ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸಿದ ಪತಿ ಕೊಲೆಗೈದ ಪತ್ನಿ
ಬೆಂಗಳೂರು, ಜ. 11: "ರಾತ್ರಿ ಚರ್ಚ್‌ಗೆ ಹೋಗಿದ್ರಿ... ಕೇಕ್ ತಿಂದ್ವಿ, ನಾನ್ ವೆಜ್ ಊಟ ಮಾಡಿದ್ವಿ, ಎಲ್ಲ ಮುಗಿದು ಮಲಗಿರಬೇಕಾದ್ರೆ, ನಮ್ಮ ತಂದೆಯನ್ನು ಕೋಲಿನಿಂದ ಹೊಡೆದು ಕಣ್ಣೆದುರೇ ಸಾಯಿಸಿಬಿಟ್ಟಟ್ರು..
ಅಕ್ರಮ ಸಂಬಂಧ ಪ್ರಶ್ನಿಸಿದ ಗಂಡನನ್ನೇ ಹತ್ಯೆ ಮಾಡಿ ಜೈಲು ಸೇರಿದ ಪತ್ನಿಯ ಕುರಿತು ಆಕೆಯ ಪುತ್ರ ನೋವಿನ ಪದಗಳಿವು. ಅಂದಹಾಗೆ ಅಕ್ರಮ ಸಂಬಂಧವೊಂದು ಮಗುವನ್ನು ಅನಾಥವನ್ನಾಗಿ ಮಾಡಿದೆ. ಅಪ್ಪ ಕೊಲೆಯಾದ್ರೆ, ಅಮ್ಮ ಜೈಲು ಪಾಲಾಗಿದ್ದಾಳೆ. ಇದೀಗ ಪುಟ್ಟ ಮಗ ಅನಾಥವಾಗಿದ್ದಾನೆ.
ಅಂದಹಾಗೆ ಇದು ಯಾವೋದು ಸಿನಿಮಾ ಸ್ಟೋರಿಯಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದಲ್ಲಿ ನಡೆದಿರುವ ಘೋರ ಘಟನೆ. ಆತನ ಹೆಸರು ರಾಘವೇಂದ್ರ, ಆಕೆಯ ಹೆಸರು ಶೈಲಜಾ. ಈ ದಂಪತಿಗೆ ಮುದ್ದಾದ ಮಗು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ರಾಘವೇಂದ್ರ ನೇಕಾರಿಕೆ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಶೈಲಜಾ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ದುಡಿಮೆಯಿಂದ ಯಾವುದೇ ಕೊರತೆಯಿಲ್ಲದೇ ಸಂಸಾರ ನಡೆಯುತ್ತಿತ್ತು.

ಮೂರ್ಛೆ ಕತೆ : ಈ ಪುಟ್ಟ ಸಂಸಾರ ನೆಮ್ಮದಿ ಕೆಡಿಸಿದ್ದು ಅಕ್ರಮ ಸಂಬಂಧ. ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಶೈಲಜಾ ಮತ್ತೊಬ್ಬ ವ್ಯಕ್ತಿಯ ಸಾಂಗತ್ಯ ಬೆಳೆಸಿದ್ದಳು. ಈ ಅಕ್ರಮ ಸಂಬಂಧದ ಬಗ್ಗೆ ರಾಘವೇಂದ್ರನಿಗೆ ಗೊತ್ತಿರಲಿಲ್ಲ. ಗೊತ್ತಾದ ಕೂಡಲೇ ಮನೆಯಲ್ಲಿ ದಂಪತಿ ಜಗಳ ಮಾಡುತ್ತಿದ್ದರು. ಇಬ್ಬರ ನಡುವೆ ಪದೇ ಪದೇ ಜಗಳ ಆಗುತ್ತಿತ್ತು. ಹದಿನೈದು ದಿನಗಳ ಹಿಂದೆ ಇದ್ದಕ್ಕಿದ್ದಂತೆ ರಾಘವೇಂದ್ರ ಸಾವನ್ನಪ್ಪಿದ್ದ. ಆತನ ಕುಟುಂಬಸ್ಥರು ಕೇಳಿದ್ರೆ, ಮೂರ್ಛೆ ಹೋಗಿ ಕೆಳಗೆ ಬಿದ್ದ. ಈ ವೇಳೆ ಮೃತಪಟ್ಟಿದ್ದಾನೆ ಎಂದು ಹೇಳಿದ್ದಳು. ಇಡೀ ಕುಟುಂಬಸ್ಥರು ಇದು ನಿಜ ಇರಬಹುದು ಎಂದು ನಂಬಿಸಿದ್ದರು.

ಇದಾಗಿ ಹದಿನೈದು ದಿನಗಳ ನಂತರ ಕಣ್ಣೆದುರು ನಡೆದಿದ್ದ ಅಪ್ಪನ ಕೊಲೆಯ ಸಂಗತಿಯನ್ನು ಬಾಲಕ ಬಾಯಿ ಬಿಟ್ಟಿದ್ದಾನೆ. ಡಿ. 25 ರಂದು ಎಂದಿನಂತೆ ಚರ್ಚ್‌ಗೆ ಹೋಗಿ ಬಂದಿದ್ದಾರೆ. ಕೇಕ್ ತಿಂದು, ನಾನ್ ವೆಜ್ ಊಟ ಮಾಡಿ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಅನೈತಿಕ ಸಂಬಂಧ ವಿಚಾರವಾಗಿ ಜಗಳ ಮಾಡುತ್ತಿದ್ದ ಪತಿ ರಾಘವೇಂದ್ರನ ತಲೆಗೆ ಸಂಚು ರೂಪಿಸಿ ಪ್ರಿಯಕರ ಹನುಮಂತನನ್ನು ಮನೆಗೆ ಕರೆಸಿದ್ದಾರೆ. ಶೈಲಜಾ ಮತ್ತು ಆಕೆ ತಾಯಿ ರಾಘವೇಂದ್ರನ ಬಾಯಿ ಮುಚ್ಚಿದರೆ, ಪ್ರಿಯಕರ ಹನುಮಂತ ಕೋಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ರಾಘವೇಂದ್ರನ ಸಾವಿನ ಬಗ್ಗೆ ಅನುಮಾನಗೊಂಡಿದ್ದ ಆತನ ಮನೆಯವರು ಕೇಳಿದರೆ, ಮೂರ್ಛೆ ಹೋಗಿ ಸಾವನ್ನಪ್ಪಿದ ಕಥೆ ಕಟ್ಟಿದ್ದಾಳೆ. ಇದನ್ನೇ ನಂಬಿ ಸುಮ್ಮನಾಗಿಬಿಟ್ಟಿದ್ದ ರಾಘವೇಂದ್ರ ಕುಟುಂಬಸ್ಥರು ಬಾಲಕ ನೀಡಿದ ಮಾಹಿತಿ ಮೇರೆಗೆ ದೊಡ್ಡಬಳ್ಳಾಪುರ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಗಂಡನ ದೇಹ ಸುಟ್ಟು ಅಂತ್ಯಕ್ರಿಯೆ ಮಾಡಿದ್ದು ನಾವು ಸೇಫ್ ಅಂತ ತಾಯಿ ಮಗಳು ಡ್ರಾಮ ಮಾಡಿಕೊಂಡು ಸುಮ್ಮನಾಗಿದ್ದರು. ಬಾಲಕನ ಹೇಳಿಕೆ ಆಧರಿಸಿ ದೊಡ್ಡಬಳ್ಳಾಪುರ ನಗರ ಪೊಲೀಸರು ತನಿಖೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಅಷ್ಟರಲ್ಲಾಗಲೇ ಹಂತಕಿ ಶೈಲಜಾ, ಆಕೆ ತಾಯಿ ಮತ್ತು ಪ್ರಿಯಕರ ಊರು ಬಿಟ್ಟು ಎಸ್ಕೇಪ್ ಆಗಿದ್ದರು. ಇದೀಗ ಮೂವರನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

Recommended Video
ಒಟ್ಟಾರೆ ಕ್ಷಣಿಕ ಸುಖಕ್ಕಾಗಿ 12 ವರ್ಷಗಳ ಸಂಸಾರ ಮಾಡಿ ಮಕ್ಕಳ ಭವಿಷ್ಯ ರೂಪಿಸಬೇಕಿದ್ದ ತಾಯಿಯೆ ಕಟ್ಟಿಕೊಂಡ ಗಂಡನಿಗೆ ಕೊಳ್ಳಿಯಿಟ್ಟಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ. ಇನ್ನೂ ಮಾಡಿದ ತಪ್ಪಿಗೆ ಪತ್ನಿ ಜೈಲು ಪಾಲಾದ್ರೆ ಗಂಡ ಮಾಡದ ತಪ್ಪಿಗೆ ಪರಲೋಕ ಸೇರಿದ್ದಾನೆ. ಆದ್ರೆ ಇನ್ನೂ ಲೋಕವನ್ನೆ ಸರಿಯಾಗಿ ನೋಡದ ಮಗು ತಂದೆ ತಾಯಿ ಇಬ್ಬರ ಪ್ರೀತಿಯಿಂದ ವಂಚಿತವಾಗಿದೆ.












Click it and Unblock the Notifications