ಇಡಿ ವಿಚಾರಣೆಗೆ ದೆಹಲಿಗೆ ತೆರಳಿದ ಡಿಕೆಶಿ ಪುತ್ರಿ ಐಶ್ವರ್ಯಾ

Recommended Video

      DK Shivakumar : ವಿಚಾರಣೆಗೆ ದೆಹಲಿಗೆ ತೆರಳಿದ ಡಿಕೆಶಿ ಪುತ್ರಿ ಐಶ್ವರ್ಯಾ

      ಬೆಂಗಳೂರು, ಸೆಪ್ಟೆಂಬರ್ 11: ಇಡಿ ಯಿಂದ ಸಮನ್ಸ್ ಪಡೆದಿರುವ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ದೆಹಲಿಗೆ ತೆರಳಿದ್ದಾರೆ.

      ಅಕ್ರಮ ಹಣ ಗಳಿಕೆ ಪ್ರಕರಣದಲ್ಲಿ ಈಗಾಗಲೇ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಅವರಿಗೂ ಮೊದಲಿಗೆ ಸಮನ್ಸ್‌ ನೀಡಿ ನಾಲ್ಕು ದಿನ ವಿಚಾರಣೆ ನಡೆಸಿದ ಬಳಿಕ ಇಡಿ ಅಧಿಕಾರಿಗಳು ಬಂದಿಸಿದ್ದರು.

      ಇದೀಗ ಡಿ.ಕೆ.ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಅವರಿಗೂ ಸಮನ್ಸ್ ಬಂದಿದ್ದು ಅವರನ್ನು ಇಂದು ವಿಚಾರಣೆಗೆ ಒಳಪಡಿಸಲಾಗುತ್ತದೆ. ಅವರನ್ನು ಬಂಧಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆಯಾದರೂ, ಬಂಧನದ ಸಾಧ್ಯತೆಯನ್ನು ಪೂರ್ಣವಾಗಿ ತಳ್ಳಿಹಾಕುವಂತಿಲ್ಲ.

       DK Shivakumars Daugther Aishwarya Went To Delhi

      ಐಶ್ವರ್ಯಾ ಅವರು ಇಂದು ದೆಹಲಿಗೆ ತೆರಳಿದ್ದಾರಾದರೂ ಸಮನ್ಸ್‌ ನಲ್ಲಿ ತಿಳಿಸಿರುವಂತೆ ನಾಳೆ ಅವರು ಇಡಿ ಅಧಿಕಾರಿಗಳ ಎದುರು ಹಾಜರಾಗಲಿದ್ದಾರೆ.

      ಡಿ.ಕೆ.ಶಿವಕುಮಾರ್ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಘೋಷಿಸಿಕೊಂಡಿದ್ದ ಕುಟುಂಬದ ಆಸ್ತಿ ಪ್ರಕಾರ ಅವರ ಮಗಳು ಐಶ್ವರ್ಯಾ ಅವರ ಹೆಸರಿನಲ್ಲಿ 100 ಕೋಟಿಗೂ ಹೆಚ್ಚುದ ಆಸ್ತಿ ಇದೆ. ಇದು ಇಡಿ ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+