KGF Babu: ಕೋಟಿ ಕುಳ ಕೆಜಿಎಫ್‌ಬಾಬುಗೆ ಇಡಿ ನೋಟಿಸ್, ಕುಟುಂಬದವರ ಹೆಸರಲ್ಲಿ 30ಕ್ಕೂ ಅಧಿಕ ಬ್ಯಾಂಕ್ ಖಾತೆ
ಬೆಂಗಳೂರು, ಮೇ 17: ಚುನಾವಣೆ ಮುಗಿಯುತ್ತಿದ್ದಂತೆ ಇತ್ತ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಕೋಟ್ಯಾಂತರ ರೂಪಾಯಿಯ ಒಡೆಯನಾಗಿರುವ ಕೆಜಿಎಫ್ ಬಾಬುಗೆ ಆಘಾತ ನೀಡಿದ್ದಾರೆ. ಈ ಹಿಂದೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಕೆಜಿಎಫ್ ಬಾಬುಗೆ ನೋಟಿಸ್ ನೀಡಿದ್ದಾರೆ.
ಭಾರೀ ಪ್ರಮಾಣದಲ್ಲಿ ಹಣ ವರ್ಗಾವಣೆ ವಿಚಾರವಾಗಿ ಸುಮಾರು 20ಕ್ಕೂ ಅಧಿಕಾರಿಗಳು ಯೂಸೂಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬುಗೆ ಸಂಬಂಧಿಸಿದ ಆಸ್ತಿ, ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದರು. ಅದರ ಮುಂದುವರಿದ ಭಾಗವಾಗಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೆ ನೋಟಿಸ್ ನೀಡಿದೆ. ಇಂದು ಬುಧವಾರ ಕೆಜಿಎಫ್ ಬಾಬು ಅವರು ದೆಹಲಿಯ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಕೆಜಿಎಫ್ ಬಾಬು ಅವರ ಮೇಲೆ ಕೋಟ್ಯಂತರ ರೂಪಾಯಿ ಅಕ್ರಮವಾಗಿ ಹಣ ವರ್ಗಾವಣೆಯ ಆರೋಪ ಇದೆ. ಈ ಸಂಬಂಧ ಖಚಿತ ದಾಖಲೆ ಆಧರಿಸಿದ ಇಡಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲಿಸಿದ್ದರು. ಬೆಂಗಳೂರಿನಲ್ಲಿ ಕೆಜಿಎಫ್ ಬಾಬು ಹೊಂದಿರು ಉಮ್ರಾ ರಿಯಲ್ ಎಸ್ಟೇಟ್ ಕಂಪನಿಗಳು, ರುಕ್ಸಾನಾ ಪ್ಯಾಲೇಸ್ ನಿವಾಸದ ದಾಳಿ ನಡೆದಿತ್ತು.
ಕುಟುಂಬದವರ ಹೆಸರಲ್ಲಿ 30ಕ್ಕೂ ಅಧಿಕ ಬ್ಯಾಂಕ್ ಖಾತೆ
ಕೋಟಿ ಒಡೆಯ ಎಂದು ಹೇಳಿಕೊಳ್ಳುವ ಕೆಜಿಎಫ್ ಬಾಬು ಅವರ ಆಸ್ತಿ ಪತ್ರಗಳು ಸೇರಿದಂತೆ ಪ್ರಮುಖ ದಾಖಲೆ ಪತ್ರಗಳು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಸೂಕ್ತ ಮಾಹಿತಿ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಕೆಜಿಎಫ್ ಬಾಬು ಗೆ ಇಬ್ಬರು ಪತ್ನಿಯರು. ಅವರಿಗೂ ಮಕ್ಕಳಿದ್ದು ಅವರೆಲ್ಲರ ಹೆಸರಿನಲ್ಲಿ ಕೆಜಿಎಫ್ ಬಾಬು ಒಟ್ಟು 20ಕ್ಕೂ ಅಧಿಕ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಸ್ವತಃ ಕೆಜಿ ಎಫ್ ಬಾಬು ಹೆಸರಲ್ಲಿಯೇ ಸುಮಾರು 12 ಬ್ಯಾಂಕ್ ಖಾತೆಗಳು ಇವೆ ಎಂಬದು ಇಡಿಯ ಅಧಿಕಾರಿಗಳ ತನಿಖೆಯಿಂದ ಬಹಿರಂಗವಾಗಿದೆ.

ಕಾಂಗ್ರೆಸ್ ನಿಂದ ಚಿಕ್ಕಪೇಟೆ ಟಿಕೆಟ್ ಬಯಸಿದ್ದ ಕೆಜಿಎಫ್ ಬಾಬುಗೆ ಟಿಕೆಟ್ ಸಿಗದ ಹಿನ್ನೆಲೆ ಅವರು ಪಕ್ಷೇತರವಾಗಿ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಚುನಾವಣೆ ವೇಳೆ ಚಿಕ್ಕಪೇಟೆಯ ಸ್ಲಂ ನಿವಾಸಿಗಳಿಗೆ 300 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಪ್ರಚಾರದ ವೇಳೆ ಬಾಬು ಭರವಸೆ ನೀಡಿದ್ದರು. ಚಿಕ್ಕಪೇಟೆ ಅಭಿವೃದ್ಧಿಗೆ 300 ಕೋಟಿ ರೂ, ವ್ಯಯಿಸುವುದಾಗಿ ತಮ್ಮ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದರು.
ಕೆಜಿಎಫ್ ಬಾಬು ತಾನು1,621 ಕೋಟಿ ರೂ.ಮೌಲ್ಯದ ಚರ ಹಾಗೂ ಸ್ಥಿರ ಆಸ್ತಿ ಹೊಂದಿದ್ದು, 62.32 ಕೋಟಿ ರೂ. ಹೊಣೆಗಾರಿಕೆ ಹೊಂದಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದ್ದರು.
ಅಲ್ಲದೇ ಅವರ ಈ ಹಿಂದೆ ತಾನು 4 ಸಾವಿರ ಕೋಟಿ ರೂ.ಗೂ ಹೆಚ್ಚಿನ ಸಂಪತ್ತನ್ನು ಹೊಂದಿರುವುದಾಗಿ ಬಹಿರಂಗವಾಗೇ ಅವರು ತಿಳಿಸಿದ್ದರು. ಸದ್ಯ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕುರಿತು ತನಿಖೆ ನಡೆಯುತ್ತಿದೆ.












Click it and Unblock the Notifications