ಫ್ರೀಡಂ ಪಾರ್ಕ್ ಬಿಟ್ಟು ಬೇರೆಡೆ ಧರಣಿ ಮಾಡಿದವರ ಬಂಧವೇಕಿಲ್ಲ?: ಡಿಕೆಶಿ ಪ್ರತಿಭಟನೆಗೆ ಪ್ರಹ್ಲಾದ್ ಜೋಶಿ ಕಿಡಿ

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲ, ಮಳೆ ಕೊರತೆ ಆಗಿದೆ. ರಾಜ್ಯದ ಸಾಕಷ್ಟು ಸಮಸ್ಯೆಗಳಿವೆ. ಹೀಗಿದ್ದರೂ ಅದರ ಬಗ್ಗೆ ಗೊಡವೆ ಇಲ್ಲದೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಚುನಾವಣಾಧಿಕಾರಿ ಕಚೇರಿ ಮುಂದೆ ಧರಣಿ ಕೂತಿದ್ದಾರೆ ಎಂದು ಬಿಜೆಪಿ ದೂರಿದೆ. ಇದೇ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಕಿಡಿ ಕಾರಿದ್ದಾರೆ.

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಧರಣಿಗೆ ಸಂಬಂಧಿಸಿದಂತೆ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಜೋಶಿಯವರು, ​ಬೆಂಗಳೂರಿನಲ್ಲಿ ಪ್ರತಿಭಟನೆಗೆ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಡೆ ಅವಕಾಶವಿಲ್ಲ. ಬೇರೆಯವರು ಎಲ್ಲಾದರೂ ಧರಣಿ ಮಾಡಿದ ತಕ್ಷಣ ಕ್ರಮ ಕೈಗೊಳ್ಳುವ ಪೊಲೀಸರು, ಕಾನೂನು ಉಲ್ಲಂಘಿಸಿ ಧರಣಿ ಕುಳಿತ ಇವರ ಮೇಲೆ ಎಫ್‌ಐಆರ್ (FIR) ದಾಖಲಿಸದೆ ಸುಮ್ಮನಿರುವುದೇಕೆ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

DK Shivakumar Protest

ರಾಜ್ಯದಲ್ಲಿ ಬರಗಾಲ, ರೈತರ ಸಂಕಷ್ಟ ಹಾಗೂ ಜನರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವತ್ತ ಗಮನಹರಿಸಬೇಕಾದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರಿನ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಎದುರು ಏಕಾಏಕಿ ಧರಣಿ ನಡೆಸಿರುವುದು ಅತ್ಯಂತ ವಿಷಾದನೀಯ ಎಂದು ಕುಟುಕಿದರು.

ಚುನಾವಣಾ ಅಧಿಕಾರಿಗಳಿಗೆ ಅರಿವಿರುತ್ತೆ!

ಚುನಾವಣಾ ಪ್ರಕ್ರಿಯೆ, ಎಸ್ ಐ ಆರ್ ಪ್ರಕ್ರಿಯೆ, ಫಾರ್ಮ್ 7, ಮತದಾರರ ಪಟ್ಟಿ ಪರಿಷ್ಕರಣೆಯ ಸಂಬಂಧ ಚುನಾವಣಾ ಅಧಿಕಾರಿಗಳಿಗೆ ಹಾಗೂ ಬಿ ಎಲ್ ಎ, ಬಿ ಎಲ್ ಓಗಳಿಗೂ ಸ್ಪಷ್ಟ ಅರಿವಿರುತ್ತದೆ ಮತ್ತು ಚುನಾವಣಾ ಆಯೋಗವೂ ಈ ಬಗ್ಗೆ ನಿರಂತರವಾಗಿ ಗಮನಹರಿಸುತ್ತದೆ.

​ಹೀಗಿದ್ದರೂ, ರೈತರ ಸಂಕಷ್ಟ, ಬರಗಾಲದ ಪರಿಸ್ಥಿತಿ ಹಾಗೂ ಜನರ ಮೂಲಭೂತ ಅಗತ್ಯಗಳಿಗೆ ಆದ್ಯತೆ ನೀಡುವುದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ನಕಲಿ ಗಾಂಧಿಗಳನ್ನು ಓಲೈಸಲು ಮತ್ತು ಸಂದೇಹಾಸ್ಪದ ಮತದಾರರನ್ನು ರಕ್ಷಿಸಲು ಸಚಿವ ಸಂಪುಟ ಸಭೆಯನ್ನೇ ಮುಂದೂಡಿ ಧರಣಿ ನಡೆಸುತ್ತಿರುವುದು ನಿಜಕ್ಕೂ ದುರಂತ ಹಾಗೂ ಖಂಡನೀಯ. ಇದು ಇಲ್ಲದ ಗುಮ್ಮನನ್ನು ಸೃಷ್ಟಿಸಿ ಜನರನ್ನು ದಿಕ್ಕು ತಪ್ಪಿಸುವ ನಾಟಕವಷ್ಟೇ ಎಂದು ಅವರು ಲೇವಡಿ ಮಾಡಿದರು.

ಕಬ್ಬು ಬೆಳೆಗಾರರಿಗೆ ಸ್ಪಂದನೆ: ಅ. 12ರಂದು ಸಭೆ

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟೆ ನಡೆದಿತ್ತು. ರಾಜ್ಯ ಕಬ್ಬು ಬೆಳೆಗಾರರ ಹೋರಾಟಕ್ಕೆ ಸ್ಪಂದಿಸಿರುವ ಪ್ರಹ್ಲಾದ್ ಜೋಶಿಯವರು ಇದೇ ಅಕ್ಟೋಬರ್ 12ಕ್ಕೆ ಸಭೆ ನಡೆಯುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಈ ವರ್ಷವೂ FRP ಹೆಚ್ಚಳ ಮಾಡುತ್ತದೆ ಎಂದರಲ್ಲದೆ, ಅತಿ ಶೀಘ್ರವೇ ಸಭೆ ಸೇರಲಾಗುವುದು ಎಂದು ರೈತರಿಗೆ ಸಿಹಿ ಸುದ್ದಿ ಕೊಟ್ಟರು.

ಕರ್ನಾಟಕದ ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮುಕ್ತ ಚರ್ಚೆಗೆ ಕೇಂದ್ರ ಸರ್ಕಾರ ಸಿದ್ಧವಿದೆ. ಇದಕ್ಕಾಗಿ ಇನ್ನೆರಡು ವಾರಗಳಲ್ಲಿ ಸಭೆ ಸೇರಲು ರೈತ ಮುಖಂಡರೂ ಒಪ್ಪಿದ್ದಾರೆಂಬ ಮಾಹಿತಿಯಿದೆ. ಅಂದು ಕಬ್ಬು ಬೆಳೆಗಾರರ ಸಮಸ್ಯೆ ಮತ್ತು ಪರಿಹಾರಕ್ಕೆ ಸಮಗ್ರ ಚರ್ಚೆ ನಡೆಸಲಾಗುತ್ತದೆ ಎಂದರು.

MSP ಮತ್ತು FRP ನಡುವೆ ಸಂಬಂಧವಿಲ್ಲ: ಜೋಶಿ

ಎಂಎಸ್‌ಪಿ ಎಂದರೆ ʼಮಿನಿಮಮ್‌ ಸಪೋರ್ಟ ಪ್ರೈಸ್‌ʼ ಎಂಬ ತಪ್ಪಾಭಿಪ್ರಾಯವಿದೆ. ಆದರೆ ಅದಲ್ಲ, MSP ಅಂದರೆ ʼಮಿನಿಮಮ್‌ ಸೆಲ್ಲಿಂಗ್‌ ಪ್ರೈಸ್‌ (ಕನಿಷ್ಠ ಮಾರಾಟ ಬೆಲೆ). ಎಂಸ್‌ಪಿಗೂ ಮತ್ತು ಎಫ್‌ಆರ್‌ಪಿಗೂ ಯಾವುದೇ ರೀತಿ ಸಂಬಂಧವಿಲ್ಲ ಎಂದು ಅವರು ಬುಧವಾರ ದೆಹಲಿಯಲ್ಲಿ ಸ್ಪಷ್ಟಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ 2018ರಲ್ಲಿ ಕೇಂದ್ರ ಸರ್ಕಾರ MSP ಜಾರಿಗೊಳಿಸಿದೆ. ಅಂತೆಯೇ ಇದೀಗ ಸಕ್ಕರೆ ಎಂಎಸ್‌ಪಿ ದರ ₹31 ಇದೆ. ಪ್ರಸ್ತುತ ಸಕ್ಕರೆ ಕನಿಷ್ಠ ಮಾರಾಟ ಬೆಲೆ ₹47 ಆಗಿದೆ.. ಸಕ್ಕರೆ ಕಾರ್ಖಾನೆಗಳವರು ಯಾರೂ ₹31ರ ಕನಿಷ್ಠ ಬೆಲೆಗೆ ಮಾರಿರುವುದಿಲ್ಲ. ₹40ರಿಂದ ₹47ಕ್ಕೆ ಮಾರಾಟ ನಡೆದಿದೆ. ಮಧ್ಯದಲ್ಲಿ ₹63ಕ್ಕೂ ಮಾರಿದ್ದಾರೆ ಎಂದು ಒಂದಷ್ಟು ಅಂಶಗಳನ್ನು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+