ಸ್ನೇಹಿತ ಲಾಲೂ ಜೈಲಿಗೆ ಹೋಗಿದ್ದಕ್ಕೆ ದೇವೇಗೌಡ ವಿಷಾದ
ಬೆಂಗಳೂರು, ಡಿಸೆಂಬರ್ 23: ಮೇವು ಹಗರಣ ಪ್ರಕರಣದಲ್ಲಿ ಯಾವುದೇ ಕಾರ್ಪೊರೇಟ್ ಹೌಸ್‌ಗಳಿರಲಿಲ್ಲ ಹಾಗಾಗಿ ಲಾಲೂ ಪ್ರಸಾದ್ ಯಾದವ್ ಜೈಲಿಗೆ ಹೋಗಬೇಕಾಯಿತು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಹೇಳಿದರು.
ತಮ್ಮ ಹಳೆಯ ಗೆಳೆಯ ಲಾಲೂ ಪ್ರಸಾದ್ ಯಾದವ್ ಜೈಲು ಪಾಲಾದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಇದ್ದಿದ್ದರೆ ಲಾಲೂ ಬಚಾವಾಗುತ್ತಿದ್ದರೇನೊ ಎಂದು ಮಾರ್ಮಿಕವಾಗಿ ನುಡಿದರು.

ಪ್ರಾದೇಶಿಕ ಪಕ್ಷಗಳನ್ನು ರಾಷ್ಟ್ರೀಯ ಪಕ್ಷಗಳು ಅವಕಾಶಕ್ಕೆ ಮಾತ್ರ ಬಳಸಿಕೊಳ್ಳುವುದಕ್ಕೆ ಈ ಪ್ರಕರಣ ಉದಾಹರಣೆ ಎಂದ ದೇವೇಗೌಡರು ಲಾಲೂ ಪ್ರಸಾದ್ ಯಾದವ್ ಕಾಂಗ್ರೆಸ್ ಸರ್ಕಾರದಲ್ಲಿ 5 ವರ್ಷ ರೈಲ್ವೇ ಸಚಿವರಾಗಿದ್ದರು, ಆದರೆ ಈಗ ಜೈಲು ಪಾಲಾಗಿದ್ದಾರೆ ಎಂದರು.
ಯಾರನ್ನೂ ನೇರ ಹೊಣೆಗಾರರನ್ನಾಗಿ ಮಾಡದೇ ಮಾತನಾಡಿದ ದೇವೇಗೌಡ ಅವರು ಯಾವ ರಾಷ್ಟ್ರೀಯ ಪಕ್ಷಗಳೂ ಸ್ವಚ್ಛವಾಗಿಲ್ಲ, ಎಲ್ಲ ರಾಷ್ಟ್ರೀಯ ಪಕ್ಷಗಳೂ ಪ್ರಾದೇಶಿಕ ಪಕ್ಷಗಳನ್ನು ಬಳಸಿಕೊಂಡು ಬಿಸಾಡಿವೆ ಎಂದರು.












Click it and Unblock the Notifications