ಬೆಂಗಳೂರಿನಲ್ಲಿ ಡಬಲ್ ಮರ್ಡರ್: ಹಿಟ್ ಆ್ಯಂಡ್ ರನ್‌ಗೆ ಓರ್ವ ಬಲಿ- ಪಾದಚಾರಿ ಸೇಫ್!
ಬೆಂಗಳೂರು ಅಕ್ಟೋಬರ್ 17: ಬೆಂಗಳೂರಿನಲ್ಲಿ ಕಟ್ಟಡ ಮೇಲಿಂದ ಜಿಗಿದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಅಥವಾ ಪ್ರೇಮ ವೈಫಲ್ಯದಿಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಕಟ್ಟಡದ ಮೇಲಿನಿಂದ ಬಿದ್ದ ಯುವಕ ಕೆಲವೇ ಹೊತ್ತಿನಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.
ಮಧ್ಯರಾತ್ರಿ ಈ ಘಟನೆ ನಡೆದಿದ್ದು ಆತ್ಮಹತ್ಯೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಮಿಳುನಾಡಿನ ಮೂಲದ ವಿಷ್ಣು ಮೃತ ದುರ್ದೈವಿ. ಬೆಂಗಳೂರಿನ ಕೋನಪ್ಪನ ಬಳಿ ಈ ಘಟನೆ ನಡೆದಿದೆ. ಪಿಜಿ ಕಟ್ಟಡ ಮೇಲಿನಿಂದ ಬಿದ್ದು ಯುವಕ ಸಾವನ್ನಪ್ಪಿದ್ದಾನೆ.

ಬೆಂಗಳೂರಿನಲ್ಲಿ ಬರ್ಬರ ಹತ್ಯೆ
ಬೆಂಗಳೂರಿನಲ್ಲಿ ಡಬಲ್ ಮರ್ಡರ್ ಆಗಿರುವುದು ವರದಿಯಾಗಿದೆ. ಪತ್ನಿಯ ಶೀಲ ಶಂಕಿಸಿ ಪತಿಯೊಬ್ಬ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬರ್ಬರವಾಗಿ ಹತ್ಯೆಗೈದು ನಂತರ ತಾನೂ ಕೂಡ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಸೋಮೇಶ್ವರ ಬಡವಾಣೆಯಲ್ಲಿ ನಡೆದಿದೆ. ಗೊಲ್ಲಬಾಬು ಹಾಗೂ ಪತ್ನಿ ಫೈತಮ್ಮ ನಡುವೆ ಅನೈತಿಕ ಸಂಬಂಧ ಇರುವ ಬಗ್ಗೆ ಆಗಾಗ ಗಲಾಟೆ ನಡೆಯುತ್ತಿತ್ತು. ಹಲವಾರು ಬಾರಿ ಈ ಬಗ್ಗೆ ವಾದ ವಿವಾದಗಳು ಆಗಿದ್ದವು.
ಹೀಗಿದ್ದರೂ ಫೈತಮ್ಮ ತನ್ನ ಪ್ರಿಯಕರ ಗಣೇಶ್ ಕುಮಾರ್‌ನೊಂದಿಗೆ ಹೋಗಿರುವುದನ್ನು ಗಮನಿಸಿದ ಗೊಲ್ಲಬಾಬು ಅವರನ್ನು ಹಿಂಬಾಲಿಸಿದ್ದಾನೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಅವರಿಬ್ಬರ ಮೇಲೆ ಮರದ ಕಟ್ಟಿಗೆಯಿಂದ ಹಲ್ಲೆ ಮಾಡಿ ಹತ್ಯೆಗೈದು ನಂತರ ಗೊಲ್ಲಬಾಬು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಸ್ತುತ ಈ ಮೂವರ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಕ್ಷಿಣ ವಿಭಾಗದ ಡಿಸಿಪಿ ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣ
ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರದಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣ ನಡೆದಿದೆ. ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬ ಕೆಲಸ ಮುಗಿಸಿ ಮನೆಗೆ ತೆರಳುವಾಗ ಕಾರೊಂದು ವೇಗವಾಗಿ ಬಂದು ಗುದ್ದಿ ಸ್ಥಳದಿಂದ ಅದೇ ಶರವೇಗದಲ್ಲಿ ಸಾಗಿದೆ.
ಗುದ್ದಿದ ರಬಸಕ್ಕೆ ಬೈಕ್ ಸವಾರ ಸಾವನ್ನಪ್ಪಿದ್ದು, ಪಾದಚಾರಿಯೊಬ್ಬರು ಗಾಯಗೊಂಡಿದ್ದಾರೆ. ಅಚಾನಕ್ಕಾಗಿ ಬಂದ ಕಾರು ಬೈಕ್ ಸವಾರನಿಗೆ ಗುದ್ದಿದೆ. ಗುದ್ದಿದ ರಬಸಕ್ಕೆ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾದರೂ ಪ್ರಯೋಜನವಾಗಿಲ್ಲ. ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮದ್ಯದ ಬಾಟಲಿಯಿಂದ ಹೊಡೆದು ಸ್ನೇಹಿತನ ಹತ್ಯೆ ರನ್: ಪಾದಚಾರಿ ಸಾವು
ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವಿನ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಕಸ್ತೂರಿನಗರ ನಿವಾಸಿ ಯೋಗೇಂದ್ರ ಸಿಂಗ್(26) ಕೊಲೆಯಾದವ. ಕೃತ್ಯ ಎಸಗಿದ ಆತನ ಸ್ನೇಹಿತ ಉಮೇಶ್(28) ಎಂಬಾತನನ್ನು ಬಂಧಿಸಲಾಗಿದೆ.ಈ ಸಂಬಂಧ ಮೃತನ ತಂದೆ ವಿಶ್ವನಾಥ್ ಸಿಂಗ್ ಎಂಬುವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.












Click it and Unblock the Notifications