110 ಕೆ.ಜಿ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳನ್ನು ಬಂಧಿಸಿದ ಎಸಿಪಿ ಸ್ಕ್ವಾಡ್
ಬೆಂಗಳೂರು, ಜು. 05: ದೇವನಹಳ್ಳಿಯಿಂದ ಬೆಂಗಳೂರು ಕಡೆಗೆ ಸುಮಾರು ನೂರು ಕೆ.ಜಿ ಗಾಂಜಾವನ್ನು ಕಾರು ಮೂಲಕ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕೆಂಗೇರಿ ಗೇಟ್ ಎಸಿಪಿ ಸ್ಪೆಷಲ್ ಸ್ವ್ಯಾಡ್ ಪತ್ತೆ ಮಾಡಿದೆ. ಮಹೀಂದ್ರ ವಾಹನದಲ್ಲಿ ಗಾಂಜಾವನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕೆಂಗೇರಿ ಗೇಟ್ ಉಪ ವಿಭಾಗದ ಎಸಿಪಿ ಯು.ಡಿ.ಕೃಷ್ಣಕುಮಾರ್ ನೇತೃತ್ವದ ವಿಶೇಷ ತಂಡ ದಾಳಿ ಮಾಡಿದೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ 110 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಗಾಂಜಾ ಜಾಲ ದೊಡ್ಡದು: ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಮೂಲಕ ಬೆಂಗಳೂರಿಗೆ ಗಾಂಜಾ ಸಾಗಣೆ ಮಾಡುವ ದೊಡ್ಡ ಜಾಲ ಸಕ್ರಿಯವಾಗಿದೆ. ಇತ್ತೀಚೆಗೆ ಬೆಂಗಳೂರು ಎನ್ ಸಿಬಿ ಅಧಿಕಾರಿಗಳು ದೊಡ್ಡ ಜಾಲ ಪತ್ತೆ ಮಾಡಿದ್ದರು. ಇದರ ನಡುವೆಯೂ ದೇವನಹಳ್ಳಯಿಂದ ಬೆಂಗಳೂರಿನ ಕೆಂಗೇರಿ ಉಪ ನಗರಕ್ಕೆ ಕಾರಿನಲ್ಲಿ 110 ಕೆ.ಜಿ. ಗಾಂಜಾ ಸಾಗಣೆ ಮಾಡುತ್ತಿದ್ದರು. ಇದರ ಜಾಡು ಹಿಡಿದ ಕೆಂಗೇರಿ ಗೇಟ್ ಎಸಿಪಿ ಸ್ಕ್ವಾಡ್ ಪೊಲೀಸರು, 110 ಕೆ.ಜಿ ಗಾಂಜಾ ಹಾಗೂ ಕಾರು ವಶಕ್ಕೆ ತೆಗೆದುಕೊಂಡಿದ್ದಾರೆ.

ಇದರಲ್ಲಿ ಶಾಮೀಲಾಗಿರುವ ಇಬ್ಬರು ಅರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗಾಂಜಾ ಸಾಗಿಸುವ ವೇಳೆ ಅಡ್ಡಿಪಡಿಸುವರ ವಿರುದ್ಧ ದಾಳಿ ನಡೆಸಲು ಡ್ರಾಗರ್ ಹೊಂದಿರುವುದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಈ ಕುರಿತು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
Recommended Video













Click it and Unblock the Notifications