ಅತೃಪ್ತ ಶಾಸಕರು ನಾಳೆ ಬೆಂಗಳೂರಿಗೆ ಬರುವ ಸಾಧ್ಯತೆ
ಬೆಂಗಳೂರು, ಜುಲೈ 09: ರಾಜೀನಾಮೆ ನೀಡಿ ಮುಂಬೈನ ಸೋಫಿಯೇಟ್ ಹೊಟೆಲ್‌ನಲ್ಲಿ ತಂಗಿರುವ ಅತೃಪ್ತ ಶಾಸಕರು ನಾಳೆ (ಜುಲೈ 10) ಕ್ಕೆ ಬೆಂಗಳೂರಿಗೆ ವಾಪಸ್ ಬರುವ ಸಾಧ್ಯತೆ ಇದೆ.
ಕೆಲವರ ರಾಜೀನಾಮೆ ಅಂಗೀಕಾರವಾಗದೇ ಇರುವ ಕಾರಣ, ಮತ್ತೆ ರಾಜೀನಾಮೆ ನೀಡಲು ನಾಳೆ ಕೆಲವು ಶಾಸಕರು ಬೆಂಗಳೂರಿಗೆ ಬರುವ ಸಾಧ್ಯತೆ ಇದೆ.
ಸ್ಪೀಕರ್ ಅವರನ್ನು ಭೇಟಿ ಆಗಿ, ಹೊಸ ರಾಜೀನಾಮೆ ನೀಡುವ ನಿಶ್ಚಯ ಮಾಡಿದ್ದಾರೆ. ಅಷ್ಟೆ ಅಲ್ಲದೆ, ನಾಳೆ ಡಿಕೆ ಶಿವಕುಮಾರ್ ಅವರು ಮುಂಬೈಗೆ ಹೋಗುತ್ತಿದ್ದಾರೆಂದು ತಿಳಿದು ಅತೃಪ್ತ ಶಾಸಕರು ಅಲ್ಲಿಂದ ಇಲ್ಲಿಗೆ ಬರಲು ತಯಾರಾಗಿದ್ದಾರೆ ಎನ್ನಲಾಗಿದೆ.

ಬಿಜೆಪಿ ಮುಖಂಡ ಆರ್.ಅಶೋಕ್ ಇಂದು ರಾತ್ರಿಯೇ ಮುಂಬೈಗೆ ತೆರಳಿದ್ದು, ಅತೃಪ್ತ ಶಾಸಕರನ್ನು ಜಾಗರೂಕತೆಯಿಂದ ಬೆಂಗಳೂರಿಗೆ ಕರೆತರುವ ಜವಾಬ್ದಾರಿಯನ್ನು ಅವರು ನಿರ್ವಹಿಸಲಿದ್ದಾರೆ ಎನ್ನಲಾಗಿದೆ.
ಕ್ರಮಬದ್ಧವಾಗಿಲ್ಲದ ರಾಜೀನಾಮೆ ಪತ್ರ ನೀಡಿರುವ ಶಾಸಕರಿಗೆ ಮತ್ತೆ ರಾಜೀನಾಮೆ ಸಲ್ಲಿಸಲು ಎರಡು ದಿನದ ಕಾಲಾವಕಾಶವನ್ನು ಸ್ಪೀಕರ್ ನೀಡಿದ್ದರು, ಆದರೆ ತಡವಾಗಬಾರದು ಎಂಬ ಕಾರಣಕ್ಕೆ ನಾಳೆಯೇ ರಾಜೀನಾಮೆ ಸಲ್ಲಿಸಲು ಅತೃಪ್ತ ಶಾಸಕರು ನಿರ್ಣಯಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications