BDA Site: ಬಿಡಿಎ ಸೈಟ್ ಹಂಚಿಕೆ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ!
ಬೆಂಗಳೂರಿನಲ್ಲಿ ಒಂದು ಸೈಟು ಮಾಡಬೇಕು, ಮನೆ ಕಟ್ಟಿ ನೆಮ್ಮದಿಯಾಗಿ ಬದುಕಬೇಕೆಂಬ ಕನಸು ಕೋಟ್ಯಂತರ ಜನರದ್ದು. ಆದರೆ ಬೆಂಗಳೂರಿನಲ್ಲಿ ಆಸ್ತಿಗಳ ಬೆಲೆ ಗಗನಕ್ಕೇರಿದ್ದು ಈ ಹಿನ್ನೆಲೆ ಮನೆ ಬಿಡಿ 1 ಸೈಟನ್ನು ಕೊಳ್ಳಲು ಕೂಡ ಆಗುತ್ತಿಲ್ಲ. ಹೀಗಾಗಿ ಬಿಡಿಎ ಸೈಟ್‌ಗಾಗಿ ಜನರು ಕಾಯುತ್ತಿದ್ದಾರೆ. ಈಗ ಬೆಂಗಳೂರು ನಿವಾಸಿಗರಿಗೆ ಅಂತಲೇ ಬಿಡಿಎ ಸೈಟು ಹಂಚಿಕೆ ಬಗ್ಗೆ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಹಾಗಾದರೆ ಏನದು?
ಬೆಂಗಳೂರಿನ ಬಹುದೊಡ್ಡ ವಸತಿ ಯೋಜನೆ ಪೈಕಿ ಒಂದಾದ ಡಾ.ಕೆ. ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಯಲ್ಲಿ ವಿಳಂಬ ಆಗುತ್ತಿದೆ ಅನ್ನೊದು ಬೆಂಗಳೂರು ನಿವಾಸಿಗಳ ಬೇಸರ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಇರುವ ಲೇಔಟ್, ಬಹುತೇಕ ಪೂರ್ಣ ಆಗಿದೆ. ಈ ಕಾರಣಕ್ಕೆ ಸೈಟುಗಳ ಹಂಚಿಕೆ ಡಿಸೆಂಬರ್ ಮೊದಲ ವಾರದಲ್ಲಿ ಆರಂಭ ಆಗಬೇಕಿತ್ತು. ಇದೀಗ ಈ ಬಗ್ಗೆ ದೊಡ್ಡ ಸುದ್ದಿ ಸಿಕ್ಕಿದ್ದು, ಹಾಗಾದರೆ ಎಷ್ಟಿರಲಿದೆ ಬಿಡಿಎ ಸೈಟಿನ ಬೆಲೆ?

ಸೈಟಿಗೆ ಎಷ್ಟು ರೇಟ್ ಫಿಕ್ಸ್?
ಹೌದು ಡಾ.ಕೆ. ಶಿವರಾಮ ಕಾರಂತ ಬಡಾವಣೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಂದ್ರೆ ಬಿಡಿಎಗೆ ಸೇರಿದ 2ನೇ ದೊಡ್ಡ ಲೇಔಟ್. ಒಟ್ಟು 3,546 ಎಕರೆ & 12 ಗುಂಟೆಯ ಪ್ರದೇಶದಲ್ಲಿ 34,000 ಸೈಟ್ ಅಭಿವೃದ್ಧಿಪಡಿಸಿದೆ ಬಿಡಿಎ. ಇದರಲ್ಲಿ ಒಟ್ಟಾರೆ 12,000 ಸೈಟ್‌ಗಳ ಇದೀಗ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುತ್ತಿದೆ. ಇನ್ನು ಡಾ.ಕೆ. ಶಿವರಾಮ ಕಾರಂತ ಬಡಾವಣೆ ಸೈಟುಗಳ ರೇಟ್ ಕೂಡ ಫಿಕ್ಸ್ ಆಗಿದ್ದು, ಜನರಿಗೆ ಸೈಟು ಹಂಚಲು ಏನು ಬೇಕೋ ಅದನ್ನ ತಯಾರಿ ಮಾಡಿಕೊಳ್ಳಲಾಗಿದೆ. ಹಾಗಾದರೆ ಎಷ್ಟಿರಲಿದೆ ಸೈಟ್ ರೇಟ್? ಬನ್ನಿ ತಿಳಿಯೋಣ.
ಕಾರಂತ ಬಡಾವಣೆ ಸೈಟಿನ ರೇಟ್ ಫಿಕ್ಸ್?
ಅಷ್ಟಕ್ಕೂ ಶಿವರಾಮ ಕಾರಂತ ಲೇಔಟ್ ಸೈಟುಗಳ ರೇಟ್, ಪ್ರತಿ ಚದರ ಅಡಿಗೆ 3,650 ರೂ. ನಿಗದಿಪಡಿಸಲು ಬಿಡಿಎ ಪ್ರಸ್ತಾಪಿಸಿದೆ. ಸೆಪ್ಟೆಂಬರ್ 25 ರಂದು ಒಪ್ಪಿಗೆಗಾಗಿ ಮಂಡಳಿ ಮುಂದೆ ಇಟ್ಟಿತ್ತು. ನಗರಾಭಿವೃದ್ಧಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೇರಿದಂತೆ ನಾಗರಿಕ ಏಜೆನ್ಸಿಗಳ ಮುಖ್ಯಸ್ಥರನ್ನ ಒಳಗೊಂಡ ಮಂಡಳಿ ಅದರ ಅಂತಿಮ ಪ್ರಾಧಿಕಾರವಾಗಿದೆ. ಒಪ್ಪಿಗೆಗೋಸ್ಕರ ರಾಜ್ಯ ಸರ್ಕಾರಕ್ಕೆ ಕಳುಹಿಸುತ್ತೆ. ಆದರೆ ಇದು, ಸೈಟು ಹಂಚಿಕೆಗೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ ಎಂದು ಈಗ ಸಿಕ್ಕಿರುವ ಮಾಹಿತಿ ತಿಳಿಸುತ್ತಿದೆ. ಹೀಗಾಗಿಯೇ ಈ ಬಡಾವಣೆಯಲ್ಲಿ ಸೈಟುಗಳ ಹಂಚಿಕೆ ಮತ್ತಷ್ಟು ತಡವಾಗುತ್ತಾ? ಎಂಬ ಪ್ರಶ್ನೆ ಮೂಡಿದೆ.
ಯಾರಿಗೆ ಎಷ್ಟು ಸೈಟು ಹಂಚಿಕೆ?
ಇನ್ನು ಶಿವರಾಮ ಕಾರಂತ ಲೇಔಟ್‌ನಲ್ಲಿ ಒಟ್ಟಾರೆ 12,000 ಸೈಟ್‌ಗಳನ್ನು ಜನರಿಗೆ ನೀಡಿದ್ರೆ ಹಾಗೇ ಭೂಮಿ ಕಳೆದುಕೊಳ್ಳುವ ರೈತರಿಗೆ ಬಂಪರ್ ಕಾದಿದೆ. ಭೂಮಿಯ ಕಳೆದುಕೊಳ್ಳುವ ರೈತರಿಗೆ 15,000 ನಿವೇಶನ ಮತ್ತು ಕಂದಾಯ ನಿವೇಶನ ಹೊಂದಿರುವವರಿಗೆ 2,000 ನಿವೇಶನ ನಿಗದಿಪಡಿಸಲಾಗಿದ್ದು, 4,500 ನಿವೇಶನ ಕಾರ್ನರ್ ಸೈಟ್ ಆಗಿವೆ. ಭವಿಷ್ಯದಲ್ಲಿ, ಹರಾಜು ಮಾಡುವ ನಿರೀಕ್ಷೆ ಇದ್ದು. ಜನ ಈ ಬಡಾವಣೆಯಲ್ಲಿ ಸೈಟ್ ಪಡೆಯಲು ಕಾಯುತ್ತಿದ್ದಾರೆ. ಆದರೆ ಈ ಬಗ್ಗೆ ಯಾವಾಗ ಅಂತಿಮ ಮಾಹಿತಿ ಹೊರಬೀಳುತ್ತೋ ಗೊತ್ತಿಲ್ಲ.
ಒಟ್ನಲ್ಲಿ ಹಲವು ವರ್ಷಗಳಿಂದ ಜನರು ಕಾಯುತ್ತಿರುವ ಸುದ್ದಿ ಆದಷ್ಟು ಬೇಗ ಹೊರಬಿದ್ದು ಸೈಟು ಹಂಚಕೆ ಆಗಬೇಕಿದೆ. ಅದರಲ್ಲೂ ಕೊರೊನಾ ಬಳಿಕ ಮತ್ತೆ ಆರ್ಥಿಕತೆ ಚೇತರಿಕೆಯ ಕಾಣುತ್ತಿದ್ದು ಮನೆ ಕಟ್ಟುವ ಕನಸಿನಲ್ಲಿ ಇರುವ ಸಾರ್ವಜನರಿಗೆ ಆದಷ್ಟು ಬೇಗ ಸೈಟುಗಳು ಸಿಗಬೇಕಿದೆ. ಇದಕ್ಕೆಲ್ಲಾ ಉತ್ತರ ಯಾವಾಗ ಸಿಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.











Click it and Unblock the Notifications