ಕುಡಿದ ಮತ್ತಿನಲ್ಲಿ ಅಪಘಾತ ಮಾಡಿ ಪೆಟ್ಟು ತಿಂದ ಎಎಸ್ಐ

Traffic Police
ಬೆಂಗಳೂರು, ಜೂ. 23 : ಪಾನಮತ್ತರಾಗಿ ವಾಹನ ಚಾಲನೆ ಮಾಡುವವರನ್ನು ಹಿಡಿದು ದಂಡ ಹಾಕುವ ಕೆಲಸ ಮಾಡಬೇಕಾದ ಸಂಚಾರಿ ಪೊಲೀಸರೊಬ್ಬರು ಕುಡಿದ ಮತ್ತಿನಲ್ಲಿ ಅಪಘಾತ ಮಾಡಿದ್ದಾರೆ. ಬೇರೆಯವರ ವಾಹನಕ್ಕೆ ಗುದ್ದಿ, ಜನರ ಜೊತೆ ಅಸಭ್ಯವಾಗಿ ವರ್ತಿಸಿದ್ದರಿಂದ ಸಾರ್ವಜನಿಕರು ಪೊಲೀಸರಿಗೆ ಧರ್ಮದೇಟು ನೀಡಿರುವ ಘಟನೆ ಮಲ್ಲೇಶ್ವರಂನಲ್ಲಿ ನಡೆದಿದೆ.

ಭಾನುವಾರ ರಾತ್ರಿ 8:30ರ ಸುಮಾರಿಗೆ ಮಲ್ಲೇಶ್ವರಂ 7ನೇ ಕ್ರಾಸ್‌ ಚಾಮರಾಜಪೇಟೆ ಸಂಚಾರಿ ಠಾಣೆ ಎಎಸ್‌ಐ ಈಶ್ವರಪ್ಪ ಅವರು ಕಂಠಪೂರ್ತಿ ಕುಡಿದು ತನ್ನ ಬುಲೆಟ್ ಬೈಕ್ ನಲ್ಲಿ ಹೋಗುತ್ತಿದ್ದಾಗ, ಮುಂದೆ ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಇದನ್ನು ಪ್ರಶ್ನಿಸಿದ ಕಾರು ಚಾಲಕ ಹಾಗೂ ಸಾರ್ವಜನಿಕರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. [ಈ ಟ್ರಾಫಿಕ್‌ ಪೊಲೀಸ್‌ ಅಂದ್ರೆ ಜನರಿಗೆ ಅಚ್ಚುಮೆಚ್ಚು]

ಪೊಲೀಸಪ್ಪನ ವರ್ತನೆಯಿಂದ ಸಿಟ್ಟಿಗೆದ್ದ ಸಾರ್ವಜನಿಕರು ಎಎಸ್ಐಗೆ ಧರ್ಮದೇಟು ಕೊಟ್ಟಿದ್ದಾರೆ. ಪೊಲೀಸ್ ನನ್ನ ಕಾರಿಗೆ ಗುದ್ದಿದ ಎಂದು ಮಲ್ಲೇಶ್ವರಂ ನಿವಾಸಿಯಾದ ಕಾರು ಚಾಲಕ ಶಾಂತಿಲಾಲ್ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಎಸ್ಐ ವಿರುದ್ದ ದೂರು ದಾಖಲಿಸಿದ್ದಾರೆ. ಮಲ್ಲೇಶ್ವರಂ ಪೊಲೀಸರು ಎಎಸ್ಐ ಈಶ್ವರಪ್ಪನನ್ನು ವಶಕ್ಕೆ ಪಡೆದುಕೊಂಡು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಕುಡಿದು ವಾಹನ ಓಡಿಸುತ್ತಿದ್ದ ಸಂಗತಿ ಬಯಲಾಗಿದೆ. [ಟ್ರಾಫಿಕ್ ಪೊಲೀಸು ಕೆಲಸ ಯಾರಿಗೆ ಬೇಕು ಹೇಳಿ?]

ಘಟನೆಯ ಬಗ್ಗೆ ಪರಿಶೀಲನೆ ನಡೆಸಿದ ಪಶ್ಚಿಮ ವಲಯ ಸಂಚಾರ ಪೊಲೀಸ್ ಡಿಸಿಪಿ ಗಿರೀಶ್, ಎಎಸ್ಐ ಈಶ್ವರಪ್ಪರನ್ನು ತಕ್ಷಣದಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಜನರಿಗೆ ಕುಡಿದು ವಾಹನ ಓಡಿಸಬೇಡಿ ಎಂದು ಬುದ್ಧಿ ಹೇಳಬೇಕಾಗಿದ್ದ ಪೊಲೀಸ್ ಪಾನಮತ್ತನಾಗಿ ಗಾಡಿ ಓಡಿಸಿ, ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+