ಸಿಸಿಬಿ ಕಚೇರಿ ಮುಂದೆ ಹೈಡ್ರಾಮ; ಪೊಲೀಸರಿಗೆ ಶರಣಾದ ಯುವಕ!

ಬೆಂಗಳೂರು, ಸೆಪ್ಟೆಂಬರ್ 06: ಬೆಂಗಳೂರಿನ ಸಿಸಿಬಿ ಕಚೇರಿ ಮುಂದೆ ಬೆಳ್ಳಂಬೆಳಗ್ಗೆ ಹೈಡ್ರಾಮ ನಡೆದಿದೆ. ಡ್ರಗ್ಸ್ ಪ್ರಕರಣದಲ್ಲಿ ನಾನೂ ಸಹ ಭಾಗಿಯಾಗಿದ್ದೇನೆ ಎಂದು ಸಿಸಿಬಿ ಕಚೇರಿಗೆ ಬಂದ ಯುವಕನೊಬ್ಬ ಹೇಳಿದ್ದಾನೆ. ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ.

Recommended Video

      Ragini ರಿಲೀಸ್ ಗೆ ಒತ್ತಡ, ಕಥೆಗೆ CT Ravi ಟ್ವಿಸ್ಟ್ | Oneindia Kannada

      ಭಾನುವಾರ ಬೆಳಗ್ಗೆ ಬೈಕ್‌ನಲ್ಲಿ ಬಂದಿದ್ದ ಯುವಕನೊಬ್ಬ ನಾನೂ ಸಹ ಡ್ರಗ್ಸ್‌ ಕೇಸ್‌ನಲ್ಲಿ ಭಾಗಿಯಾಗಿದ್ದೇನೆ, ನಾನು ಶರಣಾಗುತ್ತೇನೆ ಎಂದು ಹೇಳಿದ್ದಾನೆ. ಒಂದು ಕ್ಷಣ ಪೊಲೀಸರು ಸಹ ಯುವಕನ ಮಾತು ಕೇಳಿ ಕಕ್ಕಾಬಿಕ್ಕಿಯಾಗಿದ್ದಾರೆ.

      ಯುವಕ ಅನಿರುದ್ಧ್ ಎಂದು ಗುರುತಿಸಲಾಗಿದೆ. ನಟಿ ರಾಗಿಣಿ ದ್ವಿವೇದಿ ಜೊತೆ ಫೋಟೋದಲ್ಲಿ ಇರುವುದು ನಾನೇ. ನಾನು ಶರಣಾಗುತ್ತೇನೆ ಎಂದು ಅನಿರುದ್ಧ್ ಹೇಳಿದ್ದಾನೆ. ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ.

      Drug Case Man Surrenders To CCB Police

      ಸಿಸಿಬಿ ಪೊಲೀಸರು ಡ್ರಗ್ಸ್‌ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ. ತನಿಖಾಧಿಕಾರಿಗಳು ಆಗಮಿಸಿದ ಬಳಿಕ ಆತನ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಬೈಕ್‌ನಲ್ಲಿ ಟೀ ಫ್ಲಾಸ್ಟ್ ಇಟ್ಟುಕೊಂಡು ಅನಿರುದ್ಧ್ ಬಂದಿದ್ದು ಕುತೂಹಲಕ್ಕೆ ಕಾರಣವಾಗಿದೆ.

      ಬೆಂಗಳೂರು ನಗರದಲ್ಲಿನ ಮಾದಕ ವಸ್ತು ಪೂರೈಕೆ ಜಾಲದ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ನಟಿ ರಾಗಿಣಿ ದ್ವಿವೇದಿ ಬಂಧಿಸಿದ್ದಾರೆ. ಮೂರು ದಿನಗಳ ಕಾಲ ಅವರು ಸಿಸಿಬಿ ಪೊಲೀಸರ ವಶದಲ್ಲಿದ್ದಾರೆ.

      ಒಟ್ಟು 12 ಜನರ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದು, ತನಿಖೆ ಮಂದುವರೆದಿದೆ. ಈ ಸಮಯದಲ್ಲಿ ಯುವಕ ಅನಿರುದ್ಧ್ ಬಂದು ಪೊಲೀಸರಿಗೆ ಶರಣಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+