Rain News: 24 ಗಂಟೆಗಳಲ್ಲಿ ಭಾರಿ ಮಳೆ, ‘ಮೈಚಾಂಗ್’ ಬರ್ತಿದೆ ಎಚ್ಚರ.. ಎಚ್ಚರ..!

ಇನ್ನೇನು ಹಿಂಗಾರು ಮಳೆ ಅಂತ್ಯವಾಗಲಿದೆ ಕೆಲವೇ ದಿನದಲ್ಲಿ ಮಳೆಗಾಲ ಸಂಪೂರ್ಣವಾಗಿ ಮುಗಿಯಲಿದೆ. ಆದರೆ ಮಳೆ ಅಂತ್ಯವಾಗುವ ಸಮಯದಲ್ಲೇ ಶಾಕ್ ಕೊಡುತ್ತಿದ್ದಾನೆ ವರುಣ ದೇವ. ಕರ್ನಾಟಕದ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ ಬೀಳಲಿದೆ ಅಂತಾ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಚಂಡಮಾರುತ ಹಿನ್ನೆಲೆ ಬೆಂಗಳೂರಿನಲ್ಲಿ ಭಾರಿ ಮಳೆ ನಿರೀಕ್ಷೆ ಮಾಡಲಾಗಿದೆ.

ಅಷ್ಟಕ್ಕೂ 'ಮೈಚಾಂಗ್' ಚಂಡಮಾರುತ ಅಬ್ಬರ ಕಾರಣಕ್ಕೆ ಇದೀಗ ವಾತಾವರಣ ಪೂರ್ತಿ ಬದಲಾಗುತ್ತಿದಷ್ದು, ತೀವ್ರತೆ ಹೆಚ್ಚಾಗಿದೆ. ಹೀಗಾಗಿ ಭಾರತದ ಕರವಾಳಿ ಪ್ರದೇಶ ಸೇರಿ ನಮ್ಮ ಕರ್ನಾಟಕದ ಒಳನಾಡಿನಲ್ಲೂ ಭಾರಿ ಪ್ರಭಾವ ಉಂಟಾಗಲಿದೆ. ನೆರೆ ರಾಜ್ಯ ತಮಿಳುನಾಡು & ಆಂಧ್ರಪ್ರದೇಶ ಈಗಾಗಲೇ ನಲುಗಿ ಹೋಗಿದ್ದು, ಇದೇ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲೂ ಭಾರಿ ಮಳೆಯ ಮುನ್ಸೂಚನೆ ಸಿಕ್ಕಿದೆ. ಹಾಗಾದರೆ ಬೆಂಗಳೂರು ಸೇರಿದಂತೆ ಯಾವ ಯಾವ ಜಿಲ್ಲೆಯಲ್ಲಿ ಯಾವಾಗ ತೀವ್ರವಾಗಿ ಮಳೆ ಸುರಿಯುವ ಸಾಧ್ಯತೆ ಇದೆ? ಮುಂದೆ ಓದಿ.

Discover The Heavy Rain Alert For Next 24 Hours In These Areas

ಹೈಅರ್ಲಟ್ ಘೋಷಿಸಿದ ಹವಾಮಾನ ಇಲಾಖೆ!

ಇನ್ನು ಈಗಾಗಲೇ 'ಮೈಚಾಂಗ್' ಚಂಡಮಾರುತ ಅಬ್ಬರ ಜೋರಾಗಿರುವ ಕಾರಣ, ಹಲವು ಜಿಲ್ಲೆಗಳಲ್ಲಿ ಮಳೆ ಬೀಳುವ ಮುನ್ಸೂಚನೆ ಇದೆ. ಹೀಗಾಗಿ ಚಂಡಮಾರುತ ಸೃಷ್ಟಿಯಾಗಿರುವ ಹಿನ್ನೆಲೆ 3 ರಾಜ್ಯಗಳಿಗೆ ಕಟ್ಟೆಚ್ಚರ ನೀಡಲಾಗಿದೆ. ಆಂಧ್ರ, ಒಡಿಶಾ, ತಮಿಳುನಾಡಲ್ಲಿ ಭೀಕರ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೂಡ ಮಳೆ ಸಿಂಚನ ಪಕ್ಕಾ ಅಂತಿದ್ದಾರೆ ಹವಾಮಾನ ಇಲಾಖೆ ಅಧಿಕಾರಿಗಳು. ಈ ಹಿನ್ನೆಲೆಯಲ್ಲಿ ಬಂಗಾಳ ಕೊಲ್ಲಿಯಲ್ಲಿ 18 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿರುವ ಗಾಳಿ ಮುಂದೆ ಭೀಕರ ಸ್ವರೂಪ ಪಡೆಯಬಹುದು. ಅಂದರೆ ಗಾಳಿಯ ವೇಗ ಗಂಟೆಗೆ 100 ಕಿಲೋ ಮೀಟರ್ ತನಕ ವಿಸ್ತರಣೆ ಆಗುವ ಸಾಧ್ಯತೆ ಇದೆ.

ಯಾವ ರಾಜ್ಯಕ್ಕೆ ಅಪ್ಪಳಿಸುತ್ತೆ ಚಂಡಮಾರುತ?

'ಮೈಚಾಂಗ್' ಆರ್ಭಟ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ರಾಜ್ಯದ ನೆಲ್ಲೂರು, ಮಚಲಿಪಟ್ಟಣ ಕರಾವಳಿಗೆ ಭಾರಿ ಹಾನಿಯಾಗುವ ಆತಂಕ ಇದೆ. ಇದೇ ಹಿನ್ನೆಲೆ ಯಾವುದೇ ಕಾರಣಕ್ಕೂ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಹಾಗೇ ಕರ್ನಾಟಕಕ್ಕೂ ಸೈಕ್ಲೋನ್ ಎಫೆಕ್ಟ್ ತಟ್ಟಲಿದೆ ಅಂತಾ ಹೇಳಲಾಗುತ್ತಿದೆ. ಇಷ್ಟೆಲ್ಲದರ ನಡುವೆ ಬೆಂಗಳೂರಿಗು ಭಾರಿ ಮಳೆ ಸಿಂಚನ ಗ್ಯಾರಂಟಿ. ಪರಿಸ್ಥಿತಿ ಹೀಗೆ ಮುಂದುವರಿದರೆ, ಮುಂದಿನ ಕೆಲವು ದಿನ ಉದ್ಯಾನ ನಗರಿ ಬೆಂಗಳೂರು ಮಳೆಗೆ ಬೆಚ್ಚಿ ಬೀಳುವ ಆತಂಕ ಇದೆ.

ರೈತರಿಗೆ ಶುರುವಾಗಿದೆ ಹೊಸ ಆತಂಕ

ಇದಿಷ್ಟೂ ಒಂದು ಕಡೆ ಆದ್ರೆ ಮತ್ತೊಂದು ಕಡೆ ಅಕಾಲಿಕ ಮಳೆಯಿಂದ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಈ ಬಾರಿ ಮಳೆಯೇ ಬಿದ್ದಿಲ್ಲ ಅಂತಾ ಬರದ ಭಯದಲ್ಲಿ ಕೃಷಿಕರು ನಲುಗಿ ಹೋಗಿದ್ದರು. ಈಗ ಅಕಾಲಿಕ ಮಳೆ ಸುರಿದು, ಕೈಗೆ ಬಂದಿರುವ ಅಷ್ಟೋ ಇಷ್ಟೋ ಬೆಳೆಯನ್ನೂ ಮಣ್ಣುಪಾಲು ಮಾಡುತ್ತಿದೆ. ಹೀಗಾಗಿ ವರುಣ ದೇವನಿಗೆ ಬರಬೇಡಪ್ಪ ಅಂತ ರೈತರು ಕೇಳಿಕೊಳ್ಳುವ ಪರಿಸ್ಥಿತಿ ಬಂದಿದೆ.

ಈಗಲಾದರೂ ತುಂಬುತ್ತಾ ಡ್ಯಾಂಗಳು?

ಕರ್ನಾಟಕದಲ್ಲಿ 2023 ತೀವ್ರ ಬರಕ್ಕೆ ಕಾರಣವಾಗಿತ್ತು, ಹೀಗಾಗಿ ಕುಡಿಯುವ ನೀರಿಗೂ ಈಗ ಸಮಸ್ಯೆ ಕಾಡ್ತಿದೆ. ಕರ್ನಾಟಕದ ಬಹುತೇಕ ಜಲಾಶಯಗಳು ಬತ್ತಿ ಹೋಗಿದ್ದು, ಈ ಹಿನ್ನೆಲೆ ಇದೀಗ ಸುರಿಯುವ ಮಳೆ ಕಾವೇರಿ ಕೊಳ್ಳದ ಡ್ಯಾಂಗಳನ್ನ ಭರ್ತಿ ಮಾಡುತ್ತಾ? ಎನ್ನುವ ನಿರೀಕ್ಷೆ ಮೂಡಿದೆ. ಆದರೆ ಬೆಂಗಳೂರು ಭಾಗವನ್ನ ಬಿಟ್ಟರೆ, ಕಾವೇರಿ ಕೊಳ್ಳದ ಭಾಗದಲ್ಲಿ ಭಾರಿ ಪ್ರಮಾಣದ ವರ್ಷಧಾರೆ ಆಗುವ ನಿರೀಕ್ಷೆ ಇಲ್ಲ. ಹೀಗಾಗಿ ಈ ಕನುಸ ಕೂಡ ಇದೀಗ ಕನಸಾಗಿಯೇ ಉಳಿಯುವ ನಿರೀಕ್ಷೆ ಇದೆ. ಹಿಂಗಾಗಿ ಮಳೆ ಬಂದರೂ ಉಪಯೋಗ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+