E-Khata: ಇ- ಖಾತಾ ಗೊಂದಲಗಳಿಗೆ ಕೊನೆಗೂ ತೆರೆ: ಆಸ್ತಿದಾರರಿಗೆ ಗುಡ್‌ನ್ಯೂಸ್ ಕೊಟ್ಟ ಡಿ.ಕೆ ಶಿವಕುಮಾರ್
E-Khata: ಬೆಂಗಳೂರು ಸೇರಿದಂತೆ ಕರ್ನಾಟಕದ ಎಲ್ಲಾ ಆಸ್ತಿಗಳ ಖರೀದಿ ಹಾಗೂ ಮಾರಾಟದಲ್ಲಿ ಯಾವುದೇ ಮೋಸ ಆಗಬಾರದು ಎನ್ನುವ ಕಾರಣಕ್ಕೆ ಕರ್ನಾಟಕ ಸರ್ಕಾರವು ಕಳೆದ ವರ್ಷ ಎಲ್ಲಾ ಆಸ್ತಿಗಳಿಗೂ ಇ - ಖಾತಾ ಕಡ್ಡಾಯ ಮಾಡಿದೆ. ಅಲ್ಲದೇ ಇ ಖಾತಾ ಕಡ್ಡಾಯ ಮಾಡಿರುವುದರ ಹಿಂದೆ ಆಸ್ತಿ ತೆರಿಗೆ ವ್ಯಾಪ್ತಿಯಿಂದ (ಆಸ್ತಿ ವ್ಯಾಪ್ತಿಗೆ ಸೇರದ) ಹೊರಗೆ ಉಳಿದ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರಿಸುವುದು ಸಹ ಸೇರಿದೆ. ಆದರೆ ಒಂದು ವರ್ಷ ಕಳೆದರೂ ಎಲ್ಲಾ ಆಸ್ತಿದಾರರಿಗೂ ಇ ಖಾತಾ ಸಿಕ್ಕಿಲ್ಲ. ಇದೀಗ ಇ ಖಾತಾಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ಜನಪರ ಆಡಳಿತವೇ ನಮ್ಮ ಗುರಿ ಎಂದಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ರಾಜ್ಯದ ಜನರಿಗೆ ಸುಲಭ ಸೇವೆ ಒದಗಿಸಲು ಶೀಘ್ರದಲ್ಲೇ ಇ-ಖಾತಾ ಅರ್ಜಿಗೆ ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಮೊಬೈಲ್ ಆ್ಯಪ್ ನಿಂದ ಅರ್ಜಿಗಳ ವಿಲೇವಾರಿ ವೇಗ ಪಡೆದುಕೊಳ್ಳಲಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಇ ಖಾತಾವನ್ನು ಮೊದಲು ಪ್ರಾಯೋಗಿಕವಾಗಿ ಬೆಂಗಳೂರಿನ ಆಸ್ತಿದಾರರಿಗೆ ಕೊಡಲಾಗಿತ್ತು. ಇದಾದ ನಂತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ವಿಸ್ತರಿಸಲಾಗಿತ್ತು. ಇದೀಗ ಇ ಖಾತಾಗೆ ಮೊಬೈಲ್ ಆ್ಯಪ್ ಅನ್ನು ಮೊದಲು ಗ್ರೇಟರ್ ಬೆಂಗಳೂರು ಆಡಳಿತ ವ್ಯಾಪ್ತಿಯಲ್ಲಿ ಜಾರಿ ಮಾಡುವ ಸಾಧ್ಯತೆ ಇದೆ.
ಇ - ಖಾತಾ ಅರ್ಜಿಗೆ ಮೊಬೈಲ್ ಆ್ಯಪ್
ಇ - ಖಾತಾ ಅರ್ಜಿ ಸಲ್ಲಿಕೆ ಸುಲಭಗೊಳಿಸಲು ಗ್ರೇಟರ್ ಬೆಂಗಳೂರು ಆಡಳಿತದಿಂದ ಶೀಘ್ರದಲ್ಲೇ ಮೊಬೈಲ್ ಆ್ಯಪ್ ಬಿಡುಗಡೆ ಮಾಡುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ ಸದ್ಯ ದಿನಕ್ಕೆ 3 ಸಾವಿರದಿಂದ 4 ಸಾವಿರ ಅರ್ಜಿಗಳ ವಿಲೇವಾರಿ ಆಗುತ್ತಿದೆ ಎಂದು ಅವರು ಹೇಳಿದ್ದಾರೆ. ಇನ್ನು ಮುಖ್ಯವಾಗಿ ಇ - ಖಾತಾ ಮೊಬೈಲ್ ಆ್ಯಪ್ ಆರಂಭವಾದರೆ ಅರ್ಜಿಗಳ ವಿಲೇವಾರಿ ಸಂಖ್ಯೆ ಹೆಚ್ಚಳವಾಗಲಿದೆ ಎಂದೂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.












Click it and Unblock the Notifications