ಲಗೋರಿ, ಬುಗುರಿ, ಗೋಲಿ, ಗಿಲ್ಲಿ-ದಾಂಡು, ಚಾಟರ ಬಿಲ್ಲು....
ಬೆಂಗಳೂರು, ನವೆಂಬರ್, 09: ಲಗೋರಿ, ಬುಗುರಿ, ಗೋಲಿ, ಗಿಲ್ಲಿ-ದಾಂಡು, ಚಾಟರ ಬಿಲ್ಲು, ಚೌಕಾ ಬಾರ, ಚಿನ್ನಿ ಮಣೆ, ಪಗಡೆ, ಕುಂಟೆ ಬಿಲ್ಲೆ, ಆನೆ ಕಾಲು, ಪಚ್ಚಿ, ಕವಡೆ.. ಅರೆ ಇದೇನು ನಮ್ಮ ಬಾಲ್ಯದ ಆಟಗಳ ಹೆಸರನ್ನು ಉದ್ದಕ್ಕೆ ಬರೆದುಕೊಂಡು ಹೋಗುತ್ತಿದ್ದಾರೆ ಎಂದು ಆಶ್ಚರ್ಯಪಟ್ಟುಕೊಳ್ಳಬೇಡಿ.
ಮಹಾನಗರದ ಒತ್ತಡದ ಜೀವನದ ನಡುವೆ ಈ ಸಾಂಪ್ರದಾಯಿಕ ಆಟಗಳೆಲ್ಲ ಮರತೇ ಹೋಗಿವೆ. ಮತ್ತೆ ಅದನ್ನೆಲ್ಲ ನಿಮ್ಮ ಮಕ್ಕಳು ಆಡಿ ಆನಂದಿಸಬಹುದು. ಇದಕ್ಕೆ ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಅವಕಾಶ ಮಾಡಿಕೊಡಲಾಗುತ್ತಿದೆ.

ನವೆಂಬರ್ 14 ಮತ್ತು 15 ರಂದು ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ 'ಮಕ್ಕಳ ಹಬ್ಬ' ಆಯೋಜನೆ ಮಾಡಲಾಗಿದೆ. ಎರಡು ದಿನ ಬೆಳಗ್ಗೆ 10 ರಿಂದ ಸಂಜೆ 6.30ರವರೆಗೆ ಕಾರ್ಯಕ್ರಮ ನಡೆಯಲಿದೆ.[ಎಚ್ಎಸ್ಆರ್ ಲೇಔಟ್‌ನಲ್ಲಿ ಕುಂಟೆಬಿಲ್ಲೆ ಆಟ, ಎತ್ತಿನಗಾಡಿ ಓಟ]
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ವಿದ್ಯಾರಣ್ಯ ಸಂಸ್ಥೆ ಜಂಟಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಿವೆ. ಸಾಂಪ್ರದಾಯಿಕ ಆಟಗಳನ್ನು ಮಕ್ಕಳು ಆಡಿ ಆನಂದಿಸಬಹುದು. ಜತೆಗೆ ಫನ್ ಕ್ರಾಫ್ಟಿಂಗ್, ಕತೆ ಹೇಳುವುದು ಮತ್ತು ಕೇಳುವುದು, ಹೂಗಳ ಪ್ರದರ್ಶನ, ಸಾಂಸ್ಕೃತಿಕ ಭವ್ಯತೆ ಸಾರುವ ಪ್ರದರ್ಶನಗಳನ್ನು ಕಣ್ಣು ತುಂಬಿಕೊಳ್ಳಬಹುದು.
ಹಾಗಾದರೆ ನಿಮ್ಮ ಕುಟುಂಬದೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿ ಮಕ್ಕಳ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತೀರಿ ತಾನೆ? ಮಹಾನಗರದ ಮಕ್ಕಳಿಗೂ ಸಾಂಪ್ರದಾಯಿಕ ಆಟಗಳ ಪರಿಚಯ ಮಾಡಿಕೊಡುತ್ತೀರಿ ತಾನೆ?












Click it and Unblock the Notifications