ಬಾಲಕನ ಮೇಲೆ ಸ್ಕೂಲ್ ಬಸ್ ಹತ್ತಿಸಿದ್ದ ಚಾಲಕನ ಬಂಧನ

ಬೆಂಗಳೂರು, ಜೂನ್ 19: ಬಾಲಕನ ಮೇಲೆ ಸ್ಕೂಲ್ ಬಸ್‌ ಹತ್ತಿಸಿದ್ದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಶಾಲೆಯ ಬಸ್ ಚಾಲಕನೊಬ್ಬ ಏಳು ವರ್ಷದ ಬಾಲಕನ ಮೇಲೆ ಬಸ್‌ ಹತ್ತಿಸಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದ. ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಅಪಘಾತವೆಸಗಿದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ರಾಜರಾಜೇಶ್ವರಿನಗರದಲ್ಲಿ ನಡೆದಿತ್ತು. ವಾಹನದಲ್ಲಿ ಅಟೆಂಡೆಂಟ್ ಎಚ್ಚರಿಕೆ ನೀಡದ್ದರಿಂದ ಪ್ರಾಣವೇ ಹೋಯಿತು. ಬಾಲಕ ಚಿಂತನ್ ಬಿಇಎಂಎಲ್‌ನ ಸ್ವರ್ಗರಾಣಿ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿದ್ದ.

Driver arrested who ran over boy

ಚಿಂತನ್ ತಂದೆ ಖಾಸಗಿ ಕಂಪನಿಯೊಂದರಲ್ಲಿಉದ್ಯೋಗಿಯಾಗಿದ್ದಾರೆ. ತಾಯಿ ಮಾಧುರಿ ಶಿಕ್ಷಕಿಯಾಗಿದ್ದಾರೆ. ತರಗತಿ ಮುಗಿದ ಬಳಿಕ ಡೇ ಕೇರ್ ಸೆಂಟರ್‌ಗೆ ಶಾಲಾ ಬಸ್ಸಿನಲ್ಲಿ ಮಗು ಹೋಗುತ್ತಿತ್ತು.

ಅಂದು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಡೇ ಕೇರ್ ಸೆಂಟರ್ ಬಳಿ ಬಸ್ಸು ಬಂದು ನಿಂತಿತ್ತು. ಬಾಲಕನೊಬ್ಬನೆ ರಸ್ತೆ ದಾಟಿ ಬಸ್ ಇದ್ದಲ್ಲಿಗೆ ಹೋಗಿದ್ದಾನೆ.

ತಕ್ಷಣ ಬಾಲಕ ಬಸ್ ಹತ್ತಿದ್ದಾನೆಂದು ತಿಳಿದು ಬಸ್ ಹೊರಟಿದೆ ಆ ಬಸ್ ಬಾಲಕನ ಮೇಲೆ ಹರಿದಿದೆ. ಬಾಲಕ ಬಸ್‌ ಮುಂದೆ ನಿಂತಿರುವುದನ್ನು ನಾನು ನೋಡಿಯೇ ಇಲ್ಲ ಹಾಗಾಗಿ ಈ ತಪ್ಪಾಗಿದೆ ಎಂದು ಚಾಲಕ ಸುರೇಶ್ ಹೇಳಿದ್ದಾನೆ.

ಮಕ್ಕಳನ್ನು ಶಾಲೆಯಿಂದ ಮನೆಗೆ ಬಿಡುವವರೆಗೂ ಮಕ್ಕಳ ಜವಾಬ್ದಾರಿ ಚಾಲಕನದು ಆಗಿರುತ್ತದೆ. ಅವರನ್ನು ನಂಬಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಇನ್ನು ಮುಂದಾದರೂ ಇಂಥಾ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+