• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಮ್ಮನಹಳ್ಳಿಯಲ್ಲಿ ಡ್ರಗ್ ಹಬ್ ಸೃಷ್ಟಿಸಿದ್ದ ಪೆಡ್ಲರ್ ಅನೂಪ್

|

ಡ್ರಗ್ ಡೀಲರ್ ಅನಿಕಾ ಬಳಿ ಕಾರ್ಯ ನಿರ್ವಹಿಸುತ್ತಿದ್ದ ಬಂಧಿತ ಪೆಡ್ಲರ್ ಅನೂಪ್ ಬೆಂಗಳೂರಿನ ಕಮ್ಮನಹಳ್ಳಿಯನ್ನು ಡ್ರಗ್ ಮಾಫಿಯಾ ಹಬ್ ಆಗಿ ಪರಿವರ್ತಿಸಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ಅನಿಕಾಳಿಗೆ ಕನ್ನಡ ಚಿತ್ರರಂಗದ ಜೊತೆ ನಂಟಿದ್ದರೆ, ಅನೂಪ್ ಮಲೆಯಾಳಂ ಚಿತ್ರರಂಗ ನಂಟು ಬೆಳೆಸಿಕೊಂಡು ಅಲ್ಲಿನ ರಿಯಲ್ ಎಸ್ಟೇಟ್ ದಂಧೆಯಲ್ಲೂ ತೊಡಗಿಸಿಕೊಂಡಿದ್ದ.

   ರಾಗಿಣಿ ಮನೆಗೆ ಪೋಲೀಸರ ಎಂಟ್ರಿ | Oneindia Kannada

   ಮದ್ಯ, ಮಾದಕ ವಸ್ತುಗಳು ಹಾನಿಕಾರಕ ಹೌದೋ? ಅಲ್ಲವೋ?

   ಡ್ರಗ್ ಡೀಲರ್ ಅನಿಕಾ ಬಳಿ ಇದ್ದ ಡೈರಿಯಲ್ಲಿ ಸಿನಿಮಾ, ಸಂಗೀತ, ರಾಜಕಾರಣಿಗಳ ನಂಬರ್ಸ್ ಇವೆ ಎಂಬ ಮಾಹಿತಿ ಸಿಸಿಬಿಯಿಂದಲೇ ಬಂದಿದೆ. ಈ ಬಗ್ಗೆ ಸದ್ಯ ಬೆಂಗಳೂರಿನ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಮಾನಾಂತರವಾಗಿ ಸಿನಿಮಾ ಸೆಲೆಬ್ರಿಟಿಗಳ ವಿಚಾರಣೆಯನ್ನು ಸಿಸಿಬಿ ಕೈಗೆತ್ತಿಕೊಂಡಿದೆ.

   ಗಾರ್ಡನ್ ಸಿಟಿ ಡ್ರಗ್ಸ್ ಘಾಟು; ಸೇಲಂ ಪೊಣ್ಣು, ಆಫ್ರಿಕಾ ಜುಂಬೋ ನಶೆ

   ಅನಿಕಾ ಡೈರಿಯಿಂದ 10-15 ಚಿತ್ರರಂಗಕ್ಕೆ ಸಂಬಂಧಪಟ್ಟವರ ಹೆಸರು ಇರುವುದನ್ನು ಖಚಿತಪಡಿಸಿದ್ದಾರೆ. ಸಿನಿಮಾ ರಂಗದವರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ.

   ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

   ಸಿಂಥೆಟಿಕ್ ಡ್ರಗ್ ರಾಕೆಟ್ ಜಾಲ ಪ್ರಕರಣದಲ್ಲಿ Narcotics Control Bureau(NCB) ಬಂಧಿಸಿರುವ ಮೂವರು ಆರೋಪಿಗಳ ಪೈಕಿ ಅನಿಕಾ ಡಿ ಪ್ರಮುಖಳಾಗಿದ್ದಾಳೆ. ಮಿಕ್ಕಂತೆ ಅನೂಪ್ ಹಾಗೂ ರಿಜೇಶ್ ಆಕೆಗೆ ಸಹಾಯಕರಾಗಿದ್ದಾರೆ.

   ಕಮ್ಮನಹಳ್ಳಿಯಲ್ಲಿ ಹಯಾತ್ ಎಂಬ ಡ್ರಗ್ ರೆಸ್ಟೋರೆಂಟ್

   ಕಮ್ಮನಹಳ್ಳಿಯಲ್ಲಿ ಹಯಾತ್ ಎಂಬ ಡ್ರಗ್ ರೆಸ್ಟೋರೆಂಟ್

   ಮೊಹಮ್ಮದ್ ಅನೂಪ್ ಆರಂಭಿಸಿದ ಹಯಾತ್(Hayat) ಹೋಟೆಲ್ ನಲ್ಲಿ ಅನೇಕ ಡೀಲ್ ಗಳು ಆಗುತ್ತಿದ್ದವು. ವಿದೇಶದಿಂದ(ಮುಖ್ಯವಾಗಿ ಆಫ್ರಿಕಾದ ದೇಶಗಳಿಂದ) ವಿದ್ಯಾರ್ಥಿ ವೀಸಾ ಪಡೆದು ಬಂದವರು ವೀಸಾ ಅವಧಿ ಮುಗಿದ ಮೇಲೂ ಬೆಂಗಳೂರಲ್ಲೇ ನೆಲೆಸುವುದು ಹೇಗೆ? ಇಲ್ಲಿನ ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡು ಹಣ ಮಾಡುವುದು ಹೇಗೆ? ಎಂಬುದು ಕೂಡಾ ಇಲ್ಲಿ ಡೀಲ್ ಆಗುತ್ತಿತ್ತು. ಜೊತೆಗೆ ಸಿನಿಮಾ, ಸಂಗೀತ ರಂಗದ ಸೆಲೆಬ್ರಿಟಿ ಗ್ರಾಹಕರ ಜೊತೆ ಡೀಲ್ ಹಾಗೂ ಡ್ರಗ್ಸ್ ಪೂರೈಕೆ ವಿಧಾನ ಕೂಡಾ ಇಲ್ಲೇ ವಿವರಿಸುತ್ತಿದ್ದ.

   ವಿದೇಶದಿಂದ ನೇರ ನಿಮ್ಮ ಮನೆಗೆ

   ವಿದೇಶದಿಂದ ನೇರ ನಿಮ್ಮ ಮನೆಗೆ

   ಯುಎಸ್, ಕೆನಡಾ, ಜರ್ಮನಿಯಿಂದ ಉತ್ತಮ ಗುಣಮಟ್ಟದ ಡ್ರಗ್ಸ್ ತರೆಸಿಕೊಂಡು ಇಲ್ಲಿನ ಅತಿ ಶ್ರೀಮಂತರ ಮನೆ ಮಕ್ಕಳಿಗೆ ಹಂಚಲಾಗುತ್ತಿತ್ತು. ಬೆಂಗಳೂರು ಅಲ್ಲದೆ ಮುಂಬೈ, ಗೋವಾ, ದೆಹಲಿಯಲ್ಲಿ ಡಾರ್ಕ್ ನೆಟ್ ಬಳಸಿ ಖರೀದಿ ನಡೆಸುತ್ತಿದ್ದರು. ಖರೀದಿ ಪೇಮೆಂಟ್ ಬಿ ಕಾಯಿನ್ ರೀತಿ ಕ್ರಿಪ್ಟೋಕರೆನ್ಸಿ ಬಳಕೆಯಾಗುತ್ತಿತ್ತು. ಇದೇ ವಾರದಲ್ಲಿ ಅಮೆರಿಕದಿಂದ ಬೆಂಗಳೂರಿಗೆ ಬಂದ ಕಾರ್ಗೋ ವಿಮಾನದಲ್ಲಿ 2 ಕೋಟಿ ರು ಬೆಲೆ ಬಾಳುವ ಗಾಂಜಾ ವಶಪಡಿಸಿಕೊಳ್ಳಲಾಯಿತು. ಬೆಂಗಳೂರು, ತುಮಕೂರು ಹಾಗೂ ಹೈದರಾಬಾದಿಗೆ ಇದು ಪೂರೈಕೆಯಾಗಬೇಕಿತ್ತು.

   ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

   ಡ್ರಗ್ ಜಾಲದಲ್ಲಿ ಅನಿಕಾ ಡಿ ಪ್ರಮುಖ ಆರೋಪಿ

   ಡ್ರಗ್ ಜಾಲದಲ್ಲಿ ಅನಿಕಾ ಡಿ ಪ್ರಮುಖ ಆರೋಪಿ

   ಸಿಂಥೆಟಿಕ್ ಡ್ರಗ್ ರಾಕೆಟ್ ಜಾಲ ಪ್ರಕರಣದಲ್ಲಿ Narcotics Control Bureau(NCB) ಬಂಧಿಸಿರುವ ಮೂವರು ಆರೋಪಿಗಳ ಪೈಕಿ ಅನಿಕಾ ಡಿ ಪ್ರಮುಖಳಾಗಿದ್ದಾಳೆ. ಮಿಕ್ಕಂತೆ ಅನೂಪ್ ಹಾಗೂ ರಿಜೇಶ್ ರವೀಂದ್ರನ್ ಆಕೆಗೆ ಸಹಾಯಕರಾಗಿದ್ದಾರೆ. ಅನಿಕಾ ಎರಡು ಮೂರು ಹೆಸರುಗಳಲ್ಲಿ ವ್ಯವಹರಿಸಿದ್ದಾಳೆ. ಅದರಲ್ಲೂ ವಾಟ್ಸಾಪ್ ನಲ್ಲಿ ಹೆಸರು ಬದಲಾಗುತ್ತಲೇ ಇರುತ್ತದೆ. ಕನಿಷ್ಠ 18 ರಿಂದ 20 ಪೆಡ್ಲರ್ ಗಳನ್ನು ನಿಭಾಯಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಅನಿಕಾ ಡಿ, ಅನಿ ಅಲಿಯಾಸ್ ಡಿ ಮನಿ, ಬಿಮನಿ ಮುಂತಾದವು ಕಾಮನ್ ಆಗಿ ಅನಿಕಾ ಬಳಸುತ್ತಿದ್ದ ಹೆಸರುಗಳು.

   ಡ್ರಗ್ಸ್ ಜೊತೆಗೆ ಸಿಕ್ಕಿ ಬಿದ್ದಿದ್ದ ಅನೂಪ್

   ಡ್ರಗ್ಸ್ ಜೊತೆಗೆ ಸಿಕ್ಕಿ ಬಿದ್ದಿದ್ದ ಅನೂಪ್

   ಕಲ್ಯಾಣನಗರದ ರಾಯಲ್ ಸ್ಯೂಟ್ಸ್ ಹೋಟೆಲ್ ಸರ್ವೀಸ್ ಅಪಾರ್ಟ್ಮೆಂಟ್ ನಲ್ಲಿ ದಾಳಿ ನಡೆಸಿದಾಗ 60 ಗ್ರಾಂ ತೂಗುವ 145 ಎಂಡಿಎಂ ಗುಳಿಗೆ, 2,20, 500 ನಗದು ಜಪ್ತಿ ಮಾಡಲಾಯಿತು. ಇಲ್ಲಿ ಸಿಕ್ಕಿ ಬಿದವನು ಅನೂಪ್.

   ಅನಿಕಾ ಪ್ರತಿ ಡ್ರಗ್ಸ್ ಗಳಿಗೂ ಬೇರೆ ಬೇರೆ ಕೋಡ್ ನೇಮ್ ಇಟ್ಟಿದ್ದಳು MDMA ಮತ್ತು LSDಗೂ ಬೇಡಿಕೆ ಹೆಚ್ಚಾಗಿತ್ತು. ಪಿಂಕ್ ಬಣ್ಣದ MDMAಗೆ ರೆಡ್ ಬುಲ್, LSDಗೆ ಲವ್ ಡೋಸ್ ಎಂಬ ಹೆಸರು ಜನಪ್ರಿಯ. ಗ್ರಾಹಕರ ಪಟ್ಟಿಯಲ್ಲಿ ವಿದ್ಯಾರ್ಥಿಗಳು, ಸ್ಯಾಂಡಲ್​ವುಡ್ ನಟ-ನಟಿಯರು ಮತ್ತು ಸಂಗೀತ ನಿರ್ದೇಶಕರು ಇದ್ದಾರೆ. ಡ್ರಗ್ ಪೂರೈಕೆ ಎಲ್ಲಾ ಪೆಡ್ಲರ್ ಗಳಾದ ರವೀಂದ್ರನ್, ಅನೂಪ್ ಕೆಲಸ.

   ಕೊರಿಯರ್ ಮೂಲಕ ಬರುತ್ತಿದ್ದ ಮಾತ್ರೆ

   ಕೊರಿಯರ್ ಮೂಲಕ ಬರುತ್ತಿದ್ದ ಮಾತ್ರೆ

   ಸಾಮಾನ್ಯ ಕೊರಿಯರ್ ಮೂಲಕ ಬರುತ್ತಿದ್ದ ಮಾತ್ರೆ, ಪುಡಿಗಳನ್ನು ಚೆನ್ನಾಗಿ ಪ್ಯಾಕ್ ಮಾಡಿ ಸಾಫ್ಟ್ ಟಾಯ್ಸ್ ಗಳಲ್ಲಿ ಅಡಗಿಸಿ ಗ್ರಾಹಕರಿಗೆ ನೇರವಾಗಿ ಇಲ್ಲವೇ ಪೋಸ್ಟ್ ಮಾಡುತ್ತಿದ್ದರು. ಪಾರ್ಟಿಗಳಿಗೆ ಹೋಗಿ ಕೊಡುತ್ತಿದ್ದದ್ದು ಕಡಿಮೆ. ಹೀಗಾಗಿ ಸೆಲೆಬ್ರಿಟಿಗಳನ್ನು ಹಿಡಿಯುವುದು ಸಿಸಿಬಿಗೂ ಕಷ್ಟಕರ, ಡ್ರಗ್ಸ್ ಕೇಸಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿಯುವುದು ಮುಖ್ಯ ಎಂದು ಕರ್ನಾಟಕ ಡಿಜಿ ಐಜಿಪಿ ಪ್ರವೀಣ್ ಸೂದ್ ಅವರೇ ಹೇಳಿದ್ದಾರೆ. ಈಗ ಅನಿಕಾಳಿಂದ ಸಿಕ್ಕ ಮಾಹಿತಿ ಸೆಲೆಬ್ರಿಟಿಗಳಿಗೂ ಎಷ್ಟರಮಟ್ಟಿಗೆ ಮಾರಕವಾಗಲಿದೆ ಕಾದು ನೋಡಬೇಕಿದೆ.

   English summary
   Drug Dealer Anika's peddler Anoop has started a restaurant Hayat and made Kammanahalli a Hub for Drug Mafia.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X