ಬೆಂಗಳೂರು ವೈದ್ಯ ದಂಪತಿ ಕುಟುಂಬ ಯುಪಿಯಲ್ಲಿ ಕೊಲೆ

ಇವೆರಡು ಘಟನೆಗಳು ಬಡ ಜನರ ಕಥೆಯಾದರೆ ಶ್ರೀಮಂತ ಕುಟುಂಬದವರಿಗೂ ಉತ್ತರ ಪ್ರದೇಶದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಕುಟುಂಬದಲ್ಲಿ ಹಣ ಇದೆಯೆಂದು ತಿಳಿದರೆ ಸಾಕು ಆ ಕುಟುಂಬದವರ ಅಂತ್ಯ ಯಾವ ಕ್ಷಣದಲ್ಲಾದರೂ ಆಗಬಹುದು!.
ಉತ್ತರ ಪ್ರದೇಶದಲ್ಲಿ ನಡೆದ ಪಾಪಿಗಳ ಕ್ರೌರ್ಯಕ್ಕೆ ವೈದ್ಯ ಬೆಂಗಳೂರಿನಲ್ಲಿ ನೆಲೆಸಿರುವ ವೈದ್ಯ ದಂಪತಿಗಳ ಕುಟುಂಬವೇ ಬಲಿಯಾಗಿದೆ.ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ
ವೈದ್ಯರಾಗಿರುವ ಉತ್ತರ ಪ್ರದೇಶ ಮೂಲದವರಾದ ಡಾ. ಉಜ್ವಲ್ ಚಂದ್ರ ಅವರ ಮಗಳು, ಪೋಷಕರು, ಅತ್ತೆಯವರನ್ನು ಪಾಪಿಗಳು ಕಾರಣವಿಲ್ಲದೇ ಕೊಂದು ಹಾಕಿದ್ದಾರೆ.
ಒಂದು ವರ್ಷದ ಹಿಂದೆಯಷ್ಟೇ ಬೆಂಗಳೂರಿಗೆ ಆಗಮಿಸಿದ ಡಾ. ಉಜ್ವಲ್ ಚಂದ್ರ ತಮ್ಮ ಆರು ವರ್ಷದ ಮಗಳನ್ನು ಉತ್ತರ ಪ್ರದೇಶದ ಮುರ್ದಾಬಾದ್‌ನಲ್ಲಿರುವ ತಮ್ಮ ತಂದೆ ತಾಯಿ ಬಳಿ ಬಿಟ್ಟು ಬಂದಿದ್ದರು.
ಮೇ.15 ರಾತ್ರಿ ಅಪರಿಚಿತ ವ್ಯಕ್ತಿಗಳು ಮುರ್ದಾಬಾದ್‌ನಲ್ಲಿರುವ ಡಾ. ಉಜ್ವಲ್ ಚಂದ್ರ ಅವರ ಮನೆಗೆ ನುಗ್ಗಿ ಕಾರಣವಿಲ್ಲದೇ ನಿವೃತ್ತ ಸರ್ಕಾರಿ ವೈದ್ಯರಾಗಿರುವ ತಂದೆ ಓಮ್ ಮೆಹ್ರೊತ್ರ, ತಾಯಿ ಶೆಲ್ಲಿಯವರನ್ನು ಕೊಂದು ಹಾಕಿದ್ದಾರೆ. ಜೊತೆಗೆ ಇವರ ಪುಟ್ಟ ಮಗಳು ದೇವಾಂಶಿ ಮತ್ತು ಅತ್ತೆ ಲಕ್ಷ್ಮೀ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ನಮ್ಮ ತಂದೆ ತಾಯಿಗಳು ಕಾಲೋನಿಯೊಂದರಲ್ಲಿ ವಾಸಿಸುತ್ತಿದ್ದು ಎಲ್ಲರ ಜೊತೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದರು, ಯಾವ ಕಾರಣಕ್ಕೆ ನಮ್ಮ ಮನೆಯನ್ನೇ ಗುಂಡಾಗಳು ಗುರಿಯಾಗಿರಿಸಿದ್ದು ಎಂಬುದು ಇವರೆಗೂ ಗೊತ್ತಾಗಿಲ್ಲ ಎಂದು ಡಾ. ಉಜ್ವಲ್ ಚಂದ್ರ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಅತ್ತೆಯವರು ಕೆಲವರಲ್ಲಿ ಬೇರೆ ಫ್ಲ್ಯಾಟ್ ಖರೀದಿ ಬಗ್ಗೆ ವಿಚಾರಣೆ ನಡೆಸುತ್ತಿದ್ದರು. ಕೊಲೆಗುಡುಕರಿಗೆ ಈ ವಿಚಾರ ಹೇಗೂ ಗೊತ್ತಾಗಿ ನಮ್ಮ ಕುಟುಂಬದವರ ಜೊತೆ ತುಂಬಾ ಹಣವಿದೆ ಎಂದು ತಿಳಿದು ಕೊಲೆ ಮಾಡಿರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ ಎಂದು ಉಜ್ವಲ್ ಚಂದ್ರ ಹೇಳಿದ್ದಾರೆ.
ಪೊಲೀಸರು ಕೊಲೆಯಾದ ದಿನದಿಂದ ಇಲ್ಲಿಯವರೆಗೆ ಪತ್ತೆ ಕಾರ್ಯ ಆರಂಭಿಸಿದ್ದರೂ ಕೊಲೆಗುಡುಕರ ಪತ್ತೆ ಆಗಿಲ್ಲ. ಸರ್ಕಾರ ಈಗ ಎಲ್ಲಾ ಕೊಲೆ ಘಟನೆಗಳಿಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಪಡೆಯನ್ನು ನಿಯೋಜಿಸಿದೆ. ಕೊಲೆಗುಡುಕರಿಗೆ ಮರಣದಂಡನೆಯೇ ಸೂಕ್ತವಾದ ಶಿಕ್ಷೆ. ಈ ಶಿಕ್ಷೆ ನೀಡದಿದ್ದಲ್ಲಿ ಉತ್ತರ ಪ್ರದೇಶದಲ್ಲಿ ಮತ್ತಷ್ಟು ಅಮಾಯಕರು ಪಾಪಿಗಳಿಗೆ ಬಲಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಅವರು ತಮ್ಮ ಅಳಲನ್ನು ತೊಡಿಕೊಳ್ಳುತ್ತಿದ್ದಾರೆ.
ಹೃದ್ರೋಗ ತಜ್ಞರಾಗಿರುವ ಡಾ. ಉಜ್ವಲ್ ಚಂದ್ರ ಅವರು ಹೆಚ್ಚಿನ ಅನುಭವ ಪಡೆದು ಉತ್ತರ ಪ್ರದೇಶದ ತಮ್ಮ ತವರು ನೆಲದಲ್ಲಿ ಹೃದಯಾಲಯವನ್ನು ಸ್ಥಾಪಿಸಿ ತಂದೆ ತಾಯಿಗಳ ಜೊತೆ ನೆಲೆಸಬೇಕೆಂದು ಕನಸು ಕಂಡಿದ್ದರು. ಆದರೆ ಈಗ ಅವರ ಎಲ್ಲಾ ಕನಸುಗಳು ನುಚ್ಚು ನೂರಾಗಿದೆ.












Click it and Unblock the Notifications