ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Doctor Harassment: ಎಂಎಸ್ ರಾಮಯ್ಯ ಆಸ್ಪತ್ರೆಯ ವೈದ್ಯರಿಂದ ಕಿರುಕುಳ ಆರೋಪ: ವೈದ್ಯೆ ಆತ್ಮಹತ್ಯೆ!

|
Google Oneindia Kannada News

ಬೆಂಗಳೂರು ಫೆಬ್ರವರಿ 2: ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಸಹೋದ್ಯೋಗಿಯಿಂದ ನಿರಂತರ ಕಿರುಕುಳಕ್ಕೆ ಒಳಗಾಗಿ ಮನನೊಂದ ಲಕ್ನೋದ ಮಹಿಳಾ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರು ದಂತವೈದ್ಯರಾಗಿದ್ದು, ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸುಮಿತ್ ಎಂದು ಗುರುತಿಸಲಾಗಿರುವ ತನ್ನ ಸಹೋದ್ಯೋಗಿಯಿಂದ ಕಿರುಕುಳದಿಂದ ಹತಾಶಳಾಗಿದ್ದಳು ಎಂದು ವೈದ್ಯೆಯ ತಂದೆ ದೂರು ನೀಡಿದ್ದಾರೆ.

ಸುಮಿತ್ ಸಂತ್ರಸ್ತೆಯನ್ನು ಮದುವೆಯಾಗುವಂತೆ ಬಲವಂತ ಮಾಡಿದ್ದಾನೆ. ಮದ್ಯ ಮತ್ತು ಸಿಗರೇಟ್ ಸೇವಿಸುವಂತೆ ಒತ್ತಾಯಿಸಿದ್ದಾನೆ ಎಂದು ತಂದೆ ಆರೋಪಿಸಿದ್ದಾರೆ. ಮಾತ್ರವಲ್ಲದೆ ಆರೋಪಿಯು ಮೃತನಿಗೆ ಹಣ ನೀಡುವಂತೆ ಪೀಡಿಸುತ್ತಿದ್ದನಂತೆ. ಆದರೆ ಸಂತ್ರಸ್ತೆ ಆತನ ಎಲ್ಲಾ ವಿನಂತಿಗಳನ್ನು ತಿರಸ್ಕರಿಸಿದ್ದಳು ಎಂದು ಅವರು ಹೇಳಿಕೊಂಡಿದ್ದಾರೆ.

Drink alcohol and smoke, tired of the doctors harassment, the doctor committed suicide!

ಇದರಿಂದ ಕುಪಿತಗೊಂಡ ಸುಮಿತ್ ಆಸ್ಪತ್ರೆಯಲ್ಲಿ ಸಂತ್ರಸ್ತೆಯ ಬಗ್ಗೆ ವದಂತಿಗಳನ್ನು ಹರಡಿದರು. ನಂತರ ಸಂತ್ರಸ್ತೆ ವಿರುದ್ಧ ಕಠಿಣ ಕ್ರಮ ಕೈಗೊಂಡರು ಎಂದು ತಿಳಿದುಬಂದಿದೆ. ಜನವರಿ 25 ರಂದು ಘಟನೆ ನಡೆದಿದ್ದು, ಈ ನಡುವೆ ಸಂಜಯನಗರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ತನಿಖೆ ಬಳಿಕ ವೈದ್ಯೆ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದ್ದು ಸಂತ್ರಸ್ತೆಯ ತಂದೆ ದೂರು ವಾಪಸ್ ಪಡೆಯುವುದಾಗಿ ಹೇಳಿಕೊಂಡಿದ್ದಾರೆ.

English summary
An incident has taken place in Bangalore's MS Ramaiah Hospital where a woman doctor from Lucknow committed suicide after being harassed continuously by her colleague.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X