ಈ ದಿನ ಕುಡಿಯುವ ನೀರು ಬರಲ್ಲ, ಎರ್ರಾ ಬಿರ್ರಿ ಖಾಲಿ ಮಾಡಿಬಿಟ್ಟಿರಾ ಉಳಿಸಿಟ್ಟುಕೊಳ್ಳಿ...
ಬೆಂಗಳೂರು ಫೆಬ್ರವರಿ 21: ತುರ್ತು ಕಾಮಗಾರಿ ನಿಮಿತ್ತ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ.
ಬೆಂಗಳೂರು ಜಲಮಂಡಳಿಯು ತುರ್ತು ನಿರ್ವಹಣಾ ಕಾಮಗಾರಿಗಳು ಹಾಗೂ ಯು.ಎಫ್ಡಬ್ಲ್ಯೂ ಬಲ್ಕ್ ಫ್ಲೋ ಮೀಟರ್‌ಗಳನ್ನು ಅಳವಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿದೆ. ಹೀಗಾಗಿ ದಿನಾಂಕ 27/2/2024ರ ಬೆಳಿಗ್ಗೆ 6 ಗಂಟೆಯಿಂದ ದಿನಾಂಕ 28/2/2024ರ ಬೆಳಿಗ್ಗೆ 6 ಗಂಟೆಯವರೆಗೂ ಕಾವೇರಿ ನೀರು ಸರಬರಾಜು ಯೋಜನೆಯ 4ನೇ ಹಂತದ 2ನೇ ಘಟ್ಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದಾಗಿ ಈ ಕೆಳಕಂಡ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಹಾಗಾದರೆ ಬೆಂಗಳೂರಿನ ಯಾವೆಲ್ಲಾ ಸ್ಥಳಗಳಲ್ಲಿ ನೀರು ಸರಬರಾಜು ಆಗುವುದಿಲ್ಲ ಎಂದು ತಿಳಿಯುವುದಾದರೆ- 4ನೇ ಬ್ಲಾಕ್ ನಂದಿನಿ ಲೇಔಟ್, ಬಿಹೆಚ್‌ಇಎಲ್ ಲೇಔಟ್, ನಂದಿನಿ ಲೇಔಟ್, ಶ್ರೀನಿವಾಸ್ ನಗರ, ಜೈಮಾರುತಿ ನಗರ ಮತ್ತು ಬಡಾವಣೆ, ಸಾಕಮ್ಮ ಲೇಔಟ್, ನರಸಿಂಹಸ್ವಾಮಿ ಲೇಔಟ್, ಮುನೇಶ್ವರನಗರ, ಜ್ಞಾನಜ್ಯೋತಿನಗರ, ಜ್ಞಾನಗಂಗಾನಗರ, ಮಲ್ಲತ್ತಹಳ್ಳಿ, ಎನ್,ಜಿ,ಇ,ಎಫ್ ಲೇಔಟ್ ಸೇರಿದಂತೆ ನಗರದ ಇನ್ನಿತರ ಪ್ರದೇಶಗಳಲ್ಲಿ ಕುಡಡಿಯುವ ನೀರು ಪೂರೈಕೆ ಇರುವುದಿಲ್ಲ.
ಪಾರ್ಟ್ ಆಫ್ ಐ.ಡಿ.ಐ ಲೇಔಟ್, 1ನೇ ಮತ್ತು 2ನೇ ಹಂತ ರೈಲ್ವೇ ಲೇಔಟ್, ಆರ್‌ಹೆಚ್,ಬಿ,ಸಿ,ಎಸ್ ಲೇಔಟ್ 1ನೇ ಮತ್ತು 2ನೇ ಸ್ಟೇಜ್, ಭೈರವೆಶ್ವರನಗರ, ಸುಂಕದಕಟ್ಟೆ, ಜಯಲಕ್ಷ್ಮಮ್ಮ ಲೇಔಟ್, ಈರಣ್ಣಪಾಳ್ಯ, ಡಿ ಗ್ರೂಪ್ ಲೇಔಟ್, ಕಬ್ಬೇಹಳ್ಳ, ಚಂದನ ಲೇಔಟ್, ಪಾರ್ಟ್ ಆಫ್ ಪಾಪರೆಡ್ಡಿಪಾಳ್ಯ, ಬಿ.ಇ.ಎಲ್ 1ನೇ ಮತ್ತು 2ನೇ ಹಂತ, ಬಿಲೇಕಲ್ಲು, ಬ್ಯಾಡರಹಳ್ಳಿ, ಉಪಕಾರ್ ಲೇಔಟ್, ಆರ್.ಆರ್.ರೆಸಿಡೆನ್ಸಿ, ಗಿಡದಕೋನೇನಹಳ್ಳಿ, ಉಲ್ಲಾಳ ವಿಲೇಜ್, ಸೊನ್ನೇನಹಳ್ಳಿ, ಟೆಲಿಕಾಂ ಲೇಔಟ್‌ಗಳಲ್ಲಿ ಕುಡಿಯುವ ನೀರು ಪೂರಕೆ ಇರುವುದಿಲ್ಲ.
ವಿನಾಯಕ ಲೇಔಟ್, ಬಾಲಾಜಿ ಲೇಔಟ್, ವಿಶ್ವೇಶರಯ್ಯ ಲೇಔಟ್, ಮುನೇಶ್ವರನಗರ, ಪ್ರಕೃತಿನಗರ, ನಿಸರ್ಗ ಲೇಔಟ್, ಚೊಕ್ಕಸಂದ್ರ, ನಾಗಪ್ಪ ಲೇಔಟ್, ಕೃಷ್ಣಪ್ಪ ಗಾರ್ಡನ್, ಕೆಂಗೇರಿ ಉಪನಗರ, ಕೆಂಗೇರಿ, ವಿದ್ಯಾಪೀಠ, ವಿದ್ಯಾಗಿರಿ ಲೇಔಟ್, ನಾಯಂಡಹಳ್ಳಿ, ತಿಗಳರ ತೋಟ, ಕಾವೇರಿನಗರ, ಮಾರುತಿ ನಗರ, ಕಾಪಾಕ್ಷಿಪಾಳ್ಯ, ಪಟ್ಟೇಗಾರಪಾಳ್ಯ, ಗೋವಿಂದರಾಜನಗರ, ಕೆನರಾ ಬ್ಯಾಂಕ್ ಕಾಲೋನಿಯಲ್ಲಿ ನೀರು ಪೂರೈಕೆ ಇರುವುದಿಲ್ಲ.
ಜೊತೆಗೆ ಭೈರವೇಶ್ವರನಗರ, ಕೊಕೋನಟ್ ಗಾರ್ಡನ್, ಆದರ್ಶನಗರ, ಕಲ್ಯಾಣನಗರ, ಸಂಜೀವಿನಿನಗರ, ಬಿಡಿಎ ಕಾಲೋನಿ, ಕನಕನಗರ, ಸಂಜೀವಿನಿನಗರ, ಕಲ್ಯಾಣನಗರ, ಯಲಹಂಕ, ವಿದ್ಯಾರಣ್ಯಪುರ, ಜನತಾ ಕಾಲೋನಿ, ಶಾಂತಿನಗರ, ಅಂಬೇಡ್ಕರ್ ನಗರ, ಅಗ್ರಹಾರ ದಾಸರಳ್ಳಿ ಮತ್ತಿತರೆಡೆ ನೀರು ಪೂರೈಕೆ ಇರುವುದಿಲ್ಲ.
ಬಸವಣ್ಣ ನಗರ ರೋಡ್, ವಿನಾಯಕ ಲೇಔಟ್, ಮುನಿಯಪ್ಪ ರೋಡ್, ಮಹೇಶ್ವರಿ ನಗರ, ಪಾಪರೆಡ್ಡಿ ಲೇಔಟ್, ಮರಿಯಮ್ಮ ಟೆಂಪಲ್, ಮಸೀದಿ ರೋಡ್, ಇಸ್ರೋ ಲೇಔಟ್, ಮಂಜುನಾಥ್ ಲೇಔಟ್, ಹೊಸಪಾಳ್ಯ, ಇಂದಿರಾಗಾಂಧಿ ಸ್ಟ್ರೀಟ್, ಅಣ್ಣಸಂದ್ರ ಲೇಔಟ್, ಪ್ರಗತಿ ಲೇಔಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ












Click it and Unblock the Notifications