e-khata: ಈ ಮಾಹಿತಿ ನೀಡದಿದ್ದರೆ ಅಂತಿಮ ಇ ಖಾತಾ ರಚಿಸಲು ಸಾಧ್ಯವಿಲ್ಲ: ಬಿಬಿಎಂಪಿ
ಬೆಂಗಳೂರಿನಲ್ಲಿ ಆಸ್ತಿಗಳ ಇ- ಖಾತಾಗೆ ಸಂಬಂಧಿಸಿದಂತೆ ಗೊಂದಲಗಳು ಮುಂದುವರಿದಿದೆ. ಈ ನಡುವೆ ಬೆಂಗಳೂರಿನಲ್ಲಿ ಇ - ಖಾತಾಗೆ ಸಂಬಂಧಿಸಿದಂತೆ ಬಿಬಿಎಂಪಿಯು (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಅಪ್ಡೇಟ್‌ವೊಂದನ್ನು ಕೊಟ್ಟಿದೆ. ಆದರೆ, ಈಗ ಬಿಬಿಎಂಪಿಯು ಇ- ಖಾತಾದ ಬಗ್ಗೆ ಹೊರಡಿಸಿರುವ ಹೊಸ ಪ್ರಕಟಣೆಯು ಜವಾಬ್ದಾರಿಯಿಂದ ನುಣುಚಿಕೊಳ್ಳುವಂತೆ ಇದೆ. ಹೌದು ನಗರದಲ್ಲಿ ಇ -ಖಾತಾ ಮಾಡಿಸಿಕೊಳ್ಳುವಲ್ಲಿ ಕೆಲವರು ಸಮಸ್ಯೆ ಎದುರಿಸುತ್ತಿದ್ದಾರೆ. ಸಾವಿರಾರು ಇ - ಖಾತಾ ಅರ್ಜಿಗಳನ್ನು ವಿಲೇವಾರಿ ಮಾಡಿರುವುದಾಗಿ ಬಿಬಿಎಂಪಿಯ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಈಗಲೂ ಕೆಲವರು ಇ ಖಾತಾ ಸಿಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಇದರ ನಡುವೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂತಿಮ ಇ-ಖಾತಾ ಪಡೆಯುವಲ್ಲಿ ಪಾಲಿಕೆ ಅಧಿಕಾರಿಗಳ ಪಾತ್ರವಿಲ್ಲ ಎಂದಿದೆ.
ಬೆಂಗಳೂರಿನಲ್ಲಿ ಆಸ್ತಿಗಳಿಗೆ ನೀಡುವ ಇ - ಖಾತಾ ವಿಚಾರದಲ್ಲಿ ಗೊಂದಲಗಳು ಮುಂದುವರಿದಿರುವಾಗಲೇ ಬಿಬಿಎಂಪಿಯ ಅಧಿಕಾರಿಗಳು ಇ - ಖಾತಾ ವಿಚಾರದಲ್ಲಿ ಶಾಕ್ ನೀಡಲಾಗಿದೆ. ಬೆಂಗಳೂರಿನಲ್ಲಿ ಇ-ಖಾತಾ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಅನೂಕಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇ - ಖಾತಾ ಮಾಡುವುದು ಬಿಬಿಎಂಪಿಯ ಅಧಿಕಾರಿಗಳ ನಿಯಂತ್ರಣದಲ್ಲಿ ಇರುವುದಿಲ್ಲ. ಬಿಬಿಎಂಪಿ ಅಧಿಕಾರಿಗಳು ಅಂತಿಮ ಇ-ಖಾತಾ ರಚಿಸಬೇಕಾದರೆ, ನಿಮ್ಮ ಅಥವಾ ಆಸ್ತಿ ಮಾಲೀಕರ ಮಾಹಿತಿ ಮತ್ತು ಆಸ್ತಿಯ ಫೋಟೋವನ್ನು ನೀಡದೆ ಅಂತಿಮ ಇ-ಖಾತಾವನ್ನು ರಚಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಅಲ್ಲದೆ ಅಂದಾಜು 22 ಲಕ್ಷ ಆಸ್ತಿಗಳ ಕರಡು ಇ-ಖಾತಾ ಅನ್ನು ಆನ್‌ಲೈನ್‌ನಲ್ಲಿ ವಾರ್ಡ್ ವಾರು ಅಪ್‌ಲೋಡ್ ಮಾಡಿರುವುದಾಗಿಯೂ ಬಿಬಿಎಂಪಿಯ ಆಸ್ತಿ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿಯ ಕಂದಯಾ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಮಾತನಾಡಿ, ಇ-ಖಾತಾ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಿರುವುದಾಗಿ ಹೇಳಿದ್ದಾರೆ. ಈ ವಿಚಾರವಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ಅಂತಿಮ ಇ-ಖಾತಾ ಪಡೆಯಲು ಅಂದಾಜು ಇಲ್ಲಿಯ ವರೆಗೆ 67 ಸಾವಿರ ಅರ್ಜಿಗಳು ಬಂದಿವೆ. ಅವುಗಳಲ್ಲಿ 61 ಸಾವಿರಕ್ಕೂ ಹೆಚ್ಚು ಇ-ಖಾತಾಗಳನ್ನು ನೀಡಲಾಗಿದೆ. ಇನ್ನು ದಿನವೂ ಬರುತ್ತಿರುವ ಇ ಖಾತಾಗೆ ಸಂಬಂಧಿಸಿದ ಅರ್ಜಿಗಳನ್ನು ನಿಗದಿತ ಸಮಯದಲ್ಲಿ ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಇ-ಖಾತ ಸಿಗುವಂತೆ ಮಾಡಲಾಗುತ್ತಿದೆ ಎಂದಿದ್ದಾರೆ.
ಇನ್ನು ಬಿಬಿಎಂಪಿ ದಾಖಲೆಗಳೊಂದಿಗೆ ಡೇಟಾ ಹೊಂದಾಣಿಕೆಯಾದರೆ, ನಿಮ್ಮ ಅಂತಿಮ ಇ-ಖಾತಾ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಬಿಬಿಎಂಪಿ ದಾಖಲೆಗಳೊಂದಿಗೆ ಸಿಗದ ಮಾಹಿತಿ ಅಥವಾ ಹೊಂದಾಣಿಕೆ ಆಗಿದ್ದರೆ ಮಾತ್ರ ಆ ಪ್ರಕರಣವನ್ನು ಸಹಾಯಕ ಕಂದಾಯ ಅಧಿಕಾರಿಗಳಿಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇ - ಖಾತಾ ರಶೀದಿ ಪಡೆಯುವುದು ಹೇಗೆ: ನಿಮ್ಮ ಆಸ್ತಿ ತೆರಿಗೆ ರಶೀದಿಯಿಂದ ನಿಮ್ಮ ವಾರ್ಡ್ ಅನ್ನು ನೀವು ತಿಳಿದುಕೊಳ್ಳಬಹುದಾಗಿದೆ.

BBMPeAasthi.karnataka.gov.in ಲಿಂಕ್‌ನಲ್ಲಿ ಇದನ್ನು ನೋಡಬಹುದಾಗಿದೆ. ಮೊಬೈಲ್ ಸಂಖ್ಯೆ ಮತ್ತು ಒಟಿಪಿ ಬಳಸಿ ಲಾಗಿನ್ ಮಾಡಿ ಮತ್ತು ವಾರ್ಡ್ ವಾರು ಪಟ್ಟಿಯಲ್ಲಿ ಮಾಲೀಕರ ಹೆಸರನ್ನು ಬಳಸಿಕೊಂಡು ನಿಮ್ಮ ಆಸ್ತಿಯನ್ನು ಹುಡುಕಬಹುದಾಗಿದೆ. ಇನ್ನು ಬಿಬಿಎಂಪಿಯ ಅಧಿಕೃತ ಯುಟ್ಯೂಬ್‌ನಲ್ಲಿರುವ ಲಿಂಕ್‌ಗಳ ಮೂಲಕವೂ ಡು-ಇಟ್-ಯುವರ್ ಸೆಲ್ಫ್ ವಿಡಿಯೋ ಮೂಲಕ ನೀವೆ ಇ-ಖಾತಾ ಪಡೆದುಕೊಳ್ಳಬಹುದಾಗಿದೆ.
eKhata ಸಹಾಯವಾಣಿ - 94806 83695
ಇ ಖಾತಾಗೆ ಅಗತ್ಯವಿರುವ ದಾಖಲೆಗಳು
* ಮಾಲೀಕರ ಆಧಾರ್ ಕಾರ್ಡ್
* ಆಸ್ತಿ ತೆರಿಗೆ ಐಡಿ (ಆಸ್ತಿ ತೆರಿಗೆ ವ್ಯವಸ್ಥೆಯಿಂದ ವಿದ್ಯುನ್ಮಾನ ಮಾಹಿತಿ ಪಡೆದುಕೊಳ್ಳಲಾಗುತ್ತದೆ)
* ಮಾರಾಟ / ರಿಜಿಸ್ಟರ್ ಡೀಡ್ ಸಂಖ್ಯೆ (ಇದನ್ನು ಉಪ ರಿಜಿಸ್ಟ್ರಾರ್‌ನಿಂದ ವಿದ್ಯುನ್ಮಾನವಾಗಿ ಪಡೆಯುತ್ತದೆ)
* BESCOM 10-ಅಂಕಿಯ ID (ಖಾಲಿ ಪ್ಲಾಟ್‌ಗಳಿಗೆ ಕಡ್ಡಾಯವಲ್ಲ)
* ಆಸ್ತಿ ಫೋಟೋ












Click it and Unblock the Notifications