ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೂರು ನೀಡಿ ಹತಾಶನಾಗಿದ್ದ ಕೊನೆಗೆ ನ್ಯಾಯಮೂರ್ತಿಗಳಿಗೇ ಇರಿದ

By Manjunatha
|
Google Oneindia Kannada News

ಬೆಂಗಳೂರು, ಮಾರ್ಚ್‌ 07: ನ್ಯಾ.ವಿಶ್ವನಾಥ್ ಶೆಟ್ಟಿ ಅವರ ಕೊಲೆ ಪ್ರಯತ್ನದ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಮಾಹಿತಿ ನಿಡಿದ್ದು, ಆತ ಹತಾಶನಾಗಿ ನ್ಯಾಯಮೂರ್ತಿಗಳ ಮೇಲೆ ಹಲ್ಲೆ ನಡೆಸಿದ್ದಾನೆ ಎಂದಿದ್ದಾರೆ.

ತುಮಕೂರಿನ ತಿಪಟೂರಿನ ನಿವಾಸಿ, ರಾಜಸ್ಥಾನದ ಮೂಲದ ತೇಜ್‌ ರಾಜ್ ಬಡಗಿಯಾಗಿದ್ದು, ಪೀಠೋಪಕರಣಗಳ ಮಳಿಗೆ ಇಟ್ಟುಕೊಂಡಿದ್ದಾನೆ. ಆತ ಈ ವರೆಗೆ 15-17 ಅಧಿಕಾರಿಗಳ ಬಗ್ಗೆ ಲೋಕಾಯುಕ್ತಕ್ಕೆ ದೂರು ನಿಡಿದ್ದ ಆದರೆ ಯಾವ ಆರೋಪವೂ ಸಾಬೀತಾಗದ ಕಾರಣ ಆತನ ದೂರುಗಳೆಲ್ಲಾ ವಜಾಗೊಂಡಿದ್ದವು.

LIVE : ಚೂರಿ ಇರಿತ ಕೇಸು: ತನಿಖೆಗೆ 3 ಸದಸ್ಯರ FSL ತಂಡ ರಚನೆLIVE : ಚೂರಿ ಇರಿತ ಕೇಸು: ತನಿಖೆಗೆ 3 ಸದಸ್ಯರ FSL ತಂಡ ರಚನೆ

ಪೀಠೋಪಕರಣಗಳ ಸರಬರಾಜಿನ ಟೆಂಡರ್‌ ಪಡೆಯಲು ಪ್ರಯತ್ನ ಮಾಡುತ್ತಿದ್ದ ತೇಜ್‌ರಾಜ್ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ದೂರು ನೀಡುತ್ತಲೇ ಇದ್ದ, ಅಷ್ಟೆ ಅಲ್ಲದೆ ಪೀಠೋಪಕರಣಗಳ ಗುತ್ತಿಗೆದಾರರ ಮೇಲೆ ಸಹ ದೂರುಗಳನ್ನು ನೀಡಿದ್ದ ಆದರೂ ಸಹಿತ ಆತನಿಗೆ ಟೆಂಡರ್‌ ಸಿಕ್ಕಿರಲಿಲ್ಲ ಹಾಗಾಗಿ ಆತ ಹತಾಶನಾಗಿದ್ದ ಎಂದು ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಹೇಳಿದ್ದಾರೆ.

Desperated Tejraj stubbed judge Vishwanath Shetty

ಇತ್ತ ಆರೋಪಿ ತೇಜ್ ರಾಜ್ ಶರ್ಮನ ವಿಚಾರಣೆಯನ್ನು ಡಿಸಿಪಿ ಚಂದ್ರಗುಪ್ತ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಟಿ.ಸುನೀಲ್ ಕುಮಾರ್ ಅವರು ಹೇಳಿದ್ದು, ಇನ್ನಷ್ಟು ಮಾಹಿತಿ ಕಲೆ ಹಾಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಯಾರೀತ ತೇಜ್ ರಾಜ್ ಶರ್ಮ, ಹತಾಶೆಗೊಂಡ ದೂರುದಾರ?ಯಾರೀತ ತೇಜ್ ರಾಜ್ ಶರ್ಮ, ಹತಾಶೆಗೊಂಡ ದೂರುದಾರ?

English summary
Tumkur resident Tej Raj who is given many complaints against some officers,. But his complaints were not proven so Tejraj become desperate and stubbed Lokayukta judge Vishwanath Shetty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X