ಆ.27ಕ್ಕೆ ಆಗಸದಲ್ಲಿ ಎರಡು ಚಂದ್ರ ನಿಜವೇ?
ಬೆಂಗಳೂರು, ಅ.20: ಆಗಸ್ಟ್ 27ರಂದು ರಾತ್ರಿ ವಿಶ್ವದ ಜನತೆ ಅಪೂರ್ವವಾದ ಖಗೋಳ ಕೌತುಕವೊಂದನ್ನು ಕಾಣಲಿದ್ದಾರೆ. ಅಂದು ರಾತ್ರಿ 12.30ಕ್ಕೆ ಸರಿಯಾಗಿ ಆಕಾಶದಲ್ಲಿ ಎರಡು ಚಂದ್ರನನ್ನು ನೋಡಬಹುದು. ಈಗಿರುವ ಚಂದ್ರನ ಜೊತೆಗೆ ಇನ್ನೊಂದು ಚಂದ್ರನಂಥ ಗ್ರಹ ಕಾಣಿಸಿಕೊಳ್ಳಲಿದ್ದು, ಕೆಂಪುಗ್ರಹ ಮಂಗಳ ಚಂದ್ರನಂತೆ ಪ್ರಜ್ವಲಿಸಲಿದ್ದಾನೆ ಎಂಬ ಸುದ್ದಿ ಎಲ್ಲೆಡೆ ಹಬ್ಬುತ್ತಿದೆ. ಅದರೆ, ಇದೆಲ್ಲವೂ ಸುಳ್ಳು ಸುದ್ದಿ ಎಂದು ನಾಸಾ ಅಲ್ಲಗೆಳೆದಿದೆ.
ಖಗೋಳ ಶಾಸ್ತ್ರಜ್ಞರ ಪ್ರಕಾರ 2,287 ವರ್ಷಗಳಿಗೊಮ್ಮೆ ಮಾತ್ರ ಇಂಥ ಅದ್ಭುತ ಚಮತ್ಕಾರ ಆಕಾಶದಲ್ಲಿ ನಡೆಯಲು ಸಾಧ್ಯ. ಆ ದಿನ ಮಂಗಳ ಗ್ರಹವು ಭೂಮಿಯಿಂದ 34.65 ಕೋಟಿ ಜ್ಯೋತಿವರ್ಷದ ದೂರದಲ್ಲಿ ಚಂದ್ರನ ಸಮಸಮವಾಗಿ ಮಂಗಳ( ಅಂಗಾರಕ) ಕಾಣಿಸಿಕೊಳ್ಳಲಿದ್ದಾನೆ ಎಂದು ಖಗೋಳ ಶಾಸ್ತ್ರಜ್ಞರು ಹೇಳಿದ್ದಾರೆ. [ಚಂದ್ರನ ಮೇಲೆ ಮೂಲಂಗಿ ಬೆಳೆಯುತ್ತಾರಂತೆ!]
SEE MARS AS LARGE AS THE FULL MOON ON 27TH AUGUST 2014. Should be spectacular! Truly a once in a lifetime experience!
ಮೇಲ್ಕಂಡ ಸಂದೇಶ ಫೇಸ್ ಬುಕ್, ಇಮೇಲ್, ವಾಟ್ಸಪ್, ಟ್ವಿಟ್ಟರ್ ನಲ್ಲಿ ಕಂಡಿದ್ದರೆ ಈ ಬಗ್ಗೆ ಸ್ಪಷ್ಟನೆ ಇಲ್ಲಿದೆ ಓದಿ:

ಹೌದು ಇದು ನಿಜವೇ? ಮಂಗಳ ಭೂಮಿಗೆ ಹತ್ತಿರವಾಗಿತ್ತೆ?
* ಖಂಡಿತ ಇಲ್ಲ, ಇದೊಂದು ಸುಳ್ಳು ಸುದ್ದಿಯಾಗಿದ್ದು, ಸುಮಾರು 2003ರಿಂದ ಇದೇ ರೀತಿ ಸುಳ್ಳು ಸುದ್ದಿ ಹಬ್ಬುತ್ತಿದೆ.
* ಮಂಗಳ ಗ್ರಹ ಎಂದಿಗೂ ಭೂಮಿಯ ಉಪಗ್ರಹ ಚಂದ್ರನಷ್ಟು ಪ್ರಕಾಶಮಾನವಾಗಿ ನಮ್ಮ ಕಣ್ಣಿಗೆ ಭೂಮಿಯಿಂದ ಕಾಣಲು ಸಾಧ್ಯವಿಲ್ಲ.
* ಆಗಸ್ಟ್ 27ರಂದು ಹಿಂದೂ ಪಂಚಾಂಗದ ಪ್ರಕಾರ ಬಾದ್ರಪದ ಶುಕ್ಲ ದ್ವಿತೀಯ ದಿನಶುದ್ಧಿ ಇದೆ. ಅಂದರೆ ಅಂದು ಪೂರ್ಣಚಂದ್ರ ದರ್ಶನ ಸಾಧ್ಯವಿಲ್ಲ.
* ಆ.27 ಇರಲಿ, ಆಗಸ್ಟ್ ತಿಂಗಳಾಗಲಿ, 2014ರ ಯಾವುದೇ ತಿಂಗಳಲ್ಲಿ ಆಗಲಿ ಚಂದ್ರನಷ್ಟು ಗಾತ್ರ ಹಾಗೂ ಪ್ರಕಾಶಮಾನವಾಗಿ ಮಂಗಳ ಗ್ರಹ ಕಾಣುವುದಿಲ್ಲ.
* ಆ.8 ರಂದು ಭೂಮಿಗೆ ಸಮೀಪವಾಗಿ ಮಂಗಳ ಗ್ರಹ ಬಂದಿತ್ತು, ಅದರೆ, ಚಂದ್ರ ಹಾಗೂ ಮಂಗಳ ಗ್ರಹ ಸಾಮಾನಾಂತರ ರೇಖೆಯಲ್ಲಿ ಕಾಣಿಸಿಕೊಂಡಿಲ್ಲ.
ಇಲ್ಲಿ ಕಾಣುತ್ತಿರುವ ಚಿತ್ರ ಫೇಸ್ ಬುಕ್ ನಲ್ಲಿ ಸುಳ್ಳು ಸಂದೇಶದ ಜೊತೆ ಹರಡಿದ್ದಾಗಿದೆ.

ಮುಂದೆ ಎಂದಾದರೂ ಸಾಧ್ಯವೇ?
ಮಂಗಳ ಹಾಗೂ ಚಂದ್ರ ಒಟ್ಟಿಗೆ ಜೋಡಿಯಾಗಿ ಈ ಸುಳ್ಳು ಸುದ್ದಿ ಹೇಳುವಂತೆ ಚಂದ್ರದ್ವಯರಂತೆ ಕಾಣಲು ಮುಂದೆ ಎಂದಾದರೂ ಸಾಧ್ಯವೇ?
* ಇದು ಕಷ್ಟ. ಚಂದ್ರನ ಸುತ್ತಳತೆಯ 1/140 ರಷ್ಟು ಕಡಿಮೆ ಸುತ್ತಳತೆಯನ್ನು ಮಂಗಳ ಹೊಂದಿದೆ.
* ಚಂದ್ರ ಹಾಗೂ ಮಂಗಳ ಒಂದೇ ಗಾತ್ರದಲ್ಲಿ ಕಾಣಲು ಸುಮಾರು 140ಕ್ಕೂ ಅಧಿಕ ಮಂಗಳ ಗ್ರಹವನ್ನು ಪಕ್ಕ ಪಕ್ಕದಲ್ಲಿ ಇಟ್ಟರೆ ಚಂದ್ರನ ಸುತ್ತಳತೆ ಸಮನಾಗುತ್ತದೆ.
* ಸುಮಾರು 186,000 ಮೈಲಿ/ ಸೆಕೆಂಡು ವೇಗದಲ್ಲಿ ಸಂಚರಿಸುವ ಚಂದ್ರನಿಂದ ಭೂಮಿಗೆ ಬೆಳಕು ಕಾಣಲು ಸೆಕೆಂಡುಗಳು ಸಾಕು.
* ಆದರೆ, ಮಂಗಳನಿಂದ ಬರಲು ಐದು ನಿಮಿಷದಿಂದ 20 ನಿಮಿಷಗಳು ಬೇಕಾಗುತ್ತದೆ. ಭೂಮಿ ಹಾಗೂ ಮಂಗಳ ಸೂರ್ಯನ ಸುತ್ತಾ ಸುತ್ತುವ ಪ್ರದಕ್ಷಿಣೆಯ ವೇಗ ಹಾಗೂ ಅಂತರಗಳ ವ್ಯತ್ಯಾಸ ಇಲ್ಲಿ ಕಾಣಬಹುದು.

ಎಂದಿನಿಂದ ಈ ರೀತಿ ಸುದ್ದಿ ಹಬ್ಬಿದೆ?
ಆಗಸ್ಟ್ 27, 2003ರಿಂದ ಈ ರೀತಿ ಸುಳ್ಳು ಸುದ್ದಿ ಹಬ್ಬುತ್ತಿದೆ. ಆಗ ಮಂಗಳ ಗ್ರಹ ಭೂಮಿ ಸಮೀಪವಾಗಿ ಕಾಣುತ್ತಿತ್ತು. ಸುಮಾರು 60,000 ವರ್ಷಗಳ ನಂತರ ತುಂಬಾ ಹತ್ತಿರದಲ್ಲಿ ಮಂಗಳನನ್ನು ಕಾಣಲಾಯಿತು.(ಏನಾದರೂ ಮಂಗಳ ಗ್ರಹ ನಕ್ಷತ್ರಕ್ಕಿಂತ ಹೆಚ್ಚಿನ ಗಾತ್ರದಲ್ಲಿ ಕಾಣುವುದಿಲ್ಲ)
'ಎರಡು ಚಂದ್ರಗಳನ್ನು ನೋಡಿ ಆನಂದಿಸಿ' ಎಂಬ ಶೀರ್ಷಿಕೆಯಡಿಯಲ್ಲಿ ಪ್ರತಿ ವರ್ಷ ಇದೇ ವೇಳೆ ಸುದ್ದಿ ಹಬ್ಬಿಸಲಾಗುತ್ತದೆ. ಈ ರೀತಿ ಸುಳ್ಳು ಸುದ್ದಿ ಇರುವ ಸಂದೇಶ ಬಂದರೆ ಓದಿ ನಕ್ಕುಬಿಡಿ

ಮಂಗಳನ ಮೇಲೆ ಏಕೆ ಟಾರ್ಗೆಟ್
ಮಂಗಳ, ನಮ್ಮ ನೆಲದಾಚೆಗಿನ ಬದುಕಿನ ಹುಡುಕಾಟದಲ್ಲಿ ವಿಜ್ಞಾನಿಗಳ ಕುತೂಹಲ ಆಗಾಗ ಕೆರಳಿಸುವ ಗ್ರಹವಾಗಿದೆ. ಜೀವ ಉಗಮಕ್ಕೆ ಹಾಗೂ ಬಾಳ್ವೆಗೆ ಮುಖ್ಯವಾಗಿ ಬೇಕಾದ ಗಾಳಿ, ನೀರು, ಬೆಳಕು ಇರುವಿಕೆ ಬಗ್ಗೆ ಅನೇಕ ದೇಶಗಳು ಸಂಶೋಧನೆ ನಡೆಸುತ್ತಲೇ ಇವೆ. ಹೀಗಾಗಿ ಮಂಗಳನ ಬಗ್ಗೆ ಕುತೂಹಲ,ವದಂತಿಗಳು ಹರಡುವುದು ಹೆಚ್ಚು.
ಈ ನಿಟ್ಟಿನಲ್ಲಿ ಭಾರತ ಕೂಡಾ ಮಾರ್ಸ್ ಆರ್ಬಿಟರ್ ಕಳಿಸಿದ್ದು, 2014ರ ಸೆಪ್ಟೆಂಬರ್ ನಲ್ಲಿ ಮಂಗಳನ ಕಕ್ಷೆಗೆ ಸೇರಿಕೊಳ್ಳಲಿರುವ ಈ ಉಪಗ್ರಹ ಯಾವುದೇ ಅಡೆತಡೆಗಳಿಲ್ಲದೆ ನಿಗದಿಯಂತೆ ಮುನ್ನುಗ್ಗುತ್ತಿದೆ. ಇದರಿಂದಾಗಿ ಬಾಹ್ಯಾಕಾಶ ಕಾರ್ಯಕ್ರಮದ ಕೆಲವೇ ಮುಂಚೂಣಿ ರಾಷ್ಟ್ರಗಳಾದ ಅಮೆರಿಕ, ಯೂರೋಪ್, ರಷ್ಯಾಗಳ ಸಾಲಿನಲ್ಲಿ ಭಾರತ ನಿಲ್ಲುವಂತೆ ಮಾಡಿದೆ.[ಇಸ್ರೋ ಮಂಗಳಯಾನ ಬಗ್ಗೆ ಸಮಗ್ರ ವಿವರ]
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications