Nikhil Kumaraswamy: ರಾಮನಗರದಲ್ಲಿ ಜೆಡಿಎಸ್ ಖಾಲಿ.. ಖಾಲಿ.. ಕಾಂಗ್ರೆಸ್ ಜಾಲಿ.. ಜಾಲಿ..!
ರಾಮನಗರ ಜಿಲ್ಲೆ ರಚನೆ ಆಗಿದ್ದೇ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ. ಹಾಗೇ ರಾಮನಗರ ಜಿಲ್ಲೆಗೆ ಸಾಕಷ್ಟು ದೊಡ್ಡ ಪ್ರಮಾಣದ ಅನುದಾನವನ್ನು ಕೂಡ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಬಿಡುಗಡೆ ಮಾಡಿದ್ದರು. ಈ ಮೂಲಕ ರಾಮನಗರ ಜಿಲ್ಲೆಯ ಬೆಳವಣಿಗೆಗೆ ಭಾರಿ ದೊಡ್ಡ ಕೊಡುಗೆಯನ್ನ ನೀಡಿದ್ದಾರೆ ಎಂಬ ವಾದ ಜೆಡಿಎಸ್ ಕಾರ್ಯಕರ್ತರು & ಬೆಂಬಲಿಗರದ್ದು. ಹೀಗಿದ್ದರೂ ಈಗ ರಾಮನಗರದಲ್ಲಿ ಜೆಡಿಎಸ್ ಖಾಲಿ.. ಖಾಲಿ.. ಆಗಲು ಕಾರಣ ಏನು? ಬನ್ನಿ ತಿಳಿಯೋಣ.
ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಹವಾ ಒಂದು ಕಾಲದಲ್ಲಿ ಹೇಗೆ ಇತ್ತು ಅಂದ್ರೆ, ರಾಮನಗರ ಜಿಲ್ಲೆಯ ಮುಕ್ಕಾಲು ಭಾಗ ಶಾಸಕ ಸ್ಥಾನಗಳನ್ನು ಸುಲಭವಾಗಿ ಗೆದ್ದು ಬೀಗುವ ತಾಕತ್ತು ಆ ಪಕ್ಷದಲ್ಲಿ ಇತ್ತು. ಹೀಗೆ ರಾಮನಗರ ಅಂದ್ರೆ ಜೆಡಿಎಸ್, ಜನತಾ ದಳ ಅಂದ್ರೆ ರಾಮನಗರ ಜಿಲ್ಲೆ ಎನ್ನುವ ಮಟ್ಟಿಗೆ ಜೆಡಿಎಸ್ ಹವಾ ಒಂದು ಕಾಲದಲ್ಲಿ ಇತ್ತು. ಆದರೆ ಈಗ ಇದೇ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಒಂದೇ ಒಂದು ಶಾಸಕ ಸ್ಥಾನವನ್ನೂ ಹೊಂದಿಲ್ಲ. ಅದರಲ್ಲೂ ಈಗ ಉಳಿದಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ ಕೂಡ ನಿಖಿಲ್ ಕುಮಾರಸ್ವಾಮಿ ಅವರು ಸೋತಿದ್ದಾರೆ.

ಹ್ಯಾಟ್ರಿಕ್ ಸೋಲು ಕಂಡ ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ ಅವರಿಗೆ ಸತತವಾಗಿ 3 ಸೋಲುಗಳು ಎದುರಾಗಿದ್ದು, ಈ ಮೂಲಕ ಹ್ಯಾಟ್ರಿಕ್ ಸೋಲುಗಳು ನಿಖಿಲ್ ಕುಮಾರಸ್ವಾಮಿ ಅವರ ಬೆನ್ನಿಗೆ ಬಿದ್ದಂತೆ ಈಗ ಆಗಿಬಿಟ್ಟಿದೆ. 2019ರ ಮಂಡ್ಯ ಲೋಕಸಭಾ ಚುನಾವಣೆ & 2023 ರ ರಾಮನಗರ ವಿಧಾನಸಭೆ ಚುನಾವಣೆ ಸೋಲು ನಿಖಿಲ್ ಕುಮಾರಸ್ವಾಮಿ ಅವರ ಜೀವನದಲ್ಲಿ ದೊಡ್ಡ ಪಾಠ ಕಲಿಸಿವೆ.
ಹೀಗೆ ಸಾಲು ಸಾಲು ಸೋಲುಗಳ ಕಾರಣ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದ ನಿಖಿಲ್ ಅವರಿಗೆ ಮತ್ತೊಮ್ಮೆ ಆಘಾತ ಎದುರಾಗಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಎದುರಾಳಿ ಸಿ.ಪಿ. ಯೋಗೇಶ್ವರ್ ಅವರು ಭರ್ಜರಿ ಗೆಲುವನ್ನ ಪಡೆದಿದ್ದಾರೆ. 25,000 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ ಸಿಪಿ ಯೋಗೇಶ್ವರ್ ಅವರು. ಹಾಗಾದ್ರೆ ಜೆಡಿಎಸ್ ಇಷ್ಟು ದೊಡ್ಡ ಮಟ್ಟದಲ್ಲಿ ಸೋಲು ಕಾಣಲು ಕಾರಣ ಏನು?
ಡಿ.ಕೆ. ಬ್ರದರ್ಸ್ ಎದುರು ನಲುಗಿದ ಜೆಡಿಎಸ್?
ಹೌದು, ರಾಮನಗರ ಜಿಲ್ಲೆಯಲ್ಲಿ ಡಿ.ಕೆ. ಬ್ರದರ್ಸ್ ಹಿಡಿತ ಬಲವಾಗಿದೆ. ಅದರಲ್ಲೂ ಕನಕಪುರ ಭಾಗದಲ್ಲಿ ಡಿ.ಕೆ. ಸುರೇಶ್ & ಡಿ.ಕೆ. ಶಿವಕುಮಾರ್ ಅವರ ಹಿಡಿತಕ್ಕೆ ಬೇರೆ ಯಾರು ಕೂಡ ಸಾಠಿ ಇಲ್ಲ ಎನ್ನುವಂತಹ ವಾತಾವರಣ ಇತ್ತು. ಈಗ ಡಿಕೆ ಬ್ರದರ್ಸ್ ಹವಾ ಇಡೀ ರಾಮನಗರ ಜಿಲ್ಲೆಗೆ ಆವರಿಸಿದ್ದು, ಭಾರಿ ದೊಡ್ಡ ಹಂತದಲ್ಲಿ ಗೆದ್ದು ಬೀಗಿದ್ದಾರೆ ಕಾಂಗ್ರೆಸ್ ಅಭ್ಯರ್ಥಿಯಾದ ಸಿಪಿ ಯೋಗೇಶ್ವರ್ ಅವರು.
ಇದಿಷ್ಟು ಮಾತ್ರವಲ್ಲದೆ ಸಿಎಂ ಸಿದ್ದರಾಮಯ್ಯ & ಸಚಿವರಾದ ಜಮೀರ್ ಅವರು ಸೇರಿದಂತೆ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಪರವಾಗಿ ಘಟಾನುಘಟಿ ನಾಯಕರೇ ಬಂದು ಭಾರಿ ದೊಡ್ಡ ಮಟ್ಟದಲ್ಲಿ ಪ್ರಚಾರ ಕಾರ್ಯ ನಡೆಸಿದ್ದರು. ಹೀಗಿದ್ದಾಗ ಸಿಪಿ ಯೋಗೇಶ್ವರ್ ಗೆಲುವು ಕೂಡ ಸುಲಭವಾಯಿತು ಎಂಬ ಚರ್ಚೆ ನಡೆಯುತ್ತಿದೆ. ಈ ಮೂಲಕ ರಾಮನಗರದಲ್ಲಿ ಈಗ ಜೆಡಿಎಸ್ ಖಾಲಿ.. ಖಾಲಿ.. ಆಗಿದ್ದರೆ, ಕಾಂಗ್ರೆಸ್ ಜಾಲಿ.. ಜಾಲಿ.. ಅಂತಿದೆ ಅಂತಾ ಜನ ಮಾತನಾಡುತ್ತಿದ್ದಾರೆ!












Click it and Unblock the Notifications