ಧಮ್ಕಿ ಹಾಕುವ ಸಂಸ್ಕೃತಿ ಕಾಂಗ್ರೆಸ್‌ನವರದ್ದು, ಬಿಜೆಪಿಯದ್ದಲ್ಲ: ಅಶೋಕ್
ಬೆಂಗಳೂರು, ನವೆಂಬರ್ 22: ಧಮ್ಕಿ ಹಾಕುವ ಸಂಸ್ಕೃತಿ ಕಾಂಗ್ರೆಸ್‌ನವರದ್ದು, ಬಿಜೆಪಿಯವರದ್ದಲ್ಲ ಎಂದು ಆರ್ ಅಶೋಕ್ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.
ಧಮ್ಕಿ ಹಾಕುವ ಸಂಸ್ಕೃತಿ ಬಿಜೆಪಿಯದ್ದಲ್ಲ ಅದು ಕಾಂಗ್ರೆಸ್ಸಿನದ್ದು, ಪ್ರೀತಿ ವಿಶ್ವಾಸದಿಂದ ನಮ್ಮ ಪಕ್ಷಕ್ಕೆ ಜನ ಬರುತ್ತಿದ್ದಾರೆ.ಸಿದ್ದರಾಮಯ್ಯಗೆ ಯಶವಂತಪುರದ ಪರಿಚಯವಿಲ್ಲ. ಐದೋ ಹತ್ತೋ ವರ್ಷಕ್ಕೆ ಒಮ್ಮೆ ಬರ್ತಾರೆ ಅವರೇಗೇನು ಗೊತ್ತು ಯಶವಂತಪುರದ ಬಗ್ಗೆ ಎಂದು ಖಾರವಾಗಿ ನುಡಿದಿದ್ದಾರೆ.
ತಲಘಟ್ಟಪುರದ ಜೆಡಿಎಸ್ ಮುಖಂಡ ರೇವಣ್ಣ ಬಿಜೆಪಿಗೆ ಸ್ವಇಚ್ಛೆಯಿಂದ ಸೇರಿದ್ದಾರೆ,ಅವರನ್ನ ನಾವೂ ಬಲವಂತವಾಗಿ ಸೇರಿಸಿಕೊಂಡಿದ್ದೇವೆ ಅಂತಾ ಆರೋಪ ಮಾಡುತ್ತಿದ್ದಾರೆ, ಅದೆಲ್ಲಾ ಸುಳ್ಳು ಅವರೇ ಇಲ್ಲೇ ಇದ್ದಾರೆ. ನಾವು ಬಲವಂತದಿಂದ ಬಿಜೆಪಿಗೆ ಸೇರಿಸಿಕೊಂಡಿದ್ದಲ್ಲ ಎಂದು ಅಶೋಕ್ ಸ್ಪಷ್ಟನೆ ನೀಡಿದ್ದಾರೆ.

ಸಿದ್ದರಾಮಯ್ಯ ಅವರಿಗೆ ದೂರು ಕೊಡೋದು ಮಾತ್ರ ಗೊತ್ತು. ಅವರ ಜೊತೆಗೆ ಯಾರು ಪ್ರಚಾರಕ್ಕೆ ಬರುತ್ತಿಲ್ಲ ಎಂದು ಮೊದಲು ಹೈಕಮಾಂಡ್‌ಗೆ ದೂರು ನೀಡಲಿ. ಅವರ ನಾಯಕರೇ ಬಿಜೆಪಿಗೆ ಬರುವುದಕ್ಕಾಗಿ ಸಭೆಗಳನ್ನು ಂಆಡಿದ್ದಾರೆ. ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಸದಸ್ಯರು ಇನ್ನೊಂದು ವಾರದಲ್ಲಿ ಬಿಜೆಪಿ ಸೇರುತ್ತಾರೆ ಎಂದು ತಿಳಿಸಿದ್ದಾರೆ.












Click it and Unblock the Notifications