E-khatha Goodnews: ಇ - ಖಾತಾ ಗೊಂದಲಗಳಿಗೆ ಬ್ರೇಕ್‌: ಇಲ್ಲಿದೆ ಸರಳ ಮಾರ್ಗ

E-khatha Goodnews: ಬೆಂಗಳೂರಲ್ಲಿ ಆಸ್ತಿಗಳಿಗೆ ಇ - ಖಾತಾ ಪ್ರಕ್ರಿಯೆನ್ನು ಬಿಬಿಎಂಪಿ ಪ್ರಾರಂಭಿಸಿದೆ. ಆದರೆ, ಇದರಲ್ಲಿ ಸಾಕಷ್ಟು ಗೊಂದಲ ಉಂಟಾಗಿದ್ದು, ನಮ್ಮ ಖಾತಾ ಡಿಜಿಟಲೀಕರಣ ಆಗಿದೆಯೇ ಇಲ್ಲವೇ ಎಂದು ತಿಳಿಯದೆ ಜನ ಗೊಂದಲಕ್ಕೆ ಒಳಗಾಗುತ್ತಿದ್ದಾರೆ.

ಇದೀಗ ಜನರ ಗೊಂದಲ ಹಾಗೂ ಸಮಸ್ಯೆಗಳನ್ನು ತಪ್ಪಿಸಿ ಇ - ಖಾತಾ ಪ್ರಕ್ರಿಯೆಯನ್ನು ಸರಳೀಕರಣ ಮಾಡಲು ಪಾಲಿಕೆ ಮುಂದಾಗಿದೆ. ಬೆಂಗಳೂರಿನಲ್ಲಿ ಆಸ್ತಿಗಳು ಇ -ಖಾತಾ (ಡಿಜಲೀಕರಣ - ಡಿಜಿಟಲ್‌ ಅಪ್ಲೋಡ್‌) ಪ್ರಕ್ರಿಯೆಯನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಪ್ರಾರಂಭಿಸಿದೆ. ಆದರೆ, ಇದರಲ್ಲಿ ಕೆಲವು ಗೊಂದಲಗಳು ಇದೆ ಎಂದು ಜನ ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಪರಿಹಾರ ನೀಡಲಾಗುತ್ತಿದೆ.

E-Katha Goodnews Break to E-Katha Confusion Here s a Simple Way

ಬೆಂಗಳೂರಲ್ಲಿರುವ ಆಸ್ತಿಗಳನ್ನು ಪಾಲಿಕೆಯು ಇ - ಖಾತಾ ಮಾಡ್ತಿದೆ. ಅಂದರೆ ಆಸ್ತಿಗಳ ಮಾಹಿತಿಯನ್ನು ಆನ್‌ಲೈನ್‌ ಅಥವಾ ಡಿಜಿಟಲ್‌ ಅಪ್ಡೇಟ್‌ ಮಾಡುವುದು. ಇದಕ್ಕೆ ಜನರಿಂದಲೂ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ನಮ್ಮ ಆಸ್ತಿ ಇ - ಖಾತಾಗೆ ಸೇರಿದ್ಯಾ ಇಲ್ಲವಾ ಅಂತ ಗೊತ್ತಾಗದೆ ಜನ ಗೊಂದಲದಲ್ಲಿ ಇದ್ದಾರೆ.

ಈ ಗೊಂದಲಗಳನ್ನು ತಪ್ಪಿಸುವಂತೆ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಅವರು, ಬಿಬಿಎಂಪಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಇದರ ಭಾಗವಾಗಿ ಬಿಬಿಎಂಪಿಯ ಎಲ್ಲಾ ವಲಯಗಳಲ್ಲೂ ಅಧಿಕಾರಿಗಳ ತಂಡ ಹಾಗೂ ಹೆಲ್ಪ್‌ ಡೆಸ್ಕ್‌ ರಚಿಸಲಾಗಿದೆ.

ಇನ್ನು ಬೆಂಗಳೂರಿನಲ್ಲಿ 20 ಲಕ್ಷಕ್ಕೂ ಹೆಚ್ಚು ಇ - ಖಾತಾಗಳನ್ನು ಈಗಾಗಲೇ ಮಾಡಲಾಗಿದೆ. ಸಾಮಾನ್ಯವಾಗಿ ಆಸ್ತಿ ಮಾರಾಟ, ಖರೀದಿ ಅಥವಾ ಮರು ಮಾರಾಟ ಸೇರಿದಂತೆ ಆಸ್ತಿ ವಿಚಾರದಲ್ಲಿ ಖಾತಾ ಎನ್ನುವುದು ಬಹಳ ಮುಖ್ಯವಾಗುತ್ತದೆ. ಬೆಂಗಳೂರಲ್ಲಿ ಲಕ್ಷಾಂತರ ಆಸ್ತಿ ಇದೆ.

ಇದೀಗ ಬಿಬಿಎಂಪಿ ಹಂತ ಹಂತವಾಗಿ ಆಸ್ತಿಗಳನ್ನು ಇ - ಖಾತಾಗೆ ಸೇರಿಸುತ್ತಿದೆ. ಆಸ್ತಿಗಳ ಸಂರಕ್ಷಣೆ, ಆಸ್ತಿ ಮೋಸ ತಪ್ಪಿಸುವುದು ಹಾಗೂ ಆನ್‌ಲೈನ್‌ನಲ್ಲೇ ಆಸ್ತಿ ವಿವರ ಲಭ್ಯವಾಗುವುದು ಸೇರಿದಂತೆ ಇ - ಖಾತಾದಿಂದ ಹಲವು ಉಪಯೋಗಗಳು ಆಸ್ತಿ ಮಾಲೀಕರಿಗೆ ಹಾಗೂ ಖರೀದಿ ಮಾಡುವವರಿಗೆ ಸಿಗಲಿದೆ.

ಈ ನಡುವೆ ಕೆಲವು ಆಯ್ದ ಖಾತಾಗಳ ಇ -ಖಾತಾ ಆಗಿದೆ. ಇ- ಖಾತಾ ಮಾಡಿಸಲು ಏನು ಮಾಡಬೇಕು. ನಮ್ಮ ಆಸ್ತಿಗಳು ಇ - ಖಾತಾ ಆಗಿದೆಯೇ ಎನ್ನುವುದು ಜನರಲ್ಲಿ ಇರುವ ಗೊಂದಲ. ಇದನ್ನು ತಪ್ಪಿಸುವ ಉದ್ದೇಶದಿಂದ ಇದೀಗ ಬಿಬಿಎಂಪಿಯು ಬೆಂಗಳೂರಿನ ಎಂಟು ವಲಯಗಳಲ್ಲಿ ಹೆಲ್ಪ್‌ ಡೆಸ್ಕ್‌ ಪ್ರಾರಂಭಿಸಿದೆ.

ಇ - ಖಾತಾಗೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳು ಇದ್ದರೂ, ನೀವು ಈ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಇ - ಖಾತಾದಲ್ಲಿನ ಸಮಸ್ಯೆಗಳನ್ನು ತಪ್ಪಿಸುವ ಉದ್ದೇಶದಿಂದಲೇ ಈ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ.

ಹೆಲ್ಪ್‌ ಡೆಸ್ಕ್‌ (ಸಹಾಯವಾಣಿ) ಮಾಹಿತಿ ಈ ರೀತಿ ಇದೆ

ಪೂರ್ವ ವಲಯ - 9480683203

ದಕ್ಷಿಣ ವಲಯ - 9480683179

ಪಶ್ಚಿಮ ವಲಯ - 9480683204

ಬೊಮ್ಮನಹಳ್ಳಿ ವಲಯ - 9480683182

ದಾಸರಹಳ್ಳಿ ವಲಯ - 9480683710

ಮಹಾದೇವಪುರ ವಲಯ - 9480683720

ರಾಜರಾಜೇಶ್ವರಿ (ಆರ್.ಆರ್) ನಗರ ವಲಯ - 9480683645

ಯಲಹಂಕ ವಲಯ - 9480683516

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+