ಆಂಬಿಡೆಂಟ್ ಸಂಸ್ಥೆ ಮೇಲೆ ಇಡಿ ದಾಳಿ, 1.92 ಕೋಟಿ ಹಣ ವಶ

ಬೆಂಗಳೂರು, ನವೆಂಬರ್ 08: ಜನರಿಗೆ ವಂಚಿಸಿದೆ ಎಂದು ವಿಚಾರಣೆ ಎದುರಿಸುತ್ತಿರುವ ಆಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಬೆಂಗಳೂರು ವಲಯ ಕಚೇರಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.

ಜನರಿಗೆ ಚಿಟ್‌ ಫಂಡ್‌ ವ್ಯವಹಾರ, ಅಧಿಕ ಬಡ್ಡಿ ನೀಡುವ ಆಸೆ ತೋರಿಸಿ ಕೋಟ್ಯಂತರ ಹಣ ವಂಚಿಸಿದ್ದ ಆಂಬಿಡೆಂಟ್‌ ಪ್ರೈವೆಟ್‌ ಸಂಸ್ಥೆ ಮೇಲೆ ಕಳೆದ ವರ್ಷ ದೂರು ದಾಖಲಾಗಿ ಅದನ್ನು ಜಾರಿ ನಿರ್ದೇಶನಾಲಯವು ತನಿಖೆ ನಡೆಸಿತ್ತು.

ಇದೀಗ ಇದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ತನಿಖೆಯಿಂದ ಆಂಬಿಡೆಂಟ್‌ ಸಂಸ್ಥೆಯ ಆರೋಪಿಯನ್ನು ಬಚಾವ್ ಮಾಡಲು ಜನಾರ್ದನ ರೆಡ್ಡಿ ಅವರು ಲಂಚ ಪಡೆದಿದ್ದಾರೆ ಎಂಬ ಆರೋಪವನ್ನು ಸಿಸಿಬಿ ಪೊಲೀಸರು ಮಾಡಿರುವ ಬೆನ್ನಲ್ಲಿ ಇಂದು ಜಾರಿ ನಿರ್ದೇಶನಾಲಯದ ಬೆಂಗಳೂರು ವಲಯ ಕಂಪೆನಿಯ ಕಚೇರಿಯ ಮೇಲೆ ದಾಳಿ ನಡೆಸಿದೆ.

ED raid on Ambidant Marketing Pvt Ltd seized Rs 1.97 crore

ಜಾರಿ ನಿರ್ದೇಶನಾಲಯವು ಆಂಬಿಡೆಂಟ್‌ ಮೇಲೆ ದಾಳಿ ನಡೆಸಿ ಒಟ್ಟು 1.92 ಕೋಟಿ ನಗದು ಹಣವನ್ನು ವಶಪಡಿಸಿಕೊಂಡಿದೆ. ಮತ್ತೊಂದೆಡೆ ಸಿಸಿಬಿಯು ತಲೆಮರೆಸಿಕೊಂಡಿರುವ ಜನಾರ್ದನ ರೆಡ್ಡಿಗೆ ಬಲೆ ಬೀಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+