• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಕೊನೆಯ ಹೋರಾಟ, ಹಿಂಬಾಗಿಲಿನಲ್ಲಿ ರಾಜ್ಯಸಭೆ ಪ್ರವೇಶ ವಿಧಿಯ ಆಟ' - ಡಾ ಸುಧಾಕರ್

|

ಬೆಂಗಳೂರು, ಜೂನ್ 10: ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇಬ್ಬರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.

   Sriramulu taking a break at a small shop video goes viral | Oneindia Kannada

   ತಮ್ಮ ಪಕ್ಷದ ನಾಯಕರು ಹಾಗೂ ಬೆಂಬಲಿಗರೊಂದಿಗೆ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣೆಯಲ್ಲಿ ಜೆಡಿಎಸ್‌ಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದ್ದು, ಸದ್ಯದ ಲೆಕ್ಕಾಚಾರದ ಪ್ರಕಾರ ಇಬ್ಬರು ರಾಜ್ಯಸಭೆ ಪ್ರವೇಶ ಮಾಡುವುದು ಬಹುತೇಕ ಖಚಿತವಾಗಿದೆ.

   ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸದಂತೆ ಮಲ್ಲಿಕಾರ್ಜುನ ಖರ್ಗೆರಿಗೆ ಜೀವ ಬೆದರಿಕೆ ಕರೆ!

   ದೇವೇಗೌಡ ಮತ್ತು ಖರ್ಗೆ ಅವರು ರಾಜ್ಯಸಭೆ ಪ್ರವೇಶದ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ''ಸುದೀರ್ಘವಾದ ರಾಜಕೀಯ ಬದುಕಿನ ಬಹುಷಃ ಕೊನೆಯ ಹೋರಾಟದಲ್ಲಿ, ಹಿಂಬಾಗಿಲೆನ್ನುವ ರಾಜ್ಯಸಭೆಗೆ ಹೋಗವಂತಾಗಿದ್ದು ವಿಧಿಯ ಆಟ'' ಎಂದು ಅಭಿಪ್ರಾಯ ಪಟ್ಟಿದ್ದಾರೆ.

   'ಆದರೆ ಈ ಮುತ್ಸದ್ದಿಗಳ ಸೇವೆ ಹಾಗು ಹೋರಾಟ ಅನುಕರಣೀಯ. ದೇವರು ಇಬ್ಬರಿಗೂ ಒಳ್ಳೆಯ ಆರೋಗ್ಯವನ್ನು ಕರುಣಿಸಲಿ. ಬಿಜೆಪಿಯ ಉದಾರತೆಗೆ ಅಭಿನಂದನೆಗಳು' ಎಂದು ಶುಭಕೋರಿದ್ದಾರೆ.

   ಕಳೆದ ಲೋಕಸಭೆ ಚುನಾವಣೆಯಲ್ಲಿ ಎಚ್ ಡಿ ದೇವೇಗೌಡ ತುಮಕೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಗುಲ್ಬರ್ಗ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು.

   ಲೋಕಸಭೆಯಲ್ಲಿ ಸೋಲು ಕಂಡಿದ್ದ ಇಬ್ಬರು ಹಿರಿಯ ನಾಯಕರು, ಈಗ ರಾಜ್ಯಸಭೆ ಪ್ರವೇಶ ಮಾಡುತ್ತಿದ್ದಾರೆ. ಜೂನ್ 19 ರಂದು ಮತದಾನ ನಡೆಯಲಿದೆ.

   English summary
   'mostly its last election for HD devegowda and mallikarjun kharge' tweeted Karnataka Minister Dr Sudhakar. Both senior leader contesting for Rajya Sabha after they loose in lok sabha election.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X