ಡಿಕೆಶಿ ಆಪ್ತ ಸುನಿಲ್ ಕುಮಾರ್ ಶರ್ಮಾ ಮನೆಯಲ್ಲಿ ಐಟಿ ಶೋಧ
ಡಿಕೆ ಶಿವಕುಮಾರ್ ಅವರ ಆಪ್ತ ಸುನಿಲ್ ಶರ್ಮಾ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ. ಮನೆಯಲ್ಲಿ ಅಪಾರ ಪ್ರಮಾಣದ ನಗದು ಹಾಗೂ ಚಿನ್ನ ವಶಪಡಿಸಿಕೊಂಡ ಅಧಿಕಾರಿಗಳು.
ಬೆಂಗಳೂರು, ಆಗಸ್ಟ್ 4: ಇಂಧನ ಸಚಿವ ಡಿಕೆ ಶಿವಕುಮಾರ್ ಹಾಗೂ ಅವರ ಆಪ್ತರ ಆಸ್ತಿ ವಿವರವನ್ನು ಜಾಲಾಡುತ್ತಿರುವ ಐಟಿ ಅಧಿಕಾರಿಗಳು, ಇದೀಗ ತಮ್ಮ ಹದ್ದಿನ ದೃಷ್ಟಿಯನ್ನು ಡಿಕೆಶಿ ಆಪ್ತರೂ ಆದ, ಶರ್ಮಾ ಟ್ರಾವೆಲ್ಸ್ ನ ಮಾಲೀಕ ಸುನಿಲ್ ಕುಮಾರ್ ಶರ್ಮಾ ಮನೆಗೆ ನೆಟ್ಟಿದ್ದಾರೆ.
ನಗರದ ಎನ್.ಆರ್. ಕಾಲೋನಿಯಲ್ಲಿರುವ ಅವರ ಮನೆಯ ಮೇಲೆ ಶುಕ್ರವಾರ ಬೆಳಗ್ಗೆಯೇ ದಾಳಿ ನಡೆಸಿದ ಐಟಿ ಅಧಿಕಾರಿಗಳು, ಅಪಾರ ಮೊತ್ತದ ನಗದು ಹಾಗೂ ಚಿನ್ನಾಭರವಣ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಶೋಧದ ವೇಳೆ ಸಿಕ್ಕಿರುವ ಚಿನ್ನಾಭರಣಗಳ ಸಾಚಾತನದ ಪರೀಕ್ಷೆಗೆ ನಗರದ ಮಾರ್ವಾಡಿಗಳನ್ನು ಕರೆಸಿರುವ ಐಟಿ ಅಧಿಕಾರಿಗಳು, ಆ ಚಿನ್ನದ ಪರೀಕ್ಷೆ ನಡೆಸಿದ್ದಾರೆಂದು ಹೇಳಲಾಗಿದೆ.
ಸುನಿಲ್ ಮನೆಯಲ್ಲಿ ಒಟ್ಟು 8 ಅಧಿಕಾರಿಗಳ ತಂಡ ಬೀಡುಬಿಟ್ಟಿದ್ದು, ತನಿಖೆ ಮುಂದುವರಿಸಿ, ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ. ಈ ದಾಳಿ ವೇಳೆ, ಮುನ್ನಚ್ಚರಿಕೆ ಕ್ರಮವಾಗಿ ಶರ್ಮಾ ಮನೆಯ ಮುಂದೆ ಸಿಆರ್ ಪಿಎಫ್ ಯೋಧರ ಕಾವಲನ್ನೂ ಹಾಕಲಾಗಿದೆ.












Click it and Unblock the Notifications