Pavithra Gowda: ಜೈಲು ಹಕ್ಕಿ ಪವಿತ್ರಾ ಗೌಡ-ಸಂಜಯ್ ಸಿಂಗ್‌ ಡಿವೋರ್ಸ್‌ ಅಸಲಿ ಸತ್ಯ ಏನು ಗೊತ್ತಾ?-ಮಾಹಿತಿ, ವಿವರ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಹಾಗಾದರೆ ನಟ ದರ್ಶನ್‌ ಪವಿತ್ರಾ ಗೌಡ ನಡುವೆ ಸ್ನೇಹ ಬೆಳೆದಿದ್ದು ಹೇಗೆ? ಮತ್ತೊಂದೆಡೆ ಸಂಜಯ್‌ ಸಿಂಗ್‌ ಈಕೆಯ ನಡುವೆ ಆದ ಡಿವೋರ್ಸ್‌ ರಹಸ್ಯದ ಅಸಲಿ ಸತ್ಯ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ಕೊಲೆ ನಡೆದಿದೆ ಎನ್ನುವ ಆರೋಪ ಇದೆ. ಇನ್ನು ಕಳೆದ 10 ವರ್ಷಗಳಿಂದ ನಟ ದರ್ಶನ್ ಮತ್ತು ನನ್ನ ನಡುವೆ ಸಂಬಂಧ ಇದೆ ಅಂತಾ ಸ್ವತಃ ಪವಿತ್ರಾ ಗೌಡ ಫೋಟೋಗಳ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

Do you know the real truth of Pavithra Gowda-Sanjay Singh divorce

2007ರಲ್ಲಿಯೇ ಉತ್ತರ ಪ್ರದೇಶ ಮೂಲದ ಸಂಜಯ್ ಸಿಂಗ್ ಎಂಬುವರೊಂದಿಗೆ ಪವಿತ್ರಾ ಗೌಡಗೆ ಮದುವೆ ಆಗಿದ್ದರು. ಸಂಜಯ್ ಸಿಂಗ್ ಎಂಬುವರನ್ನ ಪ್ರೀತಿಸಿ ಪವಿತ್ರಾ ಗೌಡ ವಿವಾಹ ಆಗಿದ್ದರು. 2009ರಲ್ಲಿ ಸಂಜಯ್ ಸಿಂಗ್ -ಪವಿತ್ರಾ ಗೌಡ ದಂಪತಿಗೆ ಹೆಣ್ಣು ಮಗು ಹುಟ್ಟಿದ್ದು, 2013ರಲ್ಲಿ ಇವರಿಬ್ಬರು ವಿಚ್ಛೇದನ ಪಡೆದರು ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇವರ ವಿಚ್ಛೇದನಕ್ಕೆ ಕಾರಣ ಏನು ಎನ್ನು ಅಸಲಿ ಕಾರಣ ಏನೆಂದು ಇಲ್ಲಿ ತಿಳಿಯಿರಿ.

"ಪ್ಯಾಟೆ ಹುಡ್ಗೀರ್.. ಹಳ್ಳಿ ಲೈಫು' ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದರು. ಪವಿತ್ರಾ ಗೌಡಗೆ ಕೋಳಿ ರಮ್ಯಾ ಸ್ನೇಹಿತೆ ಆಗಿದ್ದು, ಈ ಸಂದರ್ಭದಲ್ಲಿ ಇಂಡಸ್ಟ್ರಿಗೆ ಎಂಟ್ರಿ ಆರಂಭವಾಯಿತು. ಎಲ್ಲಾ ಬಿಟ್ಟು ಮನೆಯಲ್ಲಿರು, ನಾನು ನೋಡಿಕೊಳ್ತೀನಿ ಅಂತಾ ಹೇಳಿದ್ದೆ. ಆಗ ನೀನೇ ಡಲ್ಲಾ ಬಿಟ್ಟು ಮನೆಯಲ್ಲಿರು, ನಾನು ನೋಡಿಕೊಳ್ತೀನಿ ಅಂತಾ ಅವಳು ಹೇಳಿದಳು. ಅದು ಹೇಗೆ ಸಾಧ್ಯ? ಹೇಳುವ ಮೂಲಕ ನಮ್ಮಿಬ್ಬರ ಮುಂದಿನ ಜೀವನವನ್ನು ನಿರ್ಧಾರ ಮಾಡಿದೆವು," ಅಂತಾ ಹೇಳಿದ್ದಾರೆ.

"ನಾವೂ 2013 ಆಗಸ್ಟ್‌ನಲ್ಲಿ ನಾವು ಡಿವೋರ್ಸ್ ಆಗಿದ್ದು, 2012ರಿಂದಲೇ ನಾವು ಬೇರೆ ಆಗಿದ್ದೆವು. ಈಗ ಬೇರೆ ಆಗುತ್ತೇವೆ ಅಂದರೆ ಹೇಗೆ ಅಂತಾ ಕುಟುಂಬದವರು ಕೇಳಿದರು. ಅಲ್ಲದೆ ನಮ್ಮನ್ನು ಸಂಧಾನ ಮಾಡಲು ಪ್ರಯತ್ನಿಸಿದ್ದರು. ಆದರೆ, ನಾವಿಬ್ಬರೂ ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ," ಎಂದರು.

"ಕೋರ್ಟ್‌ನಲ್ಲಿ ನಾನೊಬ್ಬನೇ ಅಳುತ್ತಾ ನಿಂತುಕೊಂಡಿದ್ದ. ಒಬ್ಬ ಉತ್ತಮ ಸ್ಕೋರ್‌ ಪಡೆದ ವಿದ್ಯಾರ್ಥಿ ಆಗಿದ್ದರೂ 10ನೇ ತರಗತಿ‌ ಅನುತ್ತೀರ್ಣ ಅದರೆ ಹೇಗೆ ಅನಿಸುತ್ತದೆಯೋ, ಹಾಗೆ ಆಯಿತು," ಎಂದು ಉದಾಹರಣೆ ಕೊಡುವ ಮೂಲಕ ಪವಿತ್ರಾಗೌಡ ಪತಿ ಅಸಮಾಧಾನ ಹೊರಹಾಕಿದ್ದಾರೆ.

"ಡಿವೋರ್ಸ್‌ ಬಳಿಕ ಪವಿತ್ರಾಗೌಡ ಮಾತನಾಡಿಲ್ಲ. ಅವಳಿಗೆ ತೊಂದರೆ ಕೊಡಲು ನನಗೆ ಇಷ್ಟ ಇರಲಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ. ಇನ್ನು ಕಳೆದ 11 ವರ್ಷಗಳಲ್ ಕೇವಲ 2-3 ಬಾರಿಯಷ್ಟೇ ಮಗಳನ್ನು ಭೇಟಿ ಆಗಿದ್ದೇನೆ. ಅಲ್ಲದೆ, ದರ್ಶನ್ ಸಿನಿಮಾ ಶೂಟಿಂಗ್‌ ಸ್ಪಾಟ್‌ಗೆ ಒಂದು ಬಾರಿ ಆಟೋಗ್ರಾಫ್ ತೆಗೆದುಕೊಳ್ಳೋಣ ಅಂತಾ ಹೋಗಿದ್ದೆ. ಆದರೆ ಆಗಲಿಲ್ಲ," ಎಂದು ಹೇಳಿದರು.

"ಇನ್ನು ನಮ್ಮಿಬ್ಬರ ಡಿವೋರ್ಸ್ ಆಗಿ 3-4 ತಿಂಗಳಾದ ಮೇಲೆ ದರ್ಶನ್ - ಪವಿತ್ರಾ ಗೌಡ ನಡುವೆ ಸಂಬಂಧ ಇದೆ ಎಂದು ಗೊತ್ತಾಯಿತು. ಆದರೂ ನಾನು ತಲೆಕೆಡಿಸಿಕೊಳ್ಳಲಿಲ್ಲ. ಯಾಕೆಂದರೆ ಆ ಸಮಯದಲ್ಲಿ ನನ್ನ ಮನಸ್ಸು ಸರಿಯಿರಲಿಲ್ಲ.
ಬಳಿಕ ಪೋಷಕರು, ಸ್ನೇಹಿತರ ಆ ನೋವಿನಿಂದ ಹೊರಬಂದೆ," ಎಂದು ಹೇಳಿದ್ದಾರೆ.

ಕೆಲವು ತಿಂಗಳುಗಳ ಹಿಂದೆಯಷ್ಟೇ ವಿಜಯಲಕ್ಷ್ಮೀ -ಪವಿತ್ರಾ ಗೌಡ ನಟುವೆ ಪೋಸ್ಟ್ ಸಮರ ನಡೆದಿತ್ತು. ಆಗ ಸಂಜಯ್‌ ಸಿಂಗ್‌ಗೆ ದರ್ಶನ್‌ & ಪವಿತ್ರಾ ನಡುವೆ ಸಂಬಂಧ ಇದೆ ಗೊತ್ತಾಗಿದ್ದು. ಇನ್ನು ಈ ಬಗ್ಗೆ ಕೇಳಿದಾಗ, ನಮ್ಮ ಪ್ರೈವೇಟ್‌ ಫೋಟೋಸ್‌ ಅವರಿಗೆ ಹೇಗೆ ಸಿಕ್ಕಿತು ಎಂದು ನನಗೆ ಗೊತ್ತಿಲ್ಲ. ಅಲ್ಲದೆ ನಾನು ಸಾಮಾಜಿಕ ಜಾಲಾತಣವನ್ನು ಕೂಡ ಅಷ್ಟಾಗಿ ಬಳಸುವುದಿಲ್ಲ ಎಂದು ಹೇಳಿದ್ದರು.

ಇನ್ನು ಪವಿತ್ರಾ ಗೌಡಳನ್ನು ನೆನಪಿಸಿಕೊಳ್ಳದೇ ಇರುವ ದಿನವೇ ಇಲ್ಲ. ಅವಳೇ ನನ್ನ ಮೊದಲ‌ ಹಾಗೂ ಕೊನೆ. ನಾನಿನ್ನೂ ಸಿಂಗಲ್ ಆಗಿದ್ದೀನಿ. ಆದರೆ ಪವಿತ್ರಾಗೆ ಕಷ್ಟ ಬಂದರೆ ಅವಳ ಪರವಾಗಿ ಯಾವಾಗಲೂ ಇರುತ್ತೇನೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+