Actor Darshan: ನಟ ದರ್ಶನ್‌ ಕೇಸ್‌ನಲ್ಲಿ ಪೊಲೀಸರ ಮುಂದಿನ ನಡೆ ಏನು ಗೊತ್ತಾ?

Actor Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್‌ ಜೈಲು ಸೇರಿದೆ. ಇನ್ನು ಈ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಗೌಡ ಆಗಿದ್ದರೆ, ಎ2 ದರ್ಶನ್‌ ಆಗಿದ್ದಾರೆ. ಆದರೆ ಇದೀಗ ರಕ್ತಸಿಕ್ತ ಫೋಟೋವೊಂದು ಪೊಲೀಸರ ಕೈಸೇರಿದ್ದು, ಇದರಿಂದ ನಟ ದರ್ಶನ್ ಎ1 ಆರೋಪಿಯನ್ನಾಗಿ ಚಾರ್ಜ್ ಶೀಟ್‌ನಲ್ಲಿ ಬಡ್ತಿ ನೀಡಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಯಾವುದೇ ಒತ್ತಡಗಳಿಗೂ ಕ್ಯಾರೆ ಅನ್ನದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದರ ನಡುವೆಯೇ ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ದರ್ಶನ್‌ನನ್ನು ಹೊರತರಲು ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ, ಇದೀಗ ಪೊಲೀಸರ ಕೈಗೆ ಸಿಕ್ಕಿರುವ ಸಾಕ್ಷ್ಯಗಳನ್ನು ನೋಡಿದರೆ, ದರ್ಶನ್‌ ಹೊರಬರುವುದಂತೂ ಅಷ್ಟಕಷ್ಟೇ ಎನ್ನಲಾಗುತ್ತಿದೆ.

Do you know what is next step of police in actor Darshan case

ಇದೀಗ ಸಿಕ್ಕಿರುವ ರೇಣುಕಾಸ್ವಾಮಿ ಕೈಮುಗಿದು ಬೇಡಿಕೊಂಡಿರುವ ರಸ್ತಸಿಕ್ತ ಫೋಟೋವೊಂದು ದರ್ಶನ್‌ನನ್ನು ಎ1 ಆರೋಪಿಯನ್ನಾಗಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗಿದೆ. ಈಗಾಗಲೇ 70% ತನಿಖೆ ಮುಗಿದಿದ್ದು, ಪೊಲೀಸರು ದರ್ಶನ್‌ ವಿರುದ್ಧ ಮಹತ್ವದ ದಾಖಲೆಯನ್ನು ಕಲೆಹಾಕಿದ್ದಾರೆ. ಇನ್ನು ತನಿಖೆ ಮುಗಿದು ಚಾರ್ಜ್ ಶೀಟ್ ಸಲ್ಲಿಕೆ ವೇಳೆ ದರ್ಶನ್ ಎ1 ಆರೋಪಿ ಮಾಡಲು ಹಲವು ಕಾರಣಗಳು ಕೂಡ ಇವೆ. ದರ್ಶನ್‌ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಲು ಸೂಚನೆ ಕೊಟ್ಟಿದ್ದು ಕೂಡ ಈಗಾಗಲೇ ಪ್ರೂ ಆಗಿದೆ.

ಎ1 ಆರೋಪಿ ಮಾಡಲು ಮಹತ್ವದ ಕಾರಣಗಳು

1. ದರ್ಶನ್‌ನಿಂದಲೇ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಲು ಸೂಚನೆ
2. ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರನಿಗೆ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್‌ ಮಾಡಲು ಡೀಲ್‌.
3. ಬಳಿಕ ರೇಣುಕಾಸ್ವಾಮಿಯನ್ನು ಅಪಹರುಸಿ ಆರ್.ಆರ್.ನಗರದ ಪಟ್ಟಣಗೆರೆಯ ಶೆಡ್‌ಗೆ ಕರೆತರಲಾಗಿತ್ತು.
4. ಪಟ್ಟಣಗೆರೆ ಶೆಡ್‌ನಲ್ಲಿ ದರ್ಶನ್‌ನಿಂದ ಬೆಲ್ಟ್ ಲಾಠಿ ಹಾಗೂ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಲಾಗಿತ್ತು.
5. ರೇಣುಕಾಸ್ವಾಮಿಗೆ ಸಿಕ್ಕ ಸಿಕ್ಕ ಕಡೆ ಹಲ್ಲೆ ಮಾಡಿದ್ದ ನಟ ದರ್ಶನ್.
6. ರೇಣುಕಾಸ್ವಾಮಿ ಸಾವನ್ನಪ್ಪಿದ್ದ ಬಳಿಕ ಶವ ವಿಲೇವಾರಿಗೆ ಯೋಜನೆ.
7. ಶವ ವಿಲೇವಾರಿ ಮಾಡುವಂತೆ ಪ್ರದೋಷ್‌ಗೆ 30 ಲಕ್ಷ ರೂಪಾಯಿ ಹಣ ನೀಡಿದ್ದ ನಟ ದರ್ಶನ್.
8. ಕೊಲೆ ಮಾಡಿದ ಸ್ಥಳದಲ್ಲಿ ಸಿಸಿಟಿವಿ ಡಿವಿಆರ್‌ನಲ್ಲಿನ ವೀಡಿಯೊ ಅಳಿಸಿ ಹಾಕಿ ಸಾಕ್ಷಿ ನಾಶದ ಪ್ರಯತ್ನ.
9. ಇವೆಲ್ಲದಕ್ಕೂ ಪ್ರಮುಖ ಕಾರಣಕರ್ತ ದರ್ಶನ್ ಆಗಿದ್ದು, ಆದ್ದರಿಂದ ಎ1 ಆರೋಪಿ ಮಾಡಲು ಪೊಲೀಸರು 10. ಸಿದ್ಧತೆ ನಡೆಸಿದ್ದಾರೆ ಎಂದು ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+