ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಾಂಜೀ ನೀವು ಯಾಕೆ ವಿವಾಹವಾಗಲಿಲ್ಲ?

By Vanitha
|
Google Oneindia Kannada News

ಬೆಂಗಳೂರು, ಜುಲೈ, 28 : ಪ್ರತಿಯೊಬ್ಬ ಗಣ್ಯ ವ್ಯಕ್ತಿಯ ಕುರಿತಾಗಿ ತಿಳಿದುಕೊಳ್ಳುವ ಕುತೂಹಲ ಎಲ್ಲರ ಮನದಲ್ಲಿ ಮನೆ ಮಾಡಿರುತ್ತದೆ. ಅವರು ಹೋದಲ್ಲಿ ಬಂದಲ್ಲಿ ವೈಯಕ್ತಿಕ ಜೀವನದಿಂದ ಹಿಡಿದು ಖಾಸಗಿ ಬದುಕಿನವರೆಗೂ ನಾನಾ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ.

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಭೇಟಿ ಮಾಡಿದ ಸ್ಥಳಗಳಲ್ಲಿ ಶಾಲೆಗಳಲ್ಲಿ ನನಗೆ ಎದುರಾದ ಪ್ರಶ್ನೆಯೆಂದರೆ ನೀವು ಯಾಕೆ ಮದುವೆ ಆಗಲಿಲ್ಲ? ನೀವು ಭಗ್ನ ಪ್ರೇಮಿಯೇ? ನಿಮಗೆ ಮದುವೆ ಮಾಡಿಕೊಳ್ಳಬೇಕು ಎಂದು ಎನಿಸಲಿಲ್ಲವೇ? ಹೀಗೆ ವಿವಾಹ ಬದುಕಿನ ಕುರಿತಾಗಿ ಒಂದಲ್ಲಾ ಒಂದು ಪ್ರಶ್ನೆ ಎದುರಾದಾಗ ಕಲಾಂ ಸುಮ್ಮನಿರುತ್ತಿರುತ್ತಿದ್ದರು. ಇಲ್ಲವಾದರೆ ಒಂದು ನಗು ಬೀರಿ ತಮ್ಮ ಮುಂದಿನ ಕಾರ್ಯದ ಬಗ್ಗೆ ಗಮನಕೊಡುತ್ತಿದ್ದರು.[ನಾನು ಗುರಿ ಮುಟ್ಟಿದ್ದೇನೆ, ನೀವು? ಯುವಕರಿಗೆ ಕಲಾಂ ಪ್ರಶ್ನೆ]

Dr. Abdul Kalam why not get married?

ನಮ್ಮ ಮುಂದೆ ವಿವಾಹವಾಗದೆ ಬದುಕಿದ ಹಲವಾರು ಮಂದಿಗಳ ನಿದರ್ಶನವಿದೆ. ವೃತ್ತಿ, ತ್ಯಾಗ, ಸೇವೆಗಳನ್ನೇ ತಮ್ಮ ಜೀವನ ಸಂಗಾತಿಯನ್ನಾಗಿಸಿಕೊಂಡ ಭಗತ್ ಸಿಂಗ್, ಅಟಲ್ ಬಿಹಾರಿ ವಾಜಪೇಯಿ, ರತನ್‌ ಟಾಟಾ, ಡಾ. ಹೋಮಿ ಜೆ. ಬಾಬಾ, ಸ್ವಾಮಿವಿವೇಕಾನಂದ, ಅಣ್ಣ ಹಜಾರೆ ಇನ್ನು ಸಾಕಷ್ಟು ಮಂದಿ ನಮ್ಮ ಮುಂದಿದ್ದಾರೆ.

ಮದುವೆ ಜೀವನದ ಕುರಿತಾಗಿ ಕಲಾಂಗೆ ಎದುರಾದ ಪ್ರಶ್ನೆಗಳು

ಸಿಂಗಪೂರ್:

ಸಿಂಗಪೂರಿಗೆ ತೆರಳಿದ ಅವಧಿಯಲ್ಲಿ ಭಾರತೀಯ ವಿದ್ಯಾಭವನ ಅಂತರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಯೊಬ್ಬರು ನೀವು ಯಾಕೆ ವಿವಾಹವಾಗಲಿಲ್ಲ? ಎಂದು ಪ್ರಶ್ನಿಸಿದರು. ಆಗ ನಾನು ಸುಮ್ಮನೆ ನಕ್ಕು ಪ್ರತಿಕ್ರಿಯೆಯಾಗಿ 'ನೀವು ನಿಮ್ಮ ಜೀವನದಲ್ಲಿ ಉತ್ತಮ ಸಂಗಾತಿಗಳನ್ನು ಆಯ್ದುಕೊಳ್ಳಿ ಎಂದು ಶುಭಹಾರೈಸಿ ಸುಮ್ಮನಾದೆ ಎಂದರು.[ಸ್ಫೂರ್ತಿ ತುಂಬುವ ಡಾ.ಕಲಾಂ ಸ್ಫೂರ್ತಿ ಹೇಳಿಕೆಗಳು]

ರಾಂಚಿ:
ನೀವು ಯಾವುದಾದರೂ ಹುಡುಗಿಯ ಪ್ರೇಮಿಸಿದ್ದೀರಾ? ನೀವು ಯಾಕೆ ವಿವಾಹವಾಗಲಿಲ್ಲ?

ನಾನು ಪ್ರೀತಿಸಿದ್ದು ಜ್ಞಾನವನ್ನು. ಜ್ಞಾನ ಸಂಪಾದನೆ ಮತ್ತು ಬೋಧಿಸುವುದರ ಕಡೆಗೆ ಮಾತ್ರ ನನ್ನ ಒಲವು ಇತ್ತು. ಈತ ಯಾಕೆ ವಿವಾಹವಾಗಲೂ ಇಚ್ಚಿಸುತ್ತಿಲ್ಲ ಎಂಬುದನ್ನು ಯಾರು ಅರ್ಥ ಮಾಡಿಕೊಳ್ಳಲಿಲ್ಲ. ಆದರೆ ನಾನು ತಂತ್ರಜ್ಞಾನದೊಂದಿಗೆ ವಿವಾಹವಾಗಿದ್ದೆ. ಒಂದು ದಿನ ನನ್ನ ಅಣ್ಣ ಮತ್ತು ಅತ್ತಿಗೆ ಸೇರಿಕೊಂಡು ನನಗೊಂದು ಮದುವೆ ಮಾಡಲು ಚಿಂತಿಸಿದರು.

ಆದರೆ ಕುಟುಂಬದಲ್ಲಿ ಒಬ್ಬರಿಗೆ ಹುಷಾರಿಲ್ಲದ ನಿಮಿತ್ತ ಅದು ಮುಂದೂಡಲ್ಪಟ್ಟಿತು. ಸ್ವಲ್ಪ ದಿನಗಳ ಕಾಲ ಯಾರು ವಿವಾಹದ ವಿಚಾರವಾಗಿ ಮಾತನಾಡಲಿಲ್ಲ. ನಂತರ ನಾನು ಮದುವೆಯಿಂದ ದೂರ ಇರುವುದರ ಬಗ್ಗೆ ಕ್ಷಮೆ ಯಾಚಿಸಿದ್ದೆ. ನನಗೆ ಮದುವೆಯಾಗಲಿಲ್ಲ ಎಂಬುದರ ಬಗ್ಗೆ ಕೊಂಚವೂ ಬೇಸರವಿಲ್ಲ.

ಆದರೆ ನಾನು ತತ್ವಜ್ಞಾನಿಯಲ್ಲ, ನಾನು ಕೇವಲ ತಂತ್ರಜ್ಞಾನ, ರಾಕೆಟ್ ಉಡಾವಣೆ ಮಾಡುವ ಸಾಮಾನ್ಯ ಮನುಷ್ಯ. ರಾಕೆಟ್ ಉಡಾವಣಾ ಜ್ಞಾನವನ್ನು ಸಂಪಾದಿಸುವುದಕ್ಕೆ ನನ್ನ ಬದುಕನ್ನು ಮೀಸಲಿರಿಸಿದ್ದೇನೆ. ನಾನು ಏನನ್ನೂ ಸಂಪಾದಿಸುವುದಿಲ್ಲ, ನಿರ್ಮಿಸುವುದಿಲ್ಲ, ಕುಟುಂಬ,ಮಕ್ಕಳು ಯಾರನ್ನು ನಾನು ಹೊಂದುವುದಿಲ್ಲ. ನನ್ನನ್ನು ನಂಬುವುದಕ್ಕಿಂತ ನನ್ನ ಉದ್ದೇಶವನ್ನು ಯಾರು ಹೆಚ್ಚಾಗಿ ಗಮನಿಸುತ್ತಿರುತ್ತಾರೋ ಅವರನ್ನು ನಾನು ಹೆಚ್ಚಾಗಿ ನಂಬುತ್ತೇನೆ ಎಂದು ಉತ್ತರಿಸಿದರು.

English summary
Dr.Abdul Kalam why not get married? this question has been raised to him many time and many function around the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X