Actor Darshan Family: ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಕುಟುಂಬಸ್ಥರು ಹಾಕಿದ ಷರತ್ತುಗಳೇನು ಗೊತ್ತಾ?
ಬೆಂಗಳೂರು, ಜುಲೈ, 08: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಎ2 ಆರೋಪಿ ನಟ ದರ್ಶನ್, ಎ1 ಪವಿತ್ರಾ ಗೌಡ ಸೇರಿದಂತೆ 17 ಮಂದಿ ಜೈಲು ಪಾಲಾಗಿದ್ದಾರೆ. ಇನ್ನು ಪೊಲೀಸರು ಈ ಬಗ್ಗೆ ತನಿಖೆ ಚುರುಕುಗೊಳಿಸಿದ್ದು, ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ನಡುವೆಯೇ ನಟ ದರ್ಶನ್‌ಗೆ ಕುಟುಂಬಸ್ಥರು ಷರತ್ತೊಂದನ್ನು ಹಾಕಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿದ್ದಕ್ಕೆ ರೇಣುಕಾಸ್ವಾಮಿಯನ್ನು ದರ್ಶನ್ & ಗ್ಯಾಂಗ್ ಬರ್ಬರವಾಗಿ ಹತ್ಯಗೈದಿದ್ದು, ಇವರೆಲ್ಲರೂ ಇದೀಗ ಜೈಲು ಪಾಲಾಗಿದ್ದಾರೆ. ಜೈಲು ಪಾಲಾದ ದರ್ಶನ್‌ನನ್ನು ನೋಡಲು ಅವರ ಕುಟುಂಬಸ್ಥರು ಹಾಗೂ ಆಪ್ತರು ಪರಪ್ಪನ ಅಗ್ರಹಾರಕ್ಕೆ ಆಗಮಿಸುತ್ತಲೇ ಇದ್ದಾರೆ. ಅಲ್ಲದೆ, ದರ್ಶನ್‌ನನ್ನು ಜೈಲಿನಿಂದ ಹೊರತರಲು ಕಟುಂಬಸ್ಥರು ಹಾಗೂ ಪತ್ನಿ ವಿಜಯಲಕ್ಷ್ಮಿ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ.

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಒಂದೇ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ಈ ಆರೋಪದಲ್ಲಿ ನಟ ದರ್ಶನ್ ಸೇರಿ 17 ಜನ ಜೈಲು ಪಾಲಾಗಿದ್ದಾರೆ. ಅಲ್ಲದೆ ಈ ಕೇಸ್‌ನಿಂದ ದರ್ಶನ್‌ನನ್ನು ಮುಕ್ತ ಮಾಡಬೇಕು ಎಂದು ಕುಟುಂಬಸ್ಥರು ಹೋರಾಟ ನಡೆಸುತ್ತಲೇ ಇದ್ದಾರೆ.
ಈಗಾಗಲೇ ನಟ ದರ್ಶನ್ ವಿರುದ್ಧ ಪೊಲೀಸರು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆ ದೊಡ್ಡ ದೊಡ್ಡ ವ್ಯಕ್ತಿಗಳು ದರ್ಶನ್‌ನ್ನು ಪಾರು ಮಾಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಆದರೆ ಪತ್ನು ವಿಜಯಲಕ್ಷ್ಮಿ, ತಾಯಿ ಮೀನಾ ತೂಗುದೀಪ್ ಮತ್ತು ಸಹೋದರ ದಿನಕರ್ ಮಾತ್ರ ದರ್ಶನ್‌ನನ್ನು ಬಿಡಿಸಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಆದರೆ ಕುಟುಂಬಸ್ಥರು ದರ್ಶನ್‌ಗೆ ಒಂದು ಷರತ್ತು ಹಾಕಿದ್ದಾರಂತೆ. ದರ್ಶನ್ ಜೀವನದಲ್ಲಿ ಇಷ್ಟೆಲ್ಲಾ ಆಗಿದ್ದು ಪವಿತ್ರಾ ಗೌಡ ಅನ್ನುವ ಸುಂದರಿಗಾಗಿ. ಒಂದು ಪ್ರೀತಿಗಾಗಿ, ಸ್ನೇಹಕ್ಕಾಗಿ ಗೆಳೆತನಕ್ಕಾಗಿ ಎಂದು ಪೊಲೀಸ್ ಮೂಲಗಳೇ ಹೇಳುತ್ತಿವೆ. ಪವಿತ್ರಾ ಗೌಡಗಾನಿಂದಾಗಿಯೇ ದರ್ಶನ್ ಜೈಲು ಸೇರಿದ್ದು, ಈಗ ಅದೇ ಪವಿತ್ರಾ ಗೌಡಳನ್ನು ಮತ್ತೆಂದು ಕಣ್ಣೆತ್ತಿಯೂ ನೋಡಬಾರದು ಎಂದು ಕುಟುಂಬಸ್ಥರು ದರ್ಶನ್‌ಗೆ ಕಂಡೀಷನ್ ಹಾಕಿದ್ದಾರಂತೆ. ದರ್ಶನ್ ಇದಕ್ಕೆಲ್ಲ ಒಪ್ಪಿಕೊಂಡರಾ ಎನ್ನುವುದೇ ಇದೀಗ ಯಕ್ಷಪ್ರಶ್ನೆಯಾಗಿದೆ.
ನಟ ದರ್ಶನ್ ತೂಕ ಇಳಿಕೆ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ ತೂಕದಲ್ಲಿ ಇಳಿಕೆಯಾಗಿದೆ ಎನ್ನುವ ಮಾಹಿತಿಯೊಂದು ಮೂಲಗಳಿಂದ ಲಭ್ಯವಾಗಿದೆ.
ಪೊಲೀಸರು ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಕೆಯನ್ನು ಚುರುಕುಗೊಳಿಸಿದ್ದಾರೆ. ಮತ್ತೊಂದೆಡೆ ಪ್ರಜರಣದಲ್ಲಿ ಜೈಲೈ ಸೇರಿದಾಗಿನಿಂದ ನಟ ದರ್ಶನ್ ತೂಕದಲ್ಲಿ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ. ಹಾಗಾದರೆ ಜೈಲು ಸೇರಿದಾಗಿನಿಂದಲೂ ತೂಕ ಎಷ್ಟು ಕಡಿಮೆಯಾಗಿದೆ ಹಾಗೂ ಮೊದಲಿನ ತೂಕ ಎಷ್ಟಿದ್ದರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ತೂಕದಲ್ಲಿ ತಿಂಗಳೊಳಗೆ 10 ಕಿಜಿಯಷ್ಟು ತೂಕ ಇಳಿಕೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಈ ಹಿನ್ನೆಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ನ ಆರೋಗ್ಯದ ಬಗ್ಗೆ ಜೈಲಾಧಿಕಾರಿಗಳು ನಿಗಾ ವಹಿಸಿದ್ದಾರೆ ಎಂದು ತಿಳಿದುಬಂದಿದೆ.
ಮೆಡಿಕಲ್ ಟೆಸ್ಟ್ ವೇಳೆ 107 ಕೆ.ಜಿ. ತೂಕ ಇದ್ದ ನಟ ದರ್ಶನ್ ಇದೀಗ 10 ಕೆ.ಜಿ ಇಳಿಕೆಯಾಗಿದ್ದಾರೆ. ಅಂದರೆ 97 ಕ.ಜಿ ಗೆ ಇಳಿಕೆಯಾಗಿದ್ದು, ಆದ್ದರಿಂದ ಜೈಲಾಧಿಕಾರಿಗಳು ನಟ ದರ್ಶನ್ ಆರೋಗ್ಯದ ಮೇಲೆ ನಿಗಾವಹಿಸಿದ್ದಾರೆ. ಅಲ್ಲದೆ ನಿಯಮಿತ ಆರೋಗ್ಯ ತಪಾಸಣೆಗೂ ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications