ಮಗನ ಪರಿಸ್ಥಿತಿಗೆ ಕಣ್ಣೀರು ಹಾಕಿದ ಡಿಕೆಶಿ ತಾಯಿ ಗೌರಮ್ಮ

Recommended Video

      ಬಿಜೆಪಿಯವರಿಗೆ ಡಿಕೆಶಿ ತಾಯಿ ಹಾಕಿದ ಶಾಪ ಏನು ಗೊತ್ತಾ..? | DK Shivakumar | Oneindia Kannada

      ಬೆಂಗಳೂರು, ಸೆಪ್ಟೆಂಬರ್ 02: ಮಗನಿಗೆ ಬಂದೊದಗಿರುವ ಪರಿಸ್ಥಿತಿ ನೋಡಿ ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ ಅವರು ಕಣ್ಣೀರು ಸುರಿಸಿದ್ದಾರೆ.

      ಇಂದು ಡಿ.ಕೆ.ಶಿವಕುಮಾರ್ ಅವರ ತಂದೆಯವರಿಗೆ ಎಡೆ ಇಡುವ ಕಾರ್ಯ ಮಾಡಲು ದೊಡ್ಡ ಆಲಹಳ್ಳಿಗೆ ಬಂದಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಗನ ಕಷ್ಟಕ್ಕೆ ಕಣ್ಣೀರು ಸುರಿಸಿದರು.

      'ನನ್ನ ಮಗನ ಏಳಿಗೆಯನ್ನು ನೊಡಲಾರದೆ ಬಿಜೆಪಿಯವರು ಅವನ ಮೇಲೆ ತಂತ್ರ ಮಾಡುತ್ತಿದ್ದಾರೆ, ಅವರಿಗೆ ಒಳ್ಳೆಯದಾಗುವುದಿಲ್ಲ' ಎಂದು ಡಿಕೆಶಿ ತಾಯಿ ಗೌರಮ್ಮ ಹೇಳಿದರು.

      Dk Shivakumars Mother Gowramma Gets Emotional

      ಡಿ.ಕೆ.ಶಿವಕುಮಾರ್ ಅವರ ತಂದೆ ಸಮಾಧಿಗೆ ಎಡೆ ಇಡುವ ಕಾರ್ಯವನ್ನು ಡಿಕೆ ಶಿವಕುಮಾರ್ ಪುತ್ರ ನಡೆಸಿಕೊಟ್ಟರು. ಪ್ರತಿವರ್ಷ ಡಿಕೆ.ಶಿವಕುಮಾರ್ ಮತ್ತು ಅವರ ಸಹೋದರರು ಈ ಕಾರ್ಯ ನಡೆಸಿಕೊಡುತ್ತಿದ್ದರು.

      ಇಂದು ಬೆಳಿಗ್ಗೆ ಡಿ.ಕೆ.ಶಿವಕುಮಾರ್ ಅವರೂ ಸಹ ಭಾವುಕರಾಗಿ ಮಾತನಾಡಿದರು. ತಂದೆಯವರ ಸಮಾಧಿಗೆ ಎಡೆ ಇಡಲು ಆಗುತ್ತಿಲ್ಲವೆಂದು ಮಾಧ್ಯಮಗಳ ಮುಂದೆಯೇ ಗದ್ಗದಿತರಾದರು.

      ಗೌರಮ್ಮ ಅವರ ಹೆಸರಿನಲ್ಲಿ ಇರುವ ಆಸ್ತಿ ಸಹ ಡಿಕೆ.ಶಿವಕುಮಾರ್ ಅವರ ಬೇನಾಮಿ ಆಸ್ತಿ ಎಂದು ಇಡಿ, ಐಟಿಗಳು ಪ್ರಕರಣ ದಾಖಲಿಸಿಕೊಂಡಿವೆ. ಇದರ ಬಗ್ಗೆ ಬೇಸರದಿಂದ ಮಾತನಾಡಿದ್ದ ಡಿಕೆಶಿ, ಮಗ, ತಾಯಿಯನ್ನು ನಂಬಬಾರದಾ ಅಥವಾ ತಾಯಿ ಮಗನನ್ನು ನಂಬಬಾರದಾ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+