ಗೇಟ್ ಬಿದ್ದು ಮೃತಪಟ್ಟ ಬಾಲಕ ನೇತ್ರದಾನ ಮಾಡಿ ಮಾದರಿ: ₹10 ಲಕ್ಷ ಚೆಕ್ ನೀಡಿದ ಡಿಕೆ ಶಿವಕುಮಾರ್

ಬೆಂಗಳೂರು, ಸೆಪ್ಟಂಬರ್ 25: ಬೆಂಗಳೂರಿನಲ್ಲಿ ಬಿಬಿಎಂಪಿ ಮೈದಾನದಲ್ಲಿ ಆಟವಾಡಲು ತೆರಳಿದ್ದ ಬಾಲಕನ ಮೇಲೆ ಗೇಟ್ ಬಿದ್ದು ಬಾಲಕ ಸಾವನ್ನಪ್ಪಿದ್ದರು. ಮೃತ ಬಾಲಕನ ಮನೆಗೆ ಬುಧವಾರ ಉಪಮುಖಮಂತ್ರಿ ಡಿಕೆ ಶಿವಕುಮಾರ್ ಅವರು ಖುದ್ದು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಬಾಲಕ ಫೋಟೋಗೆ ಶ್ರದ್ಧಾಂಜಲಿ ಅರ್ಪಿಸಿದರಲ್ಲದೇ ಕುಟುಂಬಕ್ಕೆ ಪರಿಹಾರದ ಚೆಕ್ ನೀಡಿ ಧೈರ್ಯ ತುಂಬಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ನಗರದ ಮಲ್ಲೇಶ್ವರಂ ನಲ್ಲಿ ಪಾಲಿಕೆ ಗ್ರೌಂಡ್‌ನಲ್ಲಿ ಗೇಟ್‌ ಬಿದ್ದ ಪರಿಣಾಂ ಬಾಲಕ ನಿರಂಜನ್ ಮೃತಪಟ್ಟಿದ್ದರು. ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಡಿಕೆ ಶಿವಕುಮಾರ್ ಅವರು 10 ಲಕ್ಷ ರೂಪಾಯಿಗಳ ಪರಿಹಾರದ ಚೆಕ್‌ ನೀಡಿ ಕುಟುಂಬದವರಿಗೆ ಸಾಂತ್ವನ ತಿಳಿಸಿದರು.

DK Shivakumar Give Cheque of Rs 10 Lakh to Boy Niranjan Family He Death after Gate Fell Down

ಬಾಲಕ ನೇತ್ರದಾನ ಮಾಡಿ ಮಾದರಿ

ಬಳಿಕ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಬಾಲಕ ಸಾವಿನ ಘಟನೆ ಮನ ಕಲಕುವ ದುರಂತವೆಂದರೆ ತಪ್ಪಾಗಲ್ಲ. ನಿರಂಜನ್ ಆಡುವ ವಯಸ್ಸಿನಲ್ಲಿ ಸಾವಿಗೀಡಾಗಿದ್ದು, ಅದರ ದುಃಖ ಯಾರಿಗೂ ಬೇಡ. ಇದೆಲ್ಲ ಸಂಕಷ್ಟದ ನಡುವೆ, ನೋವಿನಲ್ಲಿಯೇ ಅವರ ಕುಟುಂಬ ಪುತ್ರನ ನೇತ್ರದಾನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಈ ಮೂಲಕ ಬಡತನದಲ್ಲಿ ನಿಜವಾದ ಮಾನವೀಯತೆ ಮೆರೆದಿದ್ದಾರೆ. ನೇತ್ರದಾನದ ಮಹತ್ವ ಸಾರಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಮೃತ ಬಾಲಕನ ಕುಟುಂಬಕ್ಕೆ 5ಲಕ್ಷ ರೂಪಾಯಿ ನೀಡಿದ್ದಾರೆ. ಅಲ್ಲದೇ ಬಿಬಿಎಂಪಿ ಐದು ಲಕ್ಷ ರೂಪಾಯಿ ನೀಡಿದೆ. ಇತ್ತ ಮೃತ ಬಾಲಕ ನಿರಂಜನ್ ಸಹೋದರಿಯ ಶಿಕ್ಷಣದ ಸಂಪೂರ್ಣ ಖರ್ಚು ನೋಡಿಕೊಳ್ಳೂವುದಾಗಿ ಆರೋಗ್ಯ ಸದಚಿವರಾದ ದಿನೇಶ್‌ ಗುಂಡೂರಾವ್‌ ಅವರ ಫೌಂಡೇಷನ್ ತಿಳಿಸಿದೆ ಎಂದು ಅವರು ಮಾಹಿತಿ ನೀಡಿದರು. ಬಾಲಕನ ಕಳೆದುಕೊಂಡು ಕುಟುಂಬಕ್ಕೆ ಧೈರ್ಯ ತುಂಬಿದರು.

DK Shivakumar Give Cheque of Rs 10 Lakh to Boy Niranjan Family He Death after Gate Fell Down

ಸರ್ಕಾರದ ನಿರ್ಲಕ್ಷ್ಯೆಯಿಂದ ಬಾಲಕ ಸಾವು

ಕಳೆದ ಸೆಪ್ಟಂಬರ್ 22 ರಂದು ಮಲ್ಲೇಶ್ವರಂನಲ್ಲಿ ಮೈದಾನದಲ್ಲಿ ಆಟವಾಡಲು ತೆಳಿದ್ದ ಬಾಲಕನ ಮೇಲೆ ಮೈದಾನದ ಗೇಟ್ ಬಿದ್ದು ಬಾಲಕ ಸಾವಿಗೀಡಾದ ಘಟನೆ ನಡೆದಿತ್ತು. ಇದಕ್ಕೆ ರಾಜ್ಯ ಸರ್ಕಾರ, ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಕಿಡಿ ಕಾರಿದರು.

ಮೃತ ಬಾಲಕನ ಮನೆಗೆ ಭೇಟಿ ನೀಡಿದ ಎಎಪಿ ರಾಜ್ಯಾಧ್ಯಕ್ಷರು ಮತ್ತು ಕಾರ್ಯಾಕರ್ತರು ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಂತರ ಮಾತನಾಡಿದ ಡಾ. ಮುಖ್ಯಮಂತ್ರಿ ಚಂದ್ರು ಅವರು, ಒಂದೇ ಕಡೆ ಗೇಟ್ ಅಳವಡಿಕೆ ಮಾಡಲು ಮೂರು ಬಾರಿ ಟೆಂಡರ್ ಆಹ್ವಾನಿಸಲಾಗಿದೆ.

ಗೇಟ್ ಅಳವಡಿಕೆಗೆ ಕರೆದಿದ್ದ ಮೊದಲ ಟೆಂಡರ್ 50 ಲಕ್ಷ ರೂ., ಎರಡನೇ ಟೆಂಡರ್ 60 ಲಕ್ಷ ರೂ., ಮೂರನೇ ಟೆಂಡರ್ ಕೂಡ 60 ಲಕ್ಷ ರೂ. ಒಟ್ಟು 1.50 ಕೋಟಿ ರೂಪಾಯಿಗೂ ಹೆಚ್ಚು ಹಣ ಖರ್ಚು ಮಾಡಿ ಗೇಟ್ ಅಳವಡಿಸಲಾಗಿದೆ. ಇಷ್ಟು ಹಣ ಖರ್ಚು ಮಾಡಿದರು, ಉತ್ತಮ ಗುಣಮಟ್ಟದ ಗೇಟ್ ಅಳವಡಿಸಿಲ್ಲ ಎಂಬುದು ಸಾಬೀತಾಗಿದೆ ಎಂದು ಸರ್ಕಾರದ ವಿರುದ್ಧ ಅವರು ದೂರಿದರು.

ಸಾರ್ವಜನಿಕರಿಗೆ ರಕ್ಷಣೆ ಆದ್ಯತೆ ಆಗಬೇಕು

ಇದ್ದ ಒಬ್ಬೆ ಒಬ್ಬ ಮಗನನ್ನು ಕಳೆದುಕೊಂಡು ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ. ನೀವು ಪರಿಹಾರ ಕೊಡಬಹುದೇ ವಿನಃ ತೀರಿಹೋದ ಮಗನನ್ನು ವಾಪಾಸ್ ಕೊಡಲು ಆಗುವುದಿಲ್ಲ. 1.5 ಕೋಟಿ ಜನಸಂಖ್ಯೆ ಇರುವ ಬೆಂಗಳೂರು ನಗರದಲ್ಲಿ ಸಾರ್ವಜನಿಕರ ಸುರಕ್ಷತೆಗೆ ಸರ್ಕಾರ ಆದ್ಯತೆ ನೀಡಬೇಕು. ಮೈದಾನಗಳ ನಿರ್ವಹಣೆ, ಸಾರ್ವಜನಿಕರ ರಕ್ಷಣೆ, ಸೂಕ್ತ ಕ್ರಮಗಳತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಮನ ಕೊಡಬೇಕು ಎಂದು ಅವರು ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+