ಕಸ ಸಮಸ್ಯೆ: ಲೋಕಸತ್ತಾದಿಂದ ಭಾನುವಾರ ಪ್ರತಿಭಟನೆ

ಬೆಂಗಳೂರು, ಜೂ.14: ಮಂಡೂರು ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸ ಹಾಕುವುದನ್ನು ವಿರೋಧಿಸಿ 'ಡಂಪಿಂಗ್ ಸಾಕು' ಎಂಬ ಪ್ರತಿಭಟನಾ ಅಭಿಯಾನವನ್ನು ನಗರದಲ್ಲಿ ಲೋಕಸತ್ತಾ ಪಕ್ಷ ಜೂನ್ 15 ಭಾನುವಾರದಂದು ಆಯೋಜಿಸಿದೆ.

ಬೆಳಿಗ್ಗೆ 7ರಿಂದ 10 ಗಂಟೆಯವರೆಗೆ ಲೋಕಸತ್ತಾ ಪಕ್ಷವು ಬೆಂಗಳೂರಿನ ಬಸವನಗುಡಿ ವಿಧಾನಸಭಾ ಕ್ಷೇತ್ರದ ಶ್ರೀನಗರ, ಹನುಮಂತನಗರ ಪ್ರದೇಶದ ಮನೆಗಳಿಂದ ಕಸವನ್ನು ಸಂಗ್ರಹಣೆ ಮಾಡಿ ಜನತೆಯಲ್ಲಿ ಅರಿವು ಮೂಡಿಸಲಿದೆ.[ಮೇಯರ್ ವಿದೇಶ ಪ್ರವಾಸಕ್ಕೆ ಲೋಕಸತ್ತಾ ವಿರೋಧ]

Loksatta protest

ಪ್ರತಿಭಟನೆಯ ಜೊತೆಗೆ ಬಸವನಗುಡಿ ಕ್ಷೇತ್ರದ ಶಾಸಕರಿಗೆ ಮತ್ತು ಪಾಲಿಕೆ ಸದಸ್ಯರುಗಳಿಗೆ ಈ ಬಗ್ಗೆ ಮನವಿ ಪತ್ರ ಸಲ್ಲಿಸಿ, ಮಂಡೂರಿನ ಜನತೆಗೆ ನ್ಯಾಯ ದೊರಕಿಸಿ, ನಗರದ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಒತ್ತಾಯಿಸಲಿದೆ.

ಕಸ ಸಮಸ್ಯೆಗೆ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿರುವ ಲೋಕಸತ್ತಾ ಪಕ್ಷ ಜೂನ್‌.8 ರಂದು ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗ ರೆಡ್ಡಿಯವರ ಮನೆ ಸುತ್ತಮುತ್ತಾ ಕಸವನ್ನು ಎತ್ತಿ ಪ್ರತಿಭಟನೆ ನಡೆಸಿದ್ದರು.[ಸಚಿವರ ಮನೆ ಸುತ್ತ ಕಸ ಎತ್ತಿ ಲೋಕಸತ್ತಾ ಪ್ರತಿಭಟನೆ]

ಮಂಡೂರಿನ ಕಸದ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆ ಯಾವುದೇ ತೀರ್ಮಾ‌ನಕ್ಕೆ ಬಾರದೇ ವಿಫಲವಾಗಿದೆ. ಈ ನಡುವೆ ಕೆಲ ಗ್ರಾಮಸ್ಥರು ಘಟಕ ಸ್ಥಗಿತಗೊಳಿಸುವುದಾಗಿ ಮುಚ್ಚಳಿಕೆ ನೀಡಿದರಷ್ಟೇ ಮೂರು ತಿಂಗಳ ಕಾಲಾವಕಾಶ ನೀಡುವುದಾಗಿ ಹೇಳಿದ್ದಾರೆ.[ಕಸ ಕಿತ್ತಾಟ: ಸಿಎಂ ಸಿದ್ದರಾಮಯ್ಯ ಸಂಧಾನ ಸಭೆ ವಿಫಲ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+