ದೇವಿಶ್ರೀ ಗುರೂಜಿಗೆ ಜಾಮೀನು ಮಂಜೂರು

ಬೆಂಗಳೂರು, ಏ. 30 : ಜ್ಯೋತಿಷ್ಯಾಲಯದ ವ್ಯವಸ್ಥಾಪಕ ಉದಯ್‌ ಹಾಗೂ ಕಾರು ಚಾಲಕ ವಸಂತ್‌ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ದೇವಿಶ್ರಿ ಗುರೂಜಿ ಅವರಿಗೆ 6ನೇ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಪೊಲೀಸರು ತಮಿಳುನಾಡಿನ ಧರ್ಮಪುರಿಯಲ್ಲಿ ಮಂಗಳವಾರ ರಾತ್ರಿ ಕೊಲೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರೂಜಿಯನ್ನು ಬಂಧಿಸಿದ್ದರು.

ಹಿಂದಿನ ಸುದ್ದಿ : ತಮ್ಮ ಲೈಂಗಿಕ ಹಗರಣದ ವಿಡಿಯೋ ಪ್ರಸಾರವಾಗುತ್ತಿದ್ದಂತೆ ತಲೆ ಮರಿಸಿಕೊಂಡಿದ್ದ ದೇವಿಶ್ರೀ ಗೂರೂಜಿಯನ್ನು ಕರ್ನಾಟಕದ ಪೊಲೀಸರು ತಮಿಳುನಾಡಿನ ಧರ್ಮಪುರಿಯಲ್ಲಿ ಮಂಗಳವಾರ ರಾತ್ರಿ ಬಂಧಿಸಿದ್ದಾರೆ. ಬುಧವಾರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ.

ಮಹಿಳೆಯೊಬ್ಬರೊಂದಿಗೆ ರಾಸಲೀಲೆಯಾಡುತ್ತಿರುವ ವಿಡಿಯೋ ಮೂರು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಪ್ರಸಾರವಾದ ತಕ್ಷಣ, ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೆ ಹೊಸಹಳ್ಳಿ ಎಂಬ ಗ್ರಾಮದ ನಿವಾಸಿಯಾಗಿರುವ ರಾಮಸ್ವಾಮಿ ದೇವಿಶ್ರೀ ನಾಪತ್ತೆಯಾಗಿದ್ದರು. ದೇವಿಶ್ರೀ ಗುರೂಜಿಯ ಜ್ಯೋತಿಷ್ಯಾಲಯದ ವ್ಯವಸ್ಥಾಪಕರಾಗಿದ್ದ ಉದಯ್‌ ಹಾಗೂ ಚಾಲಕರಾಗಿದ್ದ ವಸಂತ್‌ ಗುರೂಜಿ ವಿರುದ್ಧ ಕೊಲೆ ಬೆದರಿಕೆ ದೂರು ನೀಡಿದ್ದರು. [ದೇವಿಶ್ರೀ ರಾಸಲೀಲೆ ಬಹಿರಂಗ]

Devishree Guruji

ದೂರು ದಾಖಲಿಸಿಕೊಂಡು ಗುರೂಜಿಗಾಗಿ ಹುಡುಕಾಟ ನಡೆಸುತ್ತಿದ್ದ ಬೆಂಗಳೂರಿನ ಎಚ್ಎಸ್ಆರ್ ಲೇಔಟ್‌ ಠಾಣೆ ಪೊಲೀಸರು ಮಂಗಳವಾರ ಧರ್ಮಪುರಿಯಲ್ಲಿ ಗುರೂಜಿಯನ್ನು ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದಾರೆ. ಬುಧವಾರ ಬೆಳಗ್ಗೆ ಗುರೂಜಿ ಆರೋಗ್ಯ ಪರೀಕ್ಷೆ ನಡೆಸುತ್ತಿದ್ದು, 12 ಗಂಟೆ ಸುಮಾರಿಗೆ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.

ಎಚ್ಎಸ್ಆರ್ ಲೇಔಟ್‌ ನಲ್ಲಿ ತಮ್ಮ ಕಚೇರಿ ನಡೆಸುತ್ತಿದ್ದ ದೇವಿಶ್ರೀ ಗುರೂಜಿ ಅಲ್ಲಿ ಮಹಿಳೆಯೊಬ್ಬರೊಬ್ಬರೊಂದಿಗೆ ರಾಸಲೀಲೆಯಾಡುತ್ತಿರುವ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ವಿಡಿಯೋವನ್ನು ಮಾಧ್ಯಮಗಳಿಗೆ ನೀಡಿದ ಉದಯ್‌ ಹಾಗೂ ವಸಂತ್‌ ಅವರಿಗೆ ಗುರೂಜಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ದೇವಿಶ್ರೀ ಗುರೂಜಿ ನಾಪತ್ತೆಯಾಗಿದ್ದರು. ಪ್ರಾಣ ಬೆದರಿಕೆ ದೂರಿನ ಅನ್ವಯ ಗುರೂಜಿಗಾಗಿ ಹುಡುಕಾಟ ನಡೆಸಿದ ಪೊಲೀಸರು ಧರ್ಮಪುರಿಯಲ್ಲಿ ಅವರನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+