Get Updates
Get notified of breaking news, exclusive insights, and must-see stories!

ವ್ಯಾಪಾರದಲ್ಲಿ ನಷ್ಟದಿಂದ ರಕ್ತಚಂದನ ಕಳ್ಳಸಾಗಣೆಗಿಳಿದ ಜಿಮ್‌ ಮಾಲೀಕ

ಬೆಂಗಳೂರು, ಡಿಸೆಂಬರ್‌ 15: ವ್ಯಾಪಾರದಲ್ಲಿ ಭಾರೀ ನಷ್ಟ ಅನುಭವಿಸಿದ ಕಾರಣ ರಕ್ತಚಂದನದ ಮರಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಜಿಮ್ ಮಾಲೀಕನೊಬ್ಬನನ್ನು ಪೂರ್ವ ಬೆಂಗಳೂರಿನ ಎಚ್‌ಆರ್‌ಬಿಆರ್‌ ಲೇಔಟ್‌ನಲ್ಲಿ 12 ಲಕ್ಷ ರೂಪಾಯಿ ಮೌಲ್ಯದ 101 ಕೆಜಿ ರಕ್ತಚಂದನದ ಮರಗಳೊಂದಿಗೆ ಪೊಲೀಸರು ಬಂಧಿಸಿದ್ದಾರೆ.

ಎಚ್‌ಆರ್‌ಬಿಆರ್ ಲೇಔಟ್ 1ನೇ ಬ್ಲಾಕ್‌ನಲ್ಲಿ ಟೊಯೊಟಾ ಎಟಿಯೋಸ್ ಜಿಡಿ ವಾಹನವನ್ನು ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ರಕ್ತಚಂದನದ ಮರವನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಸುಳಿವು ಪಡೆದ ಹೆಣ್ಣೂರು ಪೊಲೀಸರು ಚನ್ನಪಟ್ಟಣ ತಾಲ್ಲೂಕಿನ ಕುಟಕಲ್ಲೇಗೌಡ (27) ಎಂಬಾತನನ್ನು ಡಿಸೆಂಬರ್ 12 ರಂದು ಬಂಧಿಸಿದ್ದಾರೆ.

ಹೆಣ್ಣೂರು ಇನ್ಸ್‌ಪೆಕ್ಟರ್ ಎಲ್ ಸಂತೋಷ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಸಂಜೆ 4.30 ರ ಸುಮಾರಿಗೆ ಸ್ಥಳಕ್ಕೆ ಧಾವಿಸಿ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿತು. ಆಗ ಕಾರಿನಲ್ಲಿ ಹುಡುಕಾಡಿದಾಗ 11 ರಕ್ತಚಂದನದ ಮರಗಳು ಪತ್ತೆಯಾದವು.

Due to Business losses gym owner do smuggling red Sandalwoods

ರಾಮನಗರ ಅರಣ್ಯದಲ್ಲಿರುವ ಕೆಂಪು ರಕ್ತಚಂದನದ ಮರಗಳನ್ನು ಕಡಿದು ಬೆಂಗಳೂರಿನಲ್ಲಿ ಮಾರಾಟ ಮಾಡಲು ಬಯಸಿದ್ದೆ ಎಂದು ಕುತಕಲ್ಲೇಗೌಡ ಪೊಲೀಸರಿಗೆ ಆರಂಭದಲ್ಲಿ ತಿಳಿಸಿದ್ದ. ಆದರೆ ಕೆಲವು ತಿಂಗಳ ಹಿಂದೆ ತನ್ನ ತವರು ಗ್ರಾಮದ ವ್ಯಕ್ತಿಯೊಬ್ಬರಿಂದ ಬೆಲೆಬಾಳುವ ಮರವನ್ನು ಪಡೆದಿರುವುದಾಗಿ ಮತ್ತು ಅದನ್ನು ಮಾರಾಟ ಮಾಡಲು ಕೇಳಲಾಗಿದೆ ಎಂದು ಅವನು ಒಪ್ಪಿಕೊಂಡಿದ್ದನು. ಆ ವ್ಯಕ್ತಿ ತನ್ನೊಂದಿಗೆ ಹಣವನ್ನು ಹಂಚಿಕೊಳ್ಳುವುದಾಗಿ ಭರವಸೆ ನೀಡಿದ್ದ ಎಂದು ತಿಳಿಸಿದ್ದನು.

ಮತ್ತಿಕೆರೆಗೆ ಗ್ರಾಮಕ್ಕೆ ಪೊಲೀಸರು ಭೇಟಿ ನೀಡಿದಾಗ ಕುಟಕಲ್ಲೇಗೌಡ ಎಂಬಾತನಿಗೆ ರಕ್ತಚಂದನ ಸರಬರಾಜು ಮಾಡುತ್ತಿದ್ದ ವ್ಯಕ್ತಿ ಇತ್ತೀಚೆಗೆ ಮೃತಪಟ್ಟಿರುವುದನ್ನು ಕಂಡು ಆಘಾತಕ್ಕೊಳಗಾದರು. ಆಗ ಸತ್ಯ ಬಿಚ್ಚಿಟ್ಟ ಕುತಕಲ್ಲೇಗೌಡ ತಾನು ಕಾಡಿನಲ್ಲಿ ಕೆಲವು ಕೆಂಪು ರಕ್ತ ಚಂದನದ ಮರಗಳನ್ನು ಕತ್ತರಿಸಿ ಸತ್ತವರಿಂದ ತುಂಡುಗಳನ್ನು ಪಡೆದಂತೆ ನಾಟಕವಾಡಿರುವುದಾಗಿ ತಿಳಿಸಿದನು.

Due to Business losses gym owner do smuggling red Sandalwoods

ಚನ್ನಪಟ್ಟಣದಲ್ಲಿ ನಡೆಸುತ್ತಿದ್ದ ಜಿಮ್‌ನಲ್ಲಿ 35 ಲಕ್ಷ ರೂಪಾಯಿ ಹೂಡಿಕೆ ಮಾಡಿರುವುದಾಗಿ ಕುಟಕಲ್ಲೇಗೌಡ ಪೊಲೀಸರಿಗೆ ತಿಳಿಸಿದ್ದಾನೆ. ಸಾಂಕ್ರಾಮಿಕ ರೋಗ ಕೋವಿಡ್‌ನಿಂದ ಅವನ ಜಿಮ್‌ ಉದ್ಯಮವನ್ನು ಹಾಳುಮಾಡಿತು. ಆತ ಹಲವೆಡೆ ಸಾಲಗಳನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಆತ ರಕ್ತಚಂದನದ ಮರಗಳನ್ನು ಕಳ್ಳಸಾಗಣೆ ಮಾಡಲು ಮತ್ತು ತ್ವರಿತ ಲಾಭವನ್ನು ಮಾಡಲು ನಿರ್ಧರಿಸಿದನು ಎಂದು ತಿಳಿದು ಬಂದಿದೆ. ಆತನ ಮೇಲೆ ಕಳ್ಳತನ ಮತ್ತು ಕರ್ನಾಟಕ ಅರಣ್ಯ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+