ಬೆಂಗಳೂರು : ದೊಡ್ಡ ಬಾಣಸವಾಡಿಯಲ್ಲಿ ವೈದ್ಯೆ ಆತ್ಮಹತ್ಯೆ
ಬೆಂಗಳೂರು, ಜ.3 : ಮದುವೆಯಾಗುವಂತೆ ಮನೆಯವರು ಒತ್ತಡ ಹಾಕಿದ ಹಿನ್ನಲೆಯಲ್ಲಿ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವೈದ್ಯೆಯ ಮೃತ ದೇಹವನ್ನು ಅಂಬೇಡ್ಕರ್ ಮೆಡಿಕಲ್ ಕಾಲೇಜಿಗೆ ಹಸ್ತಾಂತರ ಮಾಡಲಾಗುತ್ತದೆ.
ದೊಡ್ಡ ಬಾಣಸವಾಡಿಯ ಮನೆಯಲ್ಲಿ ಡಾ.ದೀಪ್ತಿ (23) ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶನಿವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ಶ್ರೀನಿವಾಸಪುರ ಮೂಲದವರಾದ ದೀಪ್ತಿ ರಾಮಮೂರ್ತಿ ನಗರದಲ್ಲಿರುವ ರಾಶಿ ನರ್ಸಿಂಗ್ ಹೋಮ್‌ನಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದರು. [ಆತ್ಮಹತ್ಯೆಗೆ ಯತ್ನಿಸುವುದು ಇನ್ನು ಅಪರಾಧವಲ್ಲ!]

ಡಾ.ದೀಪ್ತಿ ಪೋಷಕರು ಮದುವೆಯಾಗುವಂತೆ ಬಲವಂತ ಮಾಡುತ್ತಿದ್ದರು. ಇಷ್ಟವಿಲ್ಲದ ಹುಡುಗನೊಂದಿಗೆ ವಿವಾಹವಾಗುದಿಲ್ಲ ಎಂದು ಹೇಳಿದ್ದರೂ, ಒತ್ತಡ ಹಾಕುತ್ತಿದ್ದರು ಎಂದು ತಿಳಿದುಬಂದಿದೆ. ಇದರಿಂದ ಮನನೊಂದ ಆಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. [ಮದರಂಗಿ ಶಾಸ್ತ್ರ ಮುಗಿಸಿ ಪ್ರಿಯಕರನ ಜೊತೆ ವಧು ಪರಾರಿ!]
ಬಾಣಸವಾಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಡಾ.ದೀಪ್ತಿ ಅವರು ಡೆತ್‌ನೋಟ್ ಬರೆದಿಟ್ಟಿದ್ದು ಮೃತದೇಹವನ್ನು ಅಂಬೇಡ್ಕರ್ ಮೆಡಿಕಲ್ ಕಾಲೇಜಿಗೆ ದಾನ ಮಾಡಬೇಕೆಂದು ಬರೆದಿಟ್ಟಿದ್ದರು. ಅದರಂತೆ ಮೃತ ದೇಹವನ್ನು ದಾನ ಮಾಡಲಾಗುತ್ತದೆ ಎಂದು ಪೋಷಕರು ತಿಳಿಸಿದ್ದಾರೆ.











Click it and Unblock the Notifications