ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿ ಕೊರೊನಾ: ಯಾವ ಜಿಲ್ಲೆಯಲ್ಲಿ ಹೆಚ್ಚು ಕೇಸ್, ಹೆಚ್ಚು ಸಾವು?

|
Google Oneindia Kannada News

ಬೆಂಗಳೂರು, ಜೂನ್ 1: ಕರ್ನಾಟಕದಲ್ಲಿ ಇಂದು ಹೊಸದಾಗಿ 187 ಜನರಿಗೆ ಕೊರೊನಾ ವೈರಸ್ ಸೋಂಕು ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3408ಕ್ಕೆ ಏರಿಕೆಯಾಗಿದೆ.

Recommended Video

ಕಾರೆಹೊಂಡ ಗ್ರಾಮಸ್ತರ ಜೊತೆ ಕಾಲಕಳೆದ ಕುಮಾರ್ ಬಂಗಾರಪ್ಪ | Oneindia Kannada

ಇಂದು ವರದಿಯಾದ ಕೇಸ್‌ಗಳ ಪೈಕಿ ಬೆಂಗಳೂರಿನಲ್ಲಿ 28 ಜನರಿಗೆ ಸೋಂಕು, ಕಲಬುರಗಿಯಲ್ಲಿ 24 ಮಂದಿ, ಮಂಡ್ಯದಲ್ಲಿ 15 ಜನರಿಗೆ, ಉಡುಪಿಯಲ್ಲಿ 73 ಮಂದಿ, ಹಾಸನದಲ್ಲಿ 16 ಜನರಿಗೆ ಸೋಂಕು ತಗುಲಿದೆ.

Breaking: ಕೃಷ್ಣನಗರಿಯಲ್ಲಿ 73, ಕರ್ನಾಟಕದಲ್ಲಿ 187 ಕೊವಿಡ್-19 ಕೇಸ್!Breaking: ಕೃಷ್ಣನಗರಿಯಲ್ಲಿ 73, ಕರ್ನಾಟಕದಲ್ಲಿ 187 ಕೊವಿಡ್-19 ಕೇಸ್!

ಕರ್ನಾಟಕದಲ್ಲಿ ಇದುವರೆಗೂ ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್ ದಾಖಲಾಗಿದೆ. ಪ್ರಸ್ತುತ ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು ಸಕ್ರಿಯವಾಗಿದೆ? ರಾಜ್ಯದಲ್ಲಿ ಯಾವ ಜಿಲ್ಲೆ ಡೇಂಜರ್ ಜೋನ್‌ನಲ್ಲಿದೆ? ಮುಂದೆ ಓದಿ....

ಬೆಂಗಳೂರಿನಲ್ಲಿ ಅತಿ ಹೆಚ್ಚು ಸೋಂಕು

ಬೆಂಗಳೂರಿನಲ್ಲಿ ಅತಿ ಹೆಚ್ಚು ಸೋಂಕು

ರಾಜ್ಯದಲ್ಲಿ ಅತಿ ಹೆಚ್ಚು ಕೊರೊನಾ ಕೇಸ್ ವರದಿಯಾಗಿರುವುದು ಬೆಂಗಳೂರಿನಲ್ಲಿ. ಸಿಲಿಕಾನ್‌ ಸಿಟಿಯಲ್ಲಿ ಇದುವರೆಗೂ 385 ಜನರಿಗೆ ಕೊರೊನಾ ವೈರಸ್ ಅಂಟಿಕೊಂಡಿದೆ. 237 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ 136 ಪ್ರಕರಣಗಳು ಸಕ್ರಿಯವಾಗಿದೆ. ಬೆಂಗಳೂರಿನಲ್ಲಿ ಒಟ್ಟು 11 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಯಾದಗಿರಿ ಡೇಂಜರ್ ಜೋನ್

ಯಾದಗಿರಿ ಡೇಂಜರ್ ಜೋನ್

ಪ್ರಸ್ತುತ ಕರ್ನಾಟಕದಲ್ಲಿ ಯಾದಗಿರಿ ಜಿಲ್ಲೆ ಡೇಂಜರ್‌ಜೋನ್‌ನಲ್ಲಿದೆ. ಯಾದಗಿರಿಯಲ್ಲಿ ಒಟ್ಟು 285 ಜನರಿಗೆ ಕೊರೊನಾ ಕೇಸ್ ಅಂಟಿಕೊಂಡಿದೆ. ಇದರಲ್ಲಿ 257 ಕೇಸ್‌ಗಳು ಸಕ್ರಿಯವಾಗಿದೆ. ಆಕ್ಟಿವ್ ಕೇಸ್‌ಗಳ ಪೈಕಿ ಯಾದಗಿರಿ ಮೊದಲ ಸ್ಥಾನದಲ್ಲಿದೆ. ಒಟ್ಟು 27 ಜನರು ಯಾದಗಿರಯಲ್ಲಿ ಚೇತರಿಸಿಕೊಂಡಿದ್ದಾರೆ.

ಟಾಪ್‌ ಐದು ಜಿಲ್ಲೆಗಳ ಕಥೆಯೇನು?

ಟಾಪ್‌ ಐದು ಜಿಲ್ಲೆಗಳ ಕಥೆಯೇನು?

ಬೆಂಗಳೂರಿನಲ್ಲಿ ಒಟ್ಟು ಕೇಸ್‌ 385, ಕಲಬುರಗಿಯಲ್ಲಿ 305, ಯಾದಗಿರಿಯಲ್ಲಿ 285 ಕೇಸ್, ಮಂಡ್ಯದಲ್ಲಿ 285 ಕೇಸ್ ಹಾಗೂ ಉಡುಪಿಯಲ್ಲಿ 260 ಮಂದಿಗೆ ಸೋಂಕು ತಗುಲಿದೆ. ರಾಯಚೂರಿನಲ್ಲಿ 217 ಪ್ರಕರಣ, ಹಾಸನದಲ್ಲಿ 193 ಕೇಸ್, ಬೀದರ್‌ನಲ್ಲಿ 165 ಕೇಸ್, ಬೆಳಗಾವಿಯಲ್ಲಿ 160 ಹಾಗೂ ದಾವಣಗೆರೆಯಲ್ಲಿ 156 ಜನರಿಗೆ ಸೋಂಕು ಖಚಿತವಾಗಿದೆ.

ಅತಿ ಹೆಚ್ಚು ಸಾವು ಕಂಡ ಜಿಲ್ಲೆಗಳು

ಅತಿ ಹೆಚ್ಚು ಸಾವು ಕಂಡ ಜಿಲ್ಲೆಗಳು

ಕರ್ನಾಟಕದಲ್ಲಿ ಇದುವರೆಗೂ 52 ಜನರು ಕೊರೊನಾ ವೈರಸ್‌ಗೆ ಸಾವನ್ನಪ್ಪಿದ್ದಾರೆ. ಇದರಲ್ಲಿ ಇಬ್ಬರು ಅನ್ಯಕಾರಣದಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 11 ಜನರು, ಕಲಬುರಗಿಯಲ್ಲಿ 7, ಬೀದರ್‌ನಲ್ಲಿ 5, ದಾವಣಗೆರೆಯಲ್ಲಿ 4 ಜನರು, ದಕ್ಷಿಣ ಕನ್ನಡದಲ್ಲಿ 6, ಚಿಕ್ಕಬಳ್ಳಾಪುರದಲ್ಲಿ 3 ಜನ, ವಿಜಯಪುರದಲ್ಲಿ 5 ಜನರು ಪ್ರಾಣ ಕಳೆದುಕೊಂಡಿದ್ದಾರೆ.

English summary
District-Wise COVID-19 Cases In Karnataka: Active, Death and Discharged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X