ಮಕ್ಕಳ ಆಟಿಕೆಯಲ್ಲಿಟ್ಟು ಬೆಂಗಳೂರಲ್ಲಿ ಡ್ರಗ್ಸ್ ಮಾರಾಟ!
ಬೆಂಗಳೂರು, ಆಗಸ್ಟ್ 27 : ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಎನ್‌ಸಿಬಿ ದಾಳಿ ನಡೆಸಿ ಕೋಟ್ಯಾಂತರ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದೆ. ನಗರದಲ್ಲಿ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ರೀತಿ ಅಚ್ಚರಿ ಮೂಡಿಸಿದೆ.
Recommended Video
ಸಿನಿಮಾ ನಟ, ನಟಿಯರು ಮತ್ತು ಸಂಗೀತ ನಿರ್ದೇಶಕರು ಮಾದಕ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದರು ಎಂಬ ಮಾಹಿತಿಯನ್ನು ಮಾದಕವಸ್ತು ನಿಯಂತ್ರಣ ಮಂಡಳಿ (ಎನ್‍ಸಿಬಿ) ಸಂಗ್ರಹ ಮಾಡಿದೆ.
ರಟ್ಟಿನ ಬಾಕ್ಸ್, ಮಕ್ಕಳ ಆಟಿಕೆಗಳಲ್ಲಿ ಮಾದಕ ವಸ್ತುಗಳನ್ನು ಇಟ್ಟು ಬೇಡಿಕೆ ಸಲ್ಲಿಸಿದವರಿಗೆ ಪೂರೈಕೆ ಮಾಡಲಾಗುತ್ತಿತ್ತು ಎಂಬ ಅಂಶ ತನಿಖೆಯಲ್ಲಿ ಗೊತ್ತಾಗಿದೆ. ಜರ್ಮನಿ, ಬೆಲ್ಜಿಯಂ ದೇಶಗಳಿಂದ ನಗರಕ್ಕೆ ಮಾದಕ ವಸ್ತು ಪೂರೈಕೆ ಆಗುತ್ತಿತ್ತು. ಮಾದಕ ವಸ್ತುಗಳನ್ನು ಪಡೆಯುತ್ತಿದ್ದವರ ವಿಚಾರಣೆ ನಡೆಸಲು ಪೊಲೀಸರು ತೀರ್ಮಾನಿಸಿದ್ದಾರೆ.

ದೊಡ್ಡ ಗುಬ್ಬಿಯ ಮನೆಯಲ್ಲಿ ಮಾದಕ ವಸ್ತುಗಳನ್ನು ಸಂಗ್ರಹ ಮಾಡಿದ್ದ ಅನಿಕಾ ನಗರದಲ್ಲಿ ಅದನ್ನು ಪೂರೈಕೆ ಮಾಡುತ್ತಿದ್ದಳು. ಅನಿಕಾ, ಅನೂಪ್ ಹಾಗೂ ರಾಜೇಶ್ ಈ ದಂಧೆಯಲ್ಲಿ ತೊಡಗಿದ್ದರು. ಕೆ. ರೆಹಮಾನ್ ಎಂಬ ವ್ಯಕ್ತಿ ಹೆಸರಲ್ಲಿ ಡ್ರಗ್ಸ್ ಬುಕ್ ಮಾಡಲಾಗುತ್ತಿತ್ತು.
ಬೆಂಗಳೂರು ನಗರದ ಮೂರು ಸ್ಥಳಗಳ ಮೇಲೆ ಆಗಸ್ಟ್ 21ರಂದು ನಡೆದ ದಾಳಿಯಲ್ಲಿ ಈ ಮಾದಕ ವಸ್ತುಗಳ ಮಾರಾಟ ಜಾಲ ಪತ್ತೆಯಾಗಿದೆ. ಈಗ ಮಾದಕ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದ ಗಣ್ಯ ವ್ಯಕ್ತಿಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ.
ದೇವನಹಳ್ಳಿಯಲ್ಲಿ ಗ್ರಾಹಕರಿಗೆ ಮೂವರು ಮಾದಕ ವಸ್ತುಗಳನ್ನು ಮಾರಾಟ ಮಾಡಲು ಮುಂದಾಗಿದ್ದರು. ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳು ಮೂವರನ್ನು ಬಂಧಿಸಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಜುಲೈ 31ರಂದು ಬೆಂಗಳೂರಿನಲ್ಲಿ 750 ಎಂಡಿಎಂಎ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಪ್ರಕರಣದ ಬೆನ್ನುಹತ್ತಿದ ಪೊಲೀಸರು ಆಗಸ್ಟ್ 21ರಂದು ಮೂರು ಕಡೆ ದಾಳಿ ಮಾಡಿದ್ದರು. ಬೇರೆ-ಬೇರೆ ನಗರಗಳಿಗೂ ಆರೋಪಿಗಳು ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಬಗ್ಗೆ ಶಂಕೆಗಳಿವೆ.












Click it and Unblock the Notifications