E - Khata: ಇ - ಖಾತಾಗೆ ಅರ್ಜಿ ಸಲ್ಲಿಸುವುದು ಹೇಗೆ, ಬೇಕಾಗುವ ದಾಖಲೆಗಳ ಸಂಪೂರ್ಣ ವಿವರ ಇಲ್ಲಿದೆ!

E - Khata: ಕರ್ನಾಟ ಸರ್ಕಾರವು 2024ನೇ ಸಾಲಿನಲ್ಲಿ ಪ್ರಾಯೋಗಿಕವಾಗಿ ಇ - ಖಾತಾ ಯೋಜನೆಯನ್ನು ಪರಿಚಯಿಸಿತ್ತು. ಇದರ ಮುಖ್ಯ ಉದ್ದೇಶ ಆಸ್ತಿಗಳಲ್ಲಿ ಅವ್ಯವಹಾರ ತಪ್ಪಿಸುವುದು ಹಾಗೂ ಆಸ್ತಿ ಮಾರಾಟದಲ್ಲಿನ ಮೋಸವನ್ನು ತಡೆಯುವುದೇ ಆಗಿದೆ. ಆದರೆ ಇ ಖಾತಾ ನೀಡುವುದರಲ್ಲಿ ಸಾಕಷ್ಟು ಗೊಂದಲಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇ ಖಾತಾಗಾಗಿ ಇ - ಆಸ್ತಿ ವೆಬ್‌ಸೈಟ್ ಪರಿಚಯಿಸಿದೆ. ಬಿಬಿಎಂಪಿಯ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ (ಐಎಎಸ್) ಅವರು ಹಾಗೂ ಇಲಾಖೆಯು ಇ ಸ್ವತ್ತು ಅಭಿವೃದ್ಧಿ ಮಾಡುವುದರಲ್ಲಿ ಯಶಸ್ವಿಯಾಗಿದೆ. Encumbrance Certificate (EC)

ಪ್ರಮಾಣ ಪತ್ರದ ಪ್ರಕ್ರಿಯೆಗಳನ್ನು ಸರಳೀಕರಣ ಮಾಡಲಾಗಿದೆ.

ಇದರಿಂದಾಗಿ ಬೆಂಗಳೂರಿನಲ್ಲಿ ಆಸ್ತಿದಾರರು ಇ ಖಾತಾ ಪಡೆದುಕೊಳ್ಳುವ ಪ್ರಕ್ರಿಯೆ ಸುಲಭವಾಗಿದೆ. ಅಲ್ಲದೇ ಹಿರಿಯ ನಾಗರಿಕರಿಗೆ ಇ - ಖಾತಾ ಸುಲಭವಾಗಿ ಲಭ್ಯವಾಗುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ DH ವರದಿ ಮಾಡಿದೆ.

E - Khata complete list of documents required with step-by-step explanation and how to apply for e-Khata

ಇ - ಖಾತಾ ಮಾಡಿಸಿಕೊಳ್ಳಲು ಬೇಕಾಗುವ ಪ್ರಮುಖ 5 ದಾಖಲೆಗಳು

* ನೋಂದಾಯಿತ ಆಸ್ತಿ ಪತ್ರ

* ಸ್ವಯಂ ಮೌಲ್ಯಮಾಪನ ಯೋಜನೆಯ ಆಸ್ತಿ ತೆರಿಗೆ ರಶೀದಿ ಸಂಖ್ಯೆ (ಆಸ್ತಿ ತೆರಿಗೆ ಪಾವತಿ ಮಾಡಿದ ಮೇಲೆ ಸಿಗುವ ಬಿಲ್‌ನ ಎಡಭಾಗದಲ್ಲಿ ಇರುತ್ತದೆ.

* ಬೆಸ್ಕಾಂ ಆರ್.ಆರ್ ಸಂಖ್ಯೆ

* ಕಟ್ಟಡ ಅಥವಾ ಅಪಾರ್ಟ್ಮೆಂಟ್ GPS ಫೋಟೋ

* ಬಿಬಿಎಂಪಿ ಖಾತಾ (ಎ ಅಥವಾ ಬಿ)

ಆನ್‌ಲೈನ್‌ನಲ್ಲಿ ಇ ಖಾತಾ ಪಡೆಯುವುದು ಹೇಗೆ ?

ಬಿಬಿಎಂಪಿಯ ಇ-ಆಸ್ತಿ ಪೋರ್ಟಲ್‌ನಲ್ಲಿ ಇ-ಖಾತಾ ಡ್ರಾಫ್ಟ್‌ಗೆ ಅರ್ಜಿ ಸಲ್ಲಿಕೆ ಮಾಡುವುದು ಅತ್ಯಂತ ಸರಳವಾಗಿದೆ. ಹಂತ - ಹಂತವಾಗಿ ಆನ್‌ಲೈನ್‌ನಲ್ಲಿ ಈ ಖಾತಾಗೆ ಅರ್ಜಿ ಸಲ್ಲಿಕೆ ಮಾಡುವುದು ಹೇಗೆ ಎನ್ನುವ ವಿವರ ಇಲ್ಲಿದೆ.

ಹಂತ 1: ಬಿಬಿಎಂಪಿ ಇ-ಆಸ್ತಿ ವೆಬ್‌ಸೈಟ್‌ಗೆ ಹೋಗಿ ಮತ್ತು ನಿಮ್ಮ ಫೋನ್ ಸಂಖ್ಯೆಯನ್ನು ಟೈಪ್ ಮಾಡಿ. ಪೋರ್ಟಲ್‌ಗೆ ಲಾಗಿನ್ ಆಗಲು OTP ಬರುತ್ತದೆ.

ಹಂತ 2: ವೆಬ್‌ಸೈಟ್‌ನಲ್ಲಿ ಈಗಾಗಲೇ ಲಭ್ಯವಿರುವ ನಿಮ್ಮ ವಾರ್ಡ್‌ನ ಹೆಸರು ಇಲ್ಲವೇ ನಿಮ್ಮ ವಾರ್ಡ್‌ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಆಸ್ತಿ ತೆರಿಗೆ ಪಾವತಿ ಮಾಡಿರುವ ಬಿಲ್‌ನಲ್ಲಿ ಇರುವ ಸಂಖ್ಯೆ ಹಾಗೂ ಈ ವಾರ್ಡ್ ಸಂಖ್ಯೆ ಒಂದೇ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ಇದಾದ ನಂತರ, ನಿಮಗೆ ಐದು ಆಯ್ಕೆಗಳು ಕಾಣಿಸಿಕೊಳ್ಳಲಿವೆ. 1) ಆಸ್ತಿ EPID (ಎಲೆಕ್ಟ್ರಾನಿಕ್ ಆಸ್ತಿ ಗುರುತಿಸುವಿಕೆ) ಸಂಖ್ಯೆ, 2) ಮಾಲೀಕರ ಹೆಸರು 3) ಮೌಲ್ಯಮಾಪನ ಸಂಖ್ಯೆ, 4) ಆಸ್ತಿ ವಿಳಾಸ ಹಾಗೂ 5) ಬುಕ್‌ ಸಂಖ್ಯೆಯನ್ನು ನಮೂದಿಸಿ. ಬಿಬಿಎಂಪಿ ಇ-ಆಸ್ತಿ (ಇ-ಖಾತಾ) ಪೋರ್ಟಲ್‌ನಲ್ಲಿರುವ ಪುಸ್ತಕ ಸಂಖ್ಯೆ ಕ್ಷೇತ್ರದ ಡಿಜಿಟಲೀಕರಣದ ಭೌತಿಕ ಬಿಬಿಎಂಪಿ ನೋಂದಣಿ ಪುಸ್ತಕದ ವಿವರವನ್ನು ಒಳಗೊಂಡಿದೆ.

ಇಂದಿನಿಂದ ಮನೆ - ಮನೆಗೆ ಇ ಖಾತಾ: ಇನ್ನು ಇಂದಿನಿಂದ ಜುಲೈ 1ರಿಂದ ಒಂದು ತಿಂಗಳ ಕಾಲ ಇ-ಖಾತಾ ಅಭಿಯಾನ ನಡೆಯಲಿದ್ದು, ಮನೆ - ಮನೆಗೆ ಖಾತಾ ಡ್ರಾಫ್ಟ್‌ ಕೊಡುವುದಾಗಿಯೂ ರಾಜ್ಯ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿಳಿಸಿದೆ. ಆಸ್ತಿದಾರರು ಈ ಅಭಿಯಾನದಲ್ಲಿ ಭಾಗವಹಿಸಿ ನಿಮ್ಮ ಆಸ್ತಿ ಇ ಖಾತೆ ಮಾಡಿಸಿಕೊಳ್ಳಿ ವಂಚನೆಯಿಂದ ತಪ್ಪಿಸಿಕೊಳ್ಳಿ. ನಂತರ ಬೆಂಗಳೂರಿನ ಎಲ್ಲಾ ವಾರ್ಡ್ ಗಳಲ್ಲಿ ಇಂತಹ ಕಾರ್ಯಕ್ರಮ ಮಾಡುತ್ತೇವೆ. ನಿಮಗೆ ನಮ್ಮ ಅಧಿಕಾರಿಗಳು, ಕಾರ್ಯಕರ್ತರು ಸಹಕಾರ ನೀಡಲಿದ್ದಾರೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಹ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+