ಎರಡು ಸ್ಥಾನ ಉಳಿಸಿಕೊಳ್ಳಲಿ ಸಾಕು: ದೇವೇಗೌಡರಿಗೆ ಈಶ್ವರಪ್ಪ ಟಾಂಗ್
ಬೆಂಗಳೂರು, ಮಾರ್ಚ್ 20: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎರಡಂಕಿ ದಾಟುತ್ತದೆ, ಆದರೆ ನೀವು ನಿಮ್ಮ ಎರಡು ಕ್ಷೇತ್ರ ಉಳಿಸಿಕೊಳ್ಳುವ ಬಗ್ಗೆ ಯೋಚನೆ ಮಾಡಿ ಎಂದು ದೇವೇಗೌಡ ಅವರಿಗೆ ಈಶ್ವರಪ್ಪ ಟಾಂಗ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೇ ಬಿಜೆಪಿ 17 ಸ್ಥಾನ ಗೆದ್ದಿತ್ತು, ಕಾಂಗ್ರೆಸ್ 9 ಮತ್ತು ಜೆಡಿಎಸ್ 2 ಸ್ಥಾನ ಗೆದ್ದಿತ್ತು, ಇದನ್ನು ಎರಡೂ ಪಕ್ಷದ ಮುಖಂಡರೂ ಮರೆಯಬಾರದು ಎಂದು ಈಶ್ವರಪ್ಪ ಹೇಳಿದರು.
ಕಾಂಗ್ರೆಸ್-ಜೆಡಿಎಸ್ ನಾಯಕರು ಏನೇ ಹೇಳಿಕೊಳ್ಳಲಿ ಬಿಜೆಪಿಯು 20-25 ಸ್ಥಾನಗಳನ್ನು ಗೆಲ್ಲುವುದು ಖಾಯಂ, ಮೈತ್ರಿಯನ್ನು ಜನರು ಒಪ್ಪಿಲ್ಲ, ಅನೇಕ ಕಡೆ ಎರಡೂ ಪಕ್ಷದ ಮುಖಂಡರು ಬಡಿದಾಡಿಕೊಂಡಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.

8 ಕ್ಷೇತ್ರಗಳಲ್ಲಿ ಜೆಡಿಎಸ್, 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕರು ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಜೆಡಿಎಸ್‍ನವರು, ಜೆಡಿಎಸ್ ಅಭ್ಯರ್ಥಿಗಳನ್ನು ಕಾಂಗ್ರೆಸ್‍ನವರು ಸೋಲಿಸುತ್ತಾರೆ. ಫಲಿತಾಂಶದವರೆಗೆ ಕಾದು ನೋಡಿ ಎಂದರು.












Click it and Unblock the Notifications