ATM Robbery: ಎಟಿಎಂ ದರೋಡೆ ಮಾಡಲು ಬಂದ ಕಳ್ಳರು ಬೆಂಕಿ ಹಚ್ಚಿದರು!
ಕಳ್ಳರ ಒಂದು ಕಣ್ಣು ಸದಾ ಎಟಿಎಂ ಮೇಲೆ ಇದ್ದೇ ಇರುತ್ತೆ. ಸುಲಭವಾಗಿ ಹಣ ದರೋಡೆ ಮಾಡಲು, ಖದೀಮರಿಗೆ ಇರುವ ಏಕೈಕ ಅಸ್ತ್ರ ಎಟಿಎಂಗಳು. ಹೀಗಾಗಿ ಎಟಿಎಂನ ರಕ್ಷಣೆಗೆ ಸಿಸಿ ಕ್ಯಾಮೆರಾ ಸಹಿತ ಸಾಕಷ್ಟು ಭದ್ರತೆ ಒದಗಿಸಲಾಗಿರುತ್ತದೆ. ಇಷ್ಟಾದರೂ ಕಳ್ಳರು ಮಾತ್ರ ತಮ್ಮ ಕೃತ್ಯ ನಿಲ್ಲಿಸುತ್ತಿಲ್ಲ. ಹೀಗಿದ್ದಾಗ ಬೆಂಗಳೂರಿನ ಎಟಿಎಂ ಒಂದಕ್ಕೆ ನುಗ್ಗಿರುವ ಕಳ್ಳರ ಗ್ಯಾಂಗ್ ಬೆಂಕಿ ಹಚ್ಚಿಬಿಟ್ಟಿದೆ. ಯಾಕೆ ಗೊತ್ತಾ?
ಅದೆಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಎಟಿಎಂ ದರೋಡೆಗೆ ಕಳ್ಳರು ಮತ್ತೊಂದು ಪ್ಲ್ಯಾನ್‌ನ ಮಾಡೇ ಮಾಡುತ್ತಾರೆ. ಇದೇ ರೀತಿ ಇದೀಗ ಎಟಿಎಂ ಒಂದು ಕಳ್ಳರ ಕೃತ್ಯಕ್ಕೆ ಬಲಿಯಾಗಿದೆ. ಕಳ್ಳರು ದುಡ್ಡು ಕದಿಯದೇ ಓಡಿ ಹೋಗಿದ್ದರೂ, ಲಕ್ಷಾಂತರ ರೂಪಾಯಿ ನೋಟುಗಳನ್ನು ಹಾಳು ಮಾಡಿದ್ದಾರೆ. ಅರೆ ಕದಿಯದೇ ಇದ್ದರೂ ಅದು ಹೇಗೆ ನಷ್ಟ ಆಯ್ತು ಅಂತಾ ಇದ್ದೀರಾ? ಆ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ, ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಕಳ್ಳರ ಕಿತಾಪತಿ ಹೇಗಿತ್ತು ಗೊತ್ತಾ?
ಅಷ್ಟಕ್ಕೂ ಕಳ್ಳರ ಗ್ಯಾಂಗ್ ಎಟಿಎಂ ದರೋಡೆಗೆ ಬಂದ ಸಮಯದಲ್ಲಿ ಗ್ಯಾಸ್ ಕಟರ್ ಕೂಡ ತಂದಿದೆ. ಗ್ಯಾಸ್ ಕಟರ್‌ನ ಬಳಸಿ, ಎಟಿಎಂ ಯಂತ್ರವನ್ನ ಪೀಸ್ ಮಾಡೋಕೆ ಯತ್ನಿಸಿದ್ದಾರೆ. ಹೀಗಿದ್ದಾಗ ಎಟಿಎಂ ಪೀಸ್ ಪೀಸ್ ಮಾಡುವ ಯತ್ನ ಕೈಕೊಟ್ಟಿದೆ. ಕೊನೆಗೆ ಬಂದ ದಾರಿಗೆ ಸುಂಕವಿಲ್ಲ ಅಂತಾ ಕಳ್ಳರು ವಾಪಸ್ ಆಗುವಾಗಲೇ ಘೋರ ದುರಂತ ನಡೆದು ಹೋಗಿದ್ದು ಸಂಚಲನ ಸೃಷ್ಟಿಸಿದೆ. ಹಾಗಾದರೆ ಕಳ್ಳತನಕ್ಕೆ ಬಂದ ಈ ಕಳ್ಳರ ಗ್ಯಾಂಗ್, ಮಾಡಿದ ಮಹಾ ಕಾರ್ಯವಾದ್ರೂ ಏನು ಗೊತ್ತಾ?
ನೋಡ ನೋಡ್ತಿದ್ದಂತೆ ಬೆಂಕಿ ಬಿತ್ತು!
ಹೌದು, ಕಳ್ಳರು ಗ್ಯಾಸ್ ಕಟರ್ ಬಳಸಿ ಎಟಿಎಂ ಪೀಸ್ ಮಾಡೋಕೆ ನೋಡಿದ ಸಮಯಕ್ಕೆ ಅಲ್ಲಿ ಇದ್ದ ನೋಟಿನ ಕಂತೆಗೆ ಬೆಂಕಿ ತಗುಲಿದೆ. ದರೋಡೆಕೋರರು, ಗ್ಯಾಸ್ ಕಟರ್ ಬಳಸಿದ್ದರಿಂದ ಎಟಿಎಂ ಯಂತ್ರದ ಮೊದಲ ಟ್ರೇನಲ್ಲಿ ಇದ್ದ ಹಣಕ್ಕೂ ಬೆಂಕಿ ತಗುಲಿ ಅದರಲ್ಲಿದ್ದ ನೋಟುಗಳು ಸುಟ್ಟು ಕರಕಲಾಗಿವೆ. ನೆಲಮಂಗಲದ ಆಕ್ಸಿಸ್ ಬ್ಯಾಂಕ್‌ನಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಇನ್ನು ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಮತ್ತೊಂದು ಕಡೆ ಬ್ಯಾಂಕ್ ಸಿಬ್ಬಂದಿ ಶ್ರಮದಿಂದ, ಘೋರ ದುರಂತ ತಪ್ಪಿದೆಯಂತೆ, ಅದು ಹೇಗೆ ಗೊತ್ತಾ?
ಸಿಸಿ ಕ್ಯಾಮೆರಾ ನೋಡಿ ಅಲರ್ಟ್
ಅಷ್ಟಕ್ಕೂ ಕಳ್ಳರು ಎಟಿಎಂಗೆ ನುಗ್ಗಿ ದರೋಡೆಗೆ ಯತ್ನಿಸುವ ಸಮಯದಲ್ಲಿ ಸಿಸಿ ಕ್ಯಾಮೆರಾ ಮೂಲಕ ಬ್ಯಾಂಕ್ ಸಿಬ್ಬಂದಿ ಎಲ್ಲವನ್ನೂ ಗಮಿಸಿದ್ದಾರೆ. ಕೂಡಲೇ ಅಲರ್ಟ್ ಆಗಿ, ತಕ್ಷಣ ಕಟ್ಟಡದ ಮಾಲೀಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ಇನ್ನ ವಿಷಯ ತಿಳಿಯುತ್ತಿದ್ದಂತೆ ಕಟ್ಟಡದ ಮಾಲೀಕರು ತಕ್ಷಣ ಎಟಿಎಂಗೆ ಬಂದಿದ್ದಾರೆ. ಸಿಲಿಂಡರ್ & ಗ್ಯಾಸ್ ಕಟರ್‌ನ ಅಲ್ಲೇ ಬಿಟ್ಟು ಆಗ ಕಳ್ಳರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ಮೂಲಕ ದೊಡ್ಡ ದರೋಡೆ ಪ್ರಯತ್ನವೂ ತಪ್ಪಿ ಹೋದಂತಾಗಿದೆ.












Click it and Unblock the Notifications