ಜೈಲಿನಲ್ಲಿ ನಟ ದರ್ಶನ್‌ಗೆ ಮತ್ತೊಬ್ಬ ಸ್ನೇಹಿತ-ಮಾಹಿತಿ, ವಿವರ ಇಲ್ಲಿದೆ

Actor Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾ ಗೌಡ ಮತ್ತು ಪಟಾಲಂ ಗ್ಯಾಂಗ್ ಜೈಲು ಪಾಲಾಗಿದ್ದು, ಈ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆಯೇ ಜೈಲಿನಲ್ಲಿ ಸೈಲೆಂಟ್‌ ಆಗಿದ್ದ ನಟ ದರ್ಶನ್‌ಗೆ ಇತ್ತೀಚೆಗಷ್ಟೇ ಹೊಸ ಸ್ನೇಹಿತ ಸಿಕ್ಕಿದ್ದು, ಇದೀಗ ಮತ್ತೊಬ್ಬ ಸ್ನೇಹಿತ ಸಿಕ್ಕಂತಾಗಿದೆ. ಇದರಿಂದ ಅವರ ಮುಖದಲ್ಲಿ ತುಸು ನಗು ಮೂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪವಿತ್ರಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯನ್ನು ನಟ ದರ್ಶನ್‌ & ಗ್ಯಾಂಗ್ ಹತ್ಯೆಗೈದಿತ್ತು ಎನ್ನುವ ಮಾಹಿತಿ ಲಭ್ಯವಾಗಿತ್ತು. ಇನ್ನು ಈ ಪ್ರಕರಣದಲ್ಲಿ ಜೈಲು ಸೇರಿದಾಗಿನಿಂದ ನಟ ದರ್ಶನ್‌ ಯಾರ ಬಳಿಯೂ ಮಾತನಾಡದೇ ಸುಮ್ಮನೆ ಕುಳಿತುಕೊಳ್ಳುತ್ತಿದ್ದರು. ಈ ನಡುವೆಯೇ ಅವರು ಪುಸ್ತಕಗಳನ್ನು ತರಿಸಿ ಓದುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದು, ಈ ಅಭ್ಯಾಸ ಆದಾಗಿನಿಂದ ಅವರು ಜೈಲಿನ ಸಿಬ್ಬಂದಿ ಜೊತೆ ನಗು-ನಗುತ್ತಾ ಮಾತನಾಡುತ್ತಿದ್ದಾರೆ ಎಂದು ತಿಳಿದುಬಂದಿತ್ತು.

Do You Know Who is Another Best Friend to Actor Darshan in Parappana Agrahara Jail

ಈ ಮೂಲಕ ಜೈಲಿನಲ್ಲಿ ಸೈಲೆಂಟ್‌ ಆಗಿದ್ದ ನಟ ದರ್ಶನ್‌ನನ್ನು ತನ್ನೆಡೆಗೆ ಸೆಳೆಯುವ ಮೂಲಕ ಪುಸ್ತಕಗಳೇ ಉತ್ತಮ ಸ್ನೇಹಿತನಂತೆ ಆಗಿವೆ. ಹೀಗೆ ಪುಸ್ತಕ ಹಿಡಿದಾಗಿನಿಂದ ಅವರಲ್ಲಿ ಬದಲಾವಣೆಗಳು ಕಾಣುತ್ತಿವೆ. ಮುಂದೆ ಅವರು ಇದರಿಂದ ಬದಲಾದರೂ ಆಶ್ಚರ್ಯವಿಲ್ಲ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದೀಗ ನಟ ದರ್ಶನ್‌ ಪುಸ್ತಕ ಓದುವುದರ ಜೊತೆಗೆ ಭಜನೆ ಕಡೆ ಗಮನ ಹರಿಸಿದ್ದಾರೆ ಎಂದು ತಿಳಿದುಬಂದಿದೆ.

ಮತ್ತೊಂದೆಡೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸುವ ಮೂಲಕ ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕಲು ಮುಂದಾಗಿದ್ದಾರೆ. ಇದರ ನಡುವೆಯೇ ಜೈಲು ಪಾಲಾಗಿರುವ ನಟ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಮತ್ತು ಕುಟುಂಬಸ್ಥರು ಹರಸಾಹಸ ಪಡುತ್ತಿದ್ದಾರೆ.

ಬೆಳಗ್ಗೆ ವೇಳೆಗೆ ಬೇಗ ಎದ್ದು ಜೈಲಿನಲ್ಲಿಯೇ ವ್ಯಾಯಾಮ ಮಾಡಿ, ಡಿಪ್ಸ್ ಹೊಡೆದು ಫಿಟ್‌ನೆಸ್‌ಗೆ ಒತ್ತು ನೀಡುತ್ತಿದ್ದಾರೆ. ಇನ್ನು ನಟ ದರ್ಶನ್ ಜೈಲಿನಲ್ಲಿ ಯಾರ ಬಳಿಯೂ ಹೆಚ್ಚಾಗಿ ಮಾತನಾಡುತ್ತಿಲ್ಲ, ಬೆರೆಯುತ್ತಿಲ್ಲ. ಬದಲಾಗಿ ಪುಸ್ತಕ ಓದುತ್ತಿದ್ದಾರೆ. ಜೊತೆಗೆ ಇದೀಗ ಸಂಜೆಯಾಗುತ್ತಿದ್ದಂತೆ ಭಜನೆ ಕಡೆ ಗಮನ ಹರಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಎಲ್ಲಾ ಹವ್ಯಾಸಗಳನ್ನು ಗಮನಿಸಿದರೆ, ಅವರು ಮುಂದಿನ ದಿನಗಳಲ್ಲಿ ತುಂಬಾ ಬದಲಾವಣೆ ಆದರೂ ಯಾವುದೇ ಆಶ್ಚರ್ಯವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+