Bengaluru: ಖಾಸಗಿ ಬಸ್‌ಗಳ ಲಗೇಜ್ ಜಾಗದಲ್ಲಿ ಮಲಗಿ ಪ್ರಯಾಣಿಕರ ಪ್ರಯಾಣ, ದಂಡ
ಬೆಂಗಳೂರು, ಅಕ್ಟೋಬರ್ 17: ಹಬ್ಬದ ಋತು ಆರಂಭವಾಗಿದ್ದು, ಜನರು, ಉದ್ಯೋಗಿಗಳು ತಮ್ಮ ಊರುಗಳಿಗೆ ತೆರಳಲು ಸಜ್ಜಾಗಿದ್ದಾರೆ. ಈ ಸಂದರ್ಭಗಳಲ್ಲಿ ಪ್ರಯಾಣದ ಟಿಕೆಟ್ ಹೆಚ್ಚಾಗುವುದು ಸರ್ವೆ ಸಾಮಾನ್ಯವಾಗಿದೆ. ಹೆಚ್ಚಿನ ಹಣ ಪಡೆದರೂ ಸಹಿತ ಸಾಲದೆಂಬಂತೆ ಬಸ್ ಲಗೇಜ್ ಸ್ಥಳದಲ್ಲಿ ಪ್ರಯಾಣಿಕರನ್ನು ಕರೆದೊಯ್ದ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ನಡೆದಿದೆ.
ಹೌದು, ಹೆಚ್ಚಿನ ಹಣ ಪಡೆಯುವ ದುರುದ್ದೇಶದಿಂದ ಖಾಸಗಿ ಬಸ್ ಸಿಬ್ಬಂದಿ ಲಗೇಜ್ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಕರನ್ನು ಕೂರಿಸಿದ್ದಾರೆ. ಈ ಮೂಲಕ ಸಂಚಾರ ನಿಯಮ ಉಲ್ಲಂಘಿಸಿ ದಂಡ ತೆತ್ತಿದ್ದಾರೆ.

ಹಬ್ಬದ ಅಂಗವಾಗಿ ಟಿಕೆಟ್ ದರ ಹೆಚ್ಚಿಸಿದ್ದರ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಅಧಿಕಾರಿಗಳು ದೇವನಹಳ್ಳಿ ಬಳಿ ಖಾಸಗಿ ಬಸ್‌ಗಳು ಮತ್ತು ವಿಮಾನ ನಿಲ್ದಾಣದ ಟೋಲ್ ಗೇಟ್‌ಗಳನ್ನು ಪರಿಶೀಲಿಸಿದರು.
ಈ ವೇಳೆ ಖಾಸಗಿ ಬಸ್ ನಿರ್ವಾಹಕರು ಲಗೇಜ್ ಕಂಪಾರ್ಟ್‌ಮೆಂಟ್‌ಗಳಲ್ಲಿ ಪ್ರಯಾಣಿಕರನ್ನು ಸಾಗಿಸುವ ಮೂಲಕ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುತ್ತಿದ್ದು ಪತ್ತೆಯಾಗಿದೆ. ಲಗೇಜ್ ಇಡುವ ಕಂಪಾರ್ಟ್‌ಮೆಂಟ್‌ಗಳಲ್ಲಿ ಸರಿಯಾಗಿ ಬೆಳಕು, ಗಾಳಿ ಬರುವುದಿಲ್ಲ. ಅಂತಹ ಸ್ಥಳದಲ್ಲಿ ಪ್ರಯಾಣಿಕರನ್ನು ಮಲಗಿಸಿದ ಘಟನೆಯ ವಿಡಿಯೋ ವೈರಲ್ ಆಗಿದೆ. ಹೈದರಾಬಾದ್‌ನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಬಸ್‌ಗಳಲ್ಲಿ ಈ ಘಟನೆ ನಡೆದಿದೆ.
ಟಿಕೆಟ್ ದರ ಪರಿಶೀಲನೆ
ಘಟನೆ ಬೆಳಕಿಗೆ ಬರುತ್ತಿದ್ದಂತೆ ಆರ್‌ಟಿಒ ಅಧಿಕಾರಿಗಳು ಆ ಬಸ್ ನಿರ್ವಾಹಕರು ಹಾಗೂ ಪ್ರಯಾಣಿಕರಿಗೆ ದಂಡ ವಿಧಿಸಿದ್ದಾರೆ. ಹೆಚ್ಚುವರಿ ಹಣವನ್ನು ಗಳಿಕೆ ಹೀಗೆ ಮಾಡಿದ್ದರ ಬಗ್ಗೆ ಬಸ್ ಸಿಬ್ಬಂದಿ ಬಾಯಿ ಬಿಟ್ಟಿದ್ದಾರೆ. ಅಲ್ಲದೇ ಹೈದರಾಬಾದ್ ನಿಂದ ಬರುತ್ತಿದ್ದ ಬಸ್ ಗಳಲ್ಲಿ ಪ್ರಯಾಣಿಕರಿಗೆ ನೀಡಲಾಗಿದ್ದ ಟಿಕೆಟ್‌ಗಳನ್ನು ಸಹ ಪರಿಶೀಲಿಸಲಾಯಿತು. ಹೆಚ್ಚುವರಿ ಪ್ರಯಾಣ ಶುಲ್ಕ ವಿಧಿಸಿದ್ದಕ್ಕೆ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು. ಆರ್‌ಟಿಒ ಅಧಿಕಾರಿ ಶ್ರೀನಿವಾಸಪ್ಪ ನೇತೃತ್ವದಲ್ಲಿ ತಪಾಸಣೆ ನಡೆದಿದೆ ಎಂದು ಎಂದು ಟಿವಿ ನೈನ್ ಕನ್ನಡ ವರದಿ ಮಾಡಿದೆ.












Click it and Unblock the Notifications