಿರುವ ಶಾಲೆಗಳ ದುರಸ್ಥಿಗೇ 4 ಕೋಟಿಗೂ ಹೆಚ್ಚು ಹಣ ಬೇಕು ಎಂದರು.
ನನ್ನ ಒಂದು ತಿಂಗಳ ವೇತನ ಹಾಗು ನಮ್ಮ ಇಲಾಖೆಯ ಸಿಬ್ಬಂದಿಯ ಒಂದು ದನದ ವೇತನವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದೇವೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ಶಾಲೆಗಳ ದುರಸ್ಥಿಗೆ 4 ಕೋಟಿ ಕೇಳಿದ್ದೇವೆ.ಅಲ್ಲಿನ ಸ್ಥಿತಿ ನೋಡಿದರೆ ಬಹಳ ನೋವಾಗತ್ತದೆ ಇಂಥ ಸಂದರ್ಭದಲ್ಲಿ ಕೇಂದ್ರ ಕೇವಲ 8 ಕೋಟಿ ಹಣ ಕೊಟ್ಟರೆ ಹೇಗೆ ಎಂದರು.

ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದಾಗಿ ಹೇಳಿಕೆ ನೀಡಿರಬಹುದು ಆದರೆ ಈಗ ರಾಜ್ಯದಲ್ಲಿ ಮುಖ್ಯಮಂತ್ರಿ ಇದ್ದಾರೆ.ಒಮ್ಮೆಗೆ ಒಬ್ಬರು ಮಾತ್ರ ಮುಖ್ಯಮಂತ್ರಿ ಆಗಬೇಕು,ಒಬ್ಬರು ಇರುವಾಗಲೇ ಮತ್ತೊಬ್ಬರು ಸಿಎಂ ಆಗಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಕಾಲೆಳೆದರು.
ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡುವ ಕುರಿತು ನಮ್ಮ ಇಲಾಖೆ ಎಲ್ಲಾ ರೀತಿಯ ಕೆಲಸ ಮುಗಿಸಿದೆ.ಇನ್ನು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ನಿರ್ಧಾರ ಕೈಗೊಳ್ಳಬೇಕು ಎನ್ನುವ ಮೂಲಕ ಬಸ್ ಪಾಸ್ ವಿತರಣೆ ಮತ್ತಷ್ಟು ವಿಳಂಬವಾಗುವ ಸುಳಿವು ನೀಡಿದರು.












Click it and Unblock the Notifications